ಬಿಗ್ ನ್ಯೂಸ್:ಮೋದಿ ಭದ್ರಕೋಟೆಯಲ್ಲಿ ಸ್ಪರ್ದಿಸಿ ಮೊದಲ ಚುನಾವಣೆಯಲ್ಲಿಯೇ ಸೋಲನ್ನು ಕಾಣಲು ಸಿದ್ದರಾದರೇ ಪ್ರಿಯಾಂಕಾ ವಾದ್ರಾ?

  • 568
    Shares

ರಾಹುಲ್ ಗಾಂಧಿ ರವರ ನಾಯಕತ್ವವನ್ನು ಸುಧಾರಿಸಲು ಸೋನಿಯಾ ಗಾಂಧಿ ಅವರು ತಮ್ಮ ಬಳಿ ಇದ್ದ ಕೊನೆಯ ಅಸ್ತ್ರವಾದ ಪ್ರಿಯಾಂಕ ವಾಧ್ರ ರವರನ್ನು ಇತ್ತೀಚೆಗೆ ಚುನಾವಣೆ ಅಕಾಡಕ್ಕೆ ಇಳಿಸಿದ್ದರು. ಮೊದಲು ಕೇವಲ ಚುನಾವಣಾ ಪ್ರಚಾರಕಷ್ಟೇ ಪ್ರಿಯಾಂಕಾ ವಾದ್ರಾರ ರವರು ಸೀಮಿತರಾಗಿರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಾರ್ಯಕರ್ತರು ಪ್ರಿಯಾಂಕಾ ವಾದ್ರಾರವರನ್ನು ಚುನಾವಣಾ ಅಖಾಡಕ್ಕೆ ಇಳಿಯುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಪ್ರಿಯಾಂಕಾ ವಾದ್ರಾ ರವರು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ ಹಾಗೂ ಮೂಲಗಳ ಪ್ರಕಾರ ನೇರವಾಗಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರನ್ನು ಎದುರುಹಾಕಿಕೊಳ್ಳುವ ಸಾಧ್ಯತೆಗಳಿವೆ.

ಮೊದಲಿನಿಂದಲೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದ ಪ್ರಿಯಾಂಕಾ ವಾದ್ರಾ ರವರು ಚುನಾವಣೆಯ ಸ್ಪರ್ಧೆಯ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ ಆದರೆ ಇದೀಗ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ನರೇಂದ್ರ ಮೋದಿ ಅವರನ್ನು ವಾರಣಾಸಿಯಲ್ಲಿ ಸೋಲಿಸುವುದು ಪ್ರಿಯಾಂಕ ವಾದ್ರಾ ಅವರ ಗುರಿಯಾಗಿದೆ ಎಂಬುದು ತಿಳಿದು ಬಂದಿದೆ. ಆದರೆ ಕಳೆದ ಬಾರಿ ಕೇವಲ ನರೇಂದ್ರ ಮೋದಿ ಅವರ ಬಗ್ಗೆ ತಿಳಿದಿದ್ದ ಜನ ಮೋದಿ ಅವರನ್ನು ಮೂರು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದರು. ಇದರಿಂದ ಪ್ರಿಯಾಂಕಾ ವಾದ್ರಾ ರವರು ಸ್ಪರ್ಧಿಸಿದರೆ ನರೇಂದ್ರ ಮೋದಿ ರವರ ಮುಂದೆ ಹೀನಾಯವಾಗಿ ಸೋಲುವುದು ಖಚಿತವಾಗಲಿದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

ಇನ್ನು  ವಾರಣಾಸಿ ಹಿಂದೆಂದೂ ಕಾಣದಂತಹ ಅಭಿವೃದ್ಧಿಯನ್ನು ಕೇವಲ ಐದು ವರ್ಷಗಳಲ್ಲಿ ಕಂಡಿದೆ, ಇಂತಹ ಅಭಿವೃದ್ಧಿಯನ್ನು ಕಾಣುತ್ತಿರುವ ವಾರಣಾಸಿಯು ನರೇಂದ್ರ ಮೋದಿ ರವರ ಭದ್ರ ಕೋಟೆಯಾಗಿದೆ ಎಂದರೆ ತಪ್ಪಾಗಲಾರದು ಏಕೆಂದರೆ ಕಳೆದ 60 ವರ್ಷಗಳಿಂದ ನಡೆಯದ  ಅಭಿವೃದ್ಧಿ ಕಾತಯಗಳನ್ನು ಕೇವಲ ಐದು ವರ್ಷಗಳಲ್ಲಿ ನರೇಂದ್ರ ಮೋದಿರವರು ಮಾಡಿ ತೋರಿಸಿದ್ದಾರೆ. ಇನ್ನು ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದೆ ಆದ ಕಾರಣದಿಂದ ಪ್ರಿಯಾಂಕ ಗಾಂಧಿ ಅವರು ಈ ಧೈರ್ಯ ಮಾಡುತ್ತಾರೆಯೇ ಎಂಬ ಅನುಮಾನ ಸಹ ರಾಜಕೀಯ ಪಂಡಿತರ ತಲೆಯಲ್ಲಿ ಇದೆ. ಆದರೆ ಪ್ರಿಯಾಂಕಾ ವಾದ್ರಾರವರು ಮಾತ್ರ ಸ್ಪರ್ಧೆ ಗೆ ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಒಟ್ಟಿನಲ್ಲಿ ಒಂದು ವೇಳೆ ಅದೇ ನಡೆದಲ್ಲಿ v ಮತ್ತಷ್ಟು ಕುತೂಹಲವನ್ನು ಕೆರಳಿಸಲಿದೆ, ಕಳೆದ ಮಾರ್ಚ್ ತಿಂಗಳಲ್ಲಿ ಪ್ರಯಾಗ್ ರಾಜನಿಂದ ವಾರಣಾಸಿ ವರೆಗೆ  ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರಿಯಾಂಕಾ ವಾದ್ರಾರ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ್ದರು ಅದರ ಉದ್ದೇಶವೇ ಈ ಸ್ಪರ್ಧೆ ಎನ್ನಲಾಗುತ್ತಿದೆ . ಇನ್ನು ಪಕ್ಷದ ಹಿರಿಯ ನಾಯಕರು ಸಹ ಪ್ರಿಯಾಂಕಾ ಗಾಂಧಿ ಅವರನ್ನು ವಾರಣಾಸಿಯಿಂದ ಕಣಕ್ಕಿಳಿಸಲು ನಿರ್ಧಾರ ಮಾಡಿ ಕೇವಲ ರಾಹುಲ್ ರವರ ಗ್ರೀನ್  ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

Facebook Comments

Post Author: RAVI