ಸಿಎಂ ಬೆಂಬಲಿಗರಿಂದ ಬಡ ರೈತನ ಮೇಲೆ ಹಲ್ಲೆ, ನೋಡಿ ಸುಮ್ಮನಾದ ಸಿಎಂ

ಸಿಎಂ ಬೆಂಬಲಿಗರಿಂದ ಬಡ ರೈತನ ಮೇಲೆ ಹಲ್ಲೆ, ನೋಡಿ ಸುಮ್ಮನಾದ ಸಿಎಂ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೆಡಿಎಸ್ ಪಕ್ಷವು ತಮ್ಮದು ರೈತರ ಪಕ್ಷ ಹಾಗೂ ಮಣ್ಣಿನ ಮಕ್ಕಳ ಪಕ್ಷ ಎಂದು ಪದೇ ಪದೇ ಹೇಳಿಕೊಳ್ಳುತ್ತಾರೆ. ಅದರಲ್ಲಿಯೂ ಇತ್ತೀಚೆಗಷ್ಟೆ ಕುಮಾರಸ್ವಾಮಿ ರವರು ನಾನು ರೈತನ ಮಗ ಎಂದು ಇಡೀ ದೇಶವೇ ನನಗೆ ನನಗೆ ಬಿರುದು ಕೊಟ್ಟಿದೆ, ನಮ್ಮದು ರೈತ ಕುಟುಂಬ, ರೈತರ ಮಕ್ಕಳ ಪಕ್ಷ ಎಂದು  ಇಡೀ ದೇಶದ ಜನರು ನನಗೆ ಬಿರುದು ಕೊಟ್ಟಿದ್ದಾರೆ ಎಂದು ದರ್ಶನ್ ರವರ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಇನ್ನು ಮಗ ನಿಖಿಲ್ ರವರು ನಾಟಿ ಮಾಡುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಉದ್ದುದ್ದ ಭಾಷಣಗಳನ್ನು ಮಾಡುತ್ತಿರುತ್ತಾರೆ.

ಆದರೆ ಈಗ ಮಗನನ್ನು ಗೆಲ್ಲಿಸುವ  ಬರದಲ್ಲಿ ಕುಮಾರಸ್ವಾಮಿ ರವರ ರೈತನ ಮೇಲಿನ ನೈಜ ಪ್ರೀತಿ ಏನೆಂಬುದು ಸಾಭೀತಾಗಿದೆ. ಹೌದು ಇತ್ತೀಚೆಗೆ ಹಲವಾರು ವಿವಾದದ ಹೇಳಿಕೆಗಳಿಂದ ಸುದ್ದಿಯಾಗಿರುವ ಕುಮಾರಸ್ವಾಮಿ ಅವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಮಂಡ್ಯ ಜಿಲ್ಲೆಯಲ್ಲಿ ಹೇಗಾದರೂ ಮಾಡಿ ತನ್ನ ಪುತ್ರನನ್ನು ಗೆಲ್ಲಿಸಬೇಕು ಎಂದು ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವ ಕುಮಾರಸ್ವಾಮಿ ರವರಿಗೆ ಇದ್ದಕ್ಕಿದ್ದ ಹಾಗೆ ಮಂಡ್ಯ ಜಿಲ್ಲೆಯ ರೈತ ಎದುರಾಗುತ್ತಾನೆ, ಮದ್ದೂರು ತಾಲೂಕಿನ ಹಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿ ಗ್ರಾಮದ ರೈತ  ರವಿ ಎಂಬುವವರು ರೈತರ ಸಮಸ್ಯೆಯನ್ನು ಕುಮಾರಸ್ವಾಮಿ ರವರ ಮುಂದೆ ಇಡುತ್ತಾರೆ.

ನಾನು ಕಾರ್ಖಾನೆಗೆ ಕಬ್ಬು ಸಾಗಿಸಿ ಆರು ತಿಂಗಳಿಗೂ ಹೆಚ್ಚು ಕಾಲ ವಾಗಿದೆ, ಇನ್ನು ಹಣ ನನ್ನ ಕೈಗೆ ಸೇರಿಲ್ಲ, ನೀವು ಕಬ್ಬಿನ ದರವು ಸಹ ಇನ್ನು ನಿಗದಿ ಮಾಡಿಲ್ಲ, ಭತ್ತ ಖರೀದಿ ಕೇಂದ್ರವನ್ನು ಸಹ ತೆರೆದಿಲ್ಲ ಎಂದು ಕುಮಾರಸ್ವಾಮಿ ರವರ ಬಳಿ ಅಳಲು ತೋಡಿಕೊಂಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಸಹ ನೀವು ರೈತರ ಪರ ಎಂದು ಹೇಳಿಕೆ ನೀಡುತ್ತೀರಿ ರೈತರನ್ನು ರಕ್ಷಣೆ ಮಾಡಲು ಮೊದಲು ದಯವಿಟ್ಟು ಕಬ್ಬಿನ ದರವನ್ನು ನಿಗದಿ ಮಾಡಿ ಭತ್ತ ಖರೀದಿ ಕೇಂದ್ರವನ್ನು ತೆರೆಯಿರಿ ಎಂದು ಮನವಿ ಮಾಡಿಕೊಂಡರು. ಇನ್ನು ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು ಚುನಾವಣೆ ಮುಗಿದ ತಕ್ಷಣ ವ್ಯವಸ್ಥೆ ಮಾಡುವುದಾಗಿ ಹೇಳಿಕೆ ನೀಡಿದರು.

ಆದರೆ ಸ್ಥಳದಲ್ಲೇ ಇದ್ದ ಜೆಡಿಎಸ್ ಕಾರ್ಯಕರ್ತರು ರವಿ ರವರ ಮೇಲೆ ಮುಗಿಬಿದ್ದು ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ, ಆದರೆ ತನ್ನದೇ ಗ್ರಾಮದಲ್ಲಿದ್ದ ಕೆಲವು ಸ್ಥಳೀಯರು ರವಿ ಅವರ ಬೆಂಬಲಕ್ಕೆ ನಿಂತ ಕಾರಣ ಹಲ್ಲೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಹಲ್ಲೆ ಮಾಡುತ್ತಿರುವುದನ್ನು ಕುಮಾರಸ್ವಾಮಿ ರವರು ನೋಡಿದರೂ ಸಹ ಯಾವುದೇ ಪ್ರತಿಕ್ರಿಯೆ ನೀಡದೆ ಮುಂದಿನ ಗ್ರಾಮಕ್ಕೆ ತೆರಳಿರುವುದು ಬಾರಿ ವಿಷಾದನೀಯ ಸಂಗತಿ. ರೈತರ ಪಕ್ಷ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ರವರು ರೈತನ ಮೇಲೆ ಹಲ್ಲೆ ಮಾಡುವುದನ್ನು ಕಂಡು ಸಹ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ರೈತರ ಮಕ್ಕಳು ಯಾರು ಎಂಬುದನ್ನು ತಿಳಿಯುವ ಸಮಯ ಈಗ ಬಂದಿದೆ ಎಂದು ಕುಮಾರಸ್ವಾಮಿ ಅವರ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ.