ಬಿಗ್ ಬ್ರೇಕಿಂಗ್: ಮಂಡ್ಯ ಅಕಾಡಕ್ಕೆ ರಾಹುಲ್, ಸುಮಲತಾ ಗೆಲುವು ಖಚಿತ??

ಬಿಗ್ ಬ್ರೇಕಿಂಗ್: ಮಂಡ್ಯ ಅಕಾಡಕ್ಕೆ ರಾಹುಲ್, ಸುಮಲತಾ ಗೆಲುವು ಖಚಿತ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೆ ಮಂಡ್ಯ ಜಿಲ್ಲೆಗೆ ಇನ್ನಿಲ್ಲದ ಕುತೂಹಲವನ್ನು ಕೆರಳಿಸುತ್ತದೆ. ರಾಜ್ಯದ ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕನ್ನಡಿಗರ ಪ್ರೀತಿಯ ಅಂಬರೀಶ್ ರವರ ಧರ್ಮಪತ್ನಿ ಸುಮಲತಾ ಅಂಬರೀಶ್ ರವರು ಹಾಗೂ ಮುಖ್ಯಮಂತ್ರಿಗಳಾದ ಪುತ್ರನಾದ ನಿಖಿಲ್ ಕುಮಾರಸ್ವಾಮಿ ಅವರು ಪರಸ್ಪರ ಎದುರಾಳಿಗಳಾಗಿದ್ದಾರೆ. ಇಡೀ ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದರು ಸಹ ಜೆಡಿಎಸ್ ಪಕ್ಷಕ್ಕೆ ಸೋಲುವ ಭೀತಿ ಎದುರಾಗಿದೆ.  ಪುತ್ರನನ್ನು ಗೆಲ್ಲಿಸಲು ಖುದ್ದು ಮುಖ್ಯಮಂತ್ರಿಗಳೇ ಅಕಾಡದಲ್ಲಿ ಇಳಿದಿದ್ದಾರೆ, ಇದರ ಜೊತೆಗೆ ೫೦ ಕ್ಕೂ ಹೆಚ್ಚು ಶಾಸಕರು, ಮಾಜಿ ಮುಖ್ಯ ಮಂತ್ರಿಗಳು, ಹಲವಾರು ಸಚಿವರು ಇನ್ನಿಲ್ಲದ ಸರ್ಕಸ್ ಗಳನ್ನೂ ಮಾಡಿ ನಿಖಿಲ್  ಕುಮಾರಸ್ವಾಮಿ ರವರನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದ ಮಂಡ್ಯ ಜಿಲ್ಲೆಯ ನಾಯಕರು ತಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ತೊಡೆ ತಟ್ಟಿದ್ದಾರೆ, ಈಗಾಗಲೇ ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎನಿಸಿಕೊಂಡಿದ್ದ ಡಿಕೆ ಶಿವಕುಮಾರ್ ರವರು ನಡೆಸಿದ ಎಲ್ಲಾ ಸಂಧಾನ ಸಭೆಗಳು ವಿಫಲವಾಗಿವೆ. ಏನೇ ಆದರೂ ನಾವು ಸುಮಲತಾ ಪರವಾಗಿ ಪ್ರಚಾರ ಮಾಡುತ್ತೇವೆ ಹಾಗೂ ಮತ ಚಲಾಯಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಪಟ್ಟು ಹಿಡಿದು ಕೂತಿದ್ದಾರೆ. ಇದೀಗ ಮಂಡ್ಯ ಲೋಕಸಭಾ ಚುನಾವಣೆ ಮತ್ತಷ್ಟು ರಂಗೇರಿದ್ದು, ಎಂದಿನಂತೆ ವಿಚಾರದಲ್ಲಿ ನರೇಂದ್ರ ಮೋದಿ ಭಕ್ತರು ಮೂಗು ತೂರಿಸಿ ಸುಮಲತಾ ರವರ ಗೆಲುವು ಖಚಿತ ಎಂದು ಹೇಳತೊಡಗಿದ್ದಾರೆ ಯಾಕೆ ಗೊತ್ತಾ? ತಿಳಿಯಲು ಒಮ್ಮೆ ಓದಿ.

ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ರವರ ಪರವಾಗಿ ಮತ ಕೇಳಲು ಸ್ವತಃ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ರಾಹುಲ್ ಗಾಂಧಿ ಅವರು ಬರಲಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.  ಸ್ವತಹ ರಾಹುಲ್ ಗಾಂಧಿರವರನ್ನು ಕರೆ ತಂದು ಪುತ್ರನ ಪರವಾಗಿ ಪ್ರಚಾರ ಮಾಡಲು ಕುಮಾರಸ್ವಾಮಿ ರವರು ನಿರ್ಧರಿಸಿದ್ದಾರೆ, ಇದಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದು ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದಾರೆ. ಇದನ್ನು ಕೇಳಿದ ತಕ್ಷಣ ಸುಮಲತಾ ರವರ ಬೆಂಬಲಿಗರಲ್ಲಿ ಇನ್ನಿಲ್ಲದ ಹುಮ್ಮಸ್ಸು ಮೂಡಿದೆ ಯಾಕೆ ಗೊತ್ತಾ? ರಾಹುಲ್ ಗಾಂಧಿ ಅವರು ಇದುವರೆಗೂ ಕರ್ನಾಟಕದಲ್ಲಿ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲಿಯೂ ವಿರೋಧಿಗಳು ಗೆದ್ದು ಬೀಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ರವರು ಪಕ್ಷದ ಪರ ಮತಯಾಚಿಸಿದರು ಆದರೆ ಪ್ರಚಾರ ಮಾಡಿದ ಯಾವ ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಲಿಲ್ಲ. ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು, ಆದರೆ ಗೆಲುವು ಮಾತ್ರ ಕಾಣಲಿಲ್ಲ ಇದನ್ನೇ ಮುಂದಿಟ್ಟುಕೊಂಡ ನಮೋ ಭಕ್ತರು ಹಾಗೂ ಸುಮಲತಾ ಬೆಂಬಲಿಗರು ರಾಹುಲ್ ಗಾಂಧಿ ರವರು ಅಖಾಡಕ್ಕೆ ಇಳಿದ ತಕ್ಷಣ ಗೆಲುವು ನಮ್ಮದೇ ಎಂದು ಸಂಭ್ರಮಿಸಿ ತೊಡಗಿದ್ದಾರೆ. ರಾಹುಲ್ ಗಾಂಧಿ ರವರ ಮಾತು ಕೇಳಿದ ಯಾವ ಒಬ್ಬರು ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬುದು ನಮೋ ಭಕ್ತರ ವಾದ.