ಟ್ರಂಪ್ ಗೆ ಶಾಕ್ ನೀಡಿ ನಂ ೧ ಪಟ್ಟಕ್ಕೆ ಏರಿದ ಮೋದಿ

ಟ್ರಂಪ್ ಗೆ ಶಾಕ್ ನೀಡಿ ನಂ ೧ ಪಟ್ಟಕ್ಕೆ ಏರಿದ ಮೋದಿ

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಬಂದಮೇಲೆ ವಿಶ್ವದ ಎಲ್ಲೆಡೆ ಭಾರತ ದೇಶವು ಜೋರಾಗಿ ಸಡ್ಡು ಮಾಡುತ್ತಿದೆ, ಪ್ರತಿಯೊಂದು ದೇಶಗಳು ಭಾರತದ ಜೊತೆ ಸ್ನೇಹದ ಜೊತೆ ವ್ಯಾಪಾರ ಸಂಭಂದಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ, ಅದಕ್ಕಾಗಿಯೇ ಅನಿವಾಸಿ ಭಾರತೀಯರು ಸಂಪೂರ್ಣವಾಗಿ ನರೇಂದ್ರ ಮೋದಿ ರವರ ಬೆಂಬಲಕ್ಕೆ ನಿಂತು ವಿಶ್ವದ ಎಲ್ಲೆಡೆಯಿಂದ ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಇನ್ನಿಲದ ಪ್ರಚಾರ ಹಾಗೂ ತಾವೇ ಬಂದು ಮತ ನೀಡಲು ನಿರ್ಧರಿಸಿದ್ದಾರೆ. ಇಷ್ಟೆಲ್ಲ ಅಲೆಯನ್ನು ಸೃಷ್ಟಿಸಿರುವ ನರೇಂದ್ರ ಮೋದಿ ರವರು ಇದೀಗ ಮತ್ತೊಮ್ಮೆ ವಿಶ್ವದ ಎಲ್ಲೆಡೆ ಸದ್ದು ಮಾಡಿದ್ದಾರೆ.ಮೊದಲಿಂದಲೂ ಸಾಮಾಜಿಕ ತಾಣಗಳನ್ನು ಸಮರ್ಥವಾಗಿ ಬಳಸಿ ಕೊಳ್ಳುತ್ತಿರುವ ನರೇಂದ್ರ ಮೋದಿ ರವರು ವಿಶ್ವದಲ್ಲಿಯೇ ಅತಿಹೆಚ್ಚು ಬೆಂಬಲಿಗರನ್ನು ಪಡೆದ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ ದೊಡ್ಡಣ್ಣನ ಎಂದೇ ಖ್ಯಾತಿ ಪಡೆದುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಮತ್ತು ವಿಶ್ವದ ಅತಿ ಸುಂದರ ಮಹಾರಾಣಿ ಎಂಬ ಹೆಗ್ಗಳಿಕೆಯ ಜೋರ್ಡಾನ್ ರಾಣಿ ರಾನಿಯಾ ಅಲ್ ಅಬ್ದುಲ್ಲಾ ರವರು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ. ಬರ್ಸನ್ ಕಾನ್ ವೊಲ್ಫ್ (BCW) ಸಂಸ್ಥೆಯ ಟ್ವಿಪ್ಲೋಮೆಸಿ ಅಧ್ಯಯನ ವರದಿಯಂತೆ ‘ವಿಶ್ವದ ದಿಗ್ಗಜ ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು’ ಯಾರು ಎಂಬುದರ ಅನ್ವ್ಯಯ ಸಮೀಕ್ಷೆಯನ್ನು ನಡೆಸಲಾಗಿತ್ತು. ಇದರ ಅನ್ವಯ ಮೋದಿ ಅವರ ಫೇಸ್​ಬುಕ್ ಪುಟಕ್ಕೆ 1.37 ಕೋಟಿ ಫಾಲೋವರ್ಸ್ ಇದ್ದಾರೆ. 4.35 ಕೋಟಿ ಲೈಕ್ಸ್ ಬಂದಿವೆ ಎಂದು ಬಿಸಿಡಬ್ಲು ಸಂವಹನ ಸಂಸ್ಥೆ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೆಚ್ಚು ಜನಪ್ರಿಯತೆ ಪಡೆದವರ ಪೈಕಿ ಎರಡನೇ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. ಅವರ ಅಧಿಕೃತ ಪೇಜ್​ಗೆ 2.3 ಕೋಟಿ ಲೈಕ್ಸ್ ಬಂದಿವೆ. ಮೂರನೇ ಸ್ಥಾನದಲ್ಲಿರುವ ಜೋರ್ಡಾನ್ ರಾಣಿ ರಾನಿಯಾಗೆ ಅವರ ಫೇಸ್​ಬುಕ್ ಪೇಜ್​ಗೆ 1.69 ಕೋಟಿ ಲೈಕ್ಸ್ ಸಿಕ್ಕಿದೆ.