ಸುಮಲತಾರವರಿಗೆ ಮತ ಹಾಕುವಂತೆ ಮನವಿ ಮಾಡಿದ ದರ್ಶನ್ ಗೆ ಗಡ್ಡಪ್ಪನವರ ಉತ್ತರವೇನು ಗೊತ್ತಾ??

  • 1.4K
    Shares

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವ ದೊಂದಿಗೆ ಮುನ್ನುಗ್ಗುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಈಗಾಗಲೇ ಹಲವಾರು ಸಂಘಟನೆಗಳು ಪಕ್ಷಗಳು ಬೆಂಬಲ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇದೀಗ ಜೋಡೆತ್ತು ಗಳ ಅಬ್ಬರ ಸಹ ಜೋರಾಗಿದೆ ಸುಮಲತಾ ಅಂಬರೀಶ್ ರವರ ಪರವಾಗಿ ಖ್ಯಾತ ನಟರಾಗಿರುವ ದರ್ಶನ್ ಹಾಗೂ ಯಶ್ ರವರು ಪ್ರಚಾರ ಮಾಡುತ್ತಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಈ ನಾಯಕರು ಸುಮಲತಾ ರವರಿಗೆ ಆನೆ ಬಲ ವಿದ್ದಂತೆ ಎಂದರೆ ತಪ್ಪಾಗಲಾರದು. ಇದೇ ರೀತಿ ಪ್ರಚಾರ ಮಾಡುವ ಸಮಯದಲ್ಲಿ ನಟ ದರ್ಶನ್ ರವರು ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಗ್ರಾಮದಲ್ಲಿ ತಿಥಿ ಸಿನಿಮಾದ ಮೂಲಕ ಇಡೀ ಕರ್ನಾಟಕದಲ್ಲಿ ಹೆಸರು ಮಾಡಿದ ಗಡ್ಡಪ್ಪ ರವರ ಮನೆಗೆ ಹೋಗಿ ಸುಮಲತಾ ಅಂಬರೀಶ್ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಾರೆ.

ತದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗಡ್ಡಪ್ಪ ರವರು ದರ್ಶನ್ ರವರು ನನ್ನ ಬಳಿ ಬಂದು ಸುಮಲತಾ ರವರಿಗೆ ಮತ ಹಾಕಿ ಎಂದು ಹೇಳಿದ್ದಾರೆ, ಇಡೀ ಮಂಡ್ಯದ ಜನರು ಸುಮಲತಾ ರವರಿಗೆ ಮತ ಹಾಕಿ ಎಂದು ನಾನು ಮನವಿ ಮಾಡುತ್ತೇನೆ. ಅಂಬರೀಶ್ ರವರು  ಮಂಡ್ಯದ ಗಂಡು ಅವರ ಪತ್ನಿಗೆ ನಮ್ಮ ಮತ ಹಾಕಬೇಕು ನಾನು ಕೂಡ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ದರ್ಶನ್ ರವರು ಆರೋಗ್ಯವನ್ನು ವಿಚಾರಿಸಿದರು, ಸುತ್ತಮುತ್ತ ಹೆಚ್ಚು ಜನ ಇದ್ದ ಕಾರಣ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ ಆರೋಗ್ಯವಾಗಿರಿ ಎಂದು ಹೇಳಿ ಪ್ರಚಾರ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮಂಡ್ಯ ಲೋಖಾಸಭಾ ಕ್ಷೇತದಲ್ಲಿ ಸುಮಲತಾ ರವರ ಏಲ್ ದಿನೇ ದಿನೇ ಹೆಚ್ಚಾಗುತ್ತಿದೆ ಇದು ಹೀಗೆ ಮುನುಡಿವರೆದಲ್ಲಿ ಸುಮಲತಾ ರವರು ಮಂಡ್ಯ ಜಿಲ್ಲೆಯಲ್ಲಿ ಬಹಳ ಸುಲಭವಾಗಿ ಗೆದ್ದು ಬೀಗಲಿದ್ದಾರೆ.

Facebook Comments

Post Author: RAVI