ಮಧು ಬಂಗಾರಪ್ಪ ರವರಿಗೆ ಕೈ ಕೊಟ್ಟ ದೋಸ್ತಿಗಳು, ಬಿ ವೈ ರಾಘವೇಂದ್ರ ರವರ ಗೆಲುವು ಮತ್ತಷ್ಟು ಸುಲಭ

ಮಧು ಬಂಗಾರಪ್ಪ ರವರಿಗೆ ಕೈ ಕೊಟ್ಟ ದೋಸ್ತಿಗಳು, ಬಿ ವೈ ರಾಘವೇಂದ್ರ ರವರ ಗೆಲುವು ಮತ್ತಷ್ಟು ಸುಲಭ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪನವರು ಪ್ರಭುತ್ವವನ್ನು ಸ್ಥಾಪಿಸಿಕೊಂಡು ಬಂದಿದ್ದಾರೆ. ಬಿಜೆಪಿ ಪಕ್ಷದ ಪ್ರಮುಖ ಭದ್ರ ಕೋಟೆಗಳಲ್ಲಿ ಒಂದಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಬಿಜೆಪಿ ಪಕ್ಷವು ಬಹಳ ಸುಲಭವಾಗಿ ಗೆದ್ದು ಬೀಗುತ್ತದೆ. ಕಳೆದ ಬಾರಿ ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿಯೂ ಸಹ ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ ರವರು ಗೆದ್ದು ಬೀಗಿದ್ದರು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರು ಸಹ ಬಿಜೆಪಿ ಪಕ್ಷದ ಗೆಲುವು ನಿಶ್ಚಿತ ಎಂಬುದು ರಾಜಕೀಯ ಪಂಡಿತರ ವಾದವಾಗಿತ್ತು.

ಕಳೆದ ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆಗಳೇ ಇಲ್ಲದ ಸಮಯದಲ್ಲಿ ದೋಸ್ತಿ ಪಕ್ಷಗಳು ಬಿ ವೈ ರಾಘವೇಂದ್ರ ಅವರನ್ನು ಸೋಲಿಸುವ ಕನಸು ಕಂಡು ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದರು, ಆದರೆ ಎರಡು ಪಕ್ಷಗಳು ಒಂದಾದರೂ ಸಹ ಯಡಿಯೂರಪ್ಪನವರ ವರ್ಚಸ್ಸಿನ ಮುಂದೆ ಸೋತು ಸುಣ್ಣವಾಗಿದ್ದವು. ಹಲವಾರು ಚುನಾವಣೆಗಳಿಂದ ಸತತವಾಗಿ ಸೋಲನ್ನು ಕಾಣುತ್ತಿರುವ ಮಧು ಬಂಗಾರಪ್ಪನವರ ಈ ಬಾರಿಯಾದರೂ ನನ್ನನ್ನು ಗೆಲ್ಲಿಸಿ ಎಂದು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ ಆದರೆ ಚುನಾವಣೆಗೂ ಮೊದಲೇ ಮಧು ಬಂಗಾರಪ್ಪ ನವರಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೈಕೊಟ್ಟಿದೆ. ಈ ಮೂಲಕ ಮತ್ತೊಮ್ಮೆ ಮಧು ಬಂಗಾರನಪ್ಪ ನವರು ಹರಕೆಯ ಕುರಿಯಾಗಿದ್ದರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ, ಯಾಕೆ ಗೊತ್ತಾ? ಸಂಪೂರ್ಣ ತಿಳಿಯಲು ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಧು ಬಂಗಾರಪ್ಪನವರು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕಳೆದ ಬಾರಿ ಚುನಾವಣೆಯಲ್ಲಿ ಹೇಳಿದ್ದರು ಆದರೆ ದೋಸ್ತಿಗಳು ಧೈರ್ಯ ತುಂಬಿ ಸ್ಪರ್ದಿಸುವಂತೆ ಮಾಡಿದ್ದರು ಈ ಬಾರಿ ಸಹ ನಾನು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಕೊಂಡರೆ ಡಿಕೆ ಶಿವಕುಮಾರ್ ಅವರನ್ನು ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಬೇಡಿಕೆಯನ್ನು ಮುಂದಿಟ್ಟಿದ್ದರು. ಸ್ಪರ್ಧೆ ಮಾಡುವವರೆಗೂ ದೋಸ್ತಿಗಳು ಮಧು ಬಂಗಾರಪ್ಪ ಹೇಳಿದ ಮಾತುಗಳಿಗೆ ಸರಿ ಸರಿ ಹೇಳಿ ಎಂದು ಕೊನೆಗೆ ಕೈ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ರವರ ಆಟ ನಡೆಯುವುದಿಲ್ಲ ಎಂದು ಎಲ್ಲರೂ ಮಾತನಾಡುತ್ತಿದ್ದರು ಸಹ ಮಧು ಬಂಗಾರಪ್ಪನವರು ಡಿ ಕೆ ಶಿವಕುಮಾರ್ ರವರನ್ನು ನಂಬಿ ಗೆಲ್ಲಿಸುತ್ತಾರೆ ಎಂದು ಮನವಿ ಮಾಡಿಕೊಂಡು ಕಣಕ್ಕೆ ಇಳಿದಿದ್ದರು.

ಇದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ  ಮಾಜಿ ಸಚಿವರಾಗಿರುವ ಕಿಮ್ಮನೆ ರತ್ನಾಕರ್ ಅವರಿಗೆ ವಹಿಸಲಾಗಿದೆ, ಈ ಸುದ್ದಿಯನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ರವರ ಘೋಷಣೆ ಮಾಡಿದ್ದಾರೆ. ಈ ಸುದ್ದಿ ಕೇಳಿದ ಮಧು ಬಂಗಾರಪ್ಪನವರ ಖಂಡಿತ ಶಾಕ್ ಆಗಿದ್ದಾರೆ ಯಾಕೆಂದರೆ ಚುನಾವಣೆಗೂ ಮುನ್ನ ನೀಡಿದ ಮಾತುಗಳನ್ನು ದೋಸ್ತಿ ಪಕ್ಷಗಳು ಮರೆತು ಹೋಗಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೂ ಮುನ್ನವೇ ಮಧು ಬಂಗಾರಪ್ಪ ನವರಿಗೆ ಶಾಕ್ ಎದುರಾದರೆ ಬಿ ವೈ ರಾಘವೇಂದ್ರ ರವರ ಗೆಲುವು ಮತ್ತಷ್ಟು ಸುಲಭವಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.