ನಿಖಿಲ್ ಗೆ ಬಿಸಿ ಮುಟ್ಟಿಸಿದ ಡಿ ಬಾಸ್ ಅಭಿಮಾನಿಗಳು, ಕುಮಾರಸ್ವಾಮಿ ರವರಿಗೆ ಈಗ ತಿಳಿಯಿತೇ ಯಾರು ಡಿ ಬಾಸ್ ಎಂದು??

  • 1K
    Shares

ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ರವರು ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ರವರ ವಿರುದ್ಧ ನೀಡಿದ್ದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಯಾರು ಡಿ ಬಾಸ್ ಎಂದು ಪ್ರಶ್ನೆ ಮಾಡಿದ್ದ ಕುಮಾರಸ್ವಾಮಿ ಅವರನ್ನು ದರ್ಶನ್ ರವರ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು. ಯುವಕರ ನೆಚ್ಚಿನ ನಟನಾಗಿರುವ ದರ್ಶನ್ ರವರನ್ನು ಈ ರೀತಿ ಪ್ರಶ್ನೆ ಮಾಡಿದ ಕುಮಾರಸ್ವಾಮಿ ರವರ ವರ್ತನೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶವನ್ನು ಹೊರಹಾಕಿದರು. ಇದೀಗ ಮಂಡ್ಯ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಮುಂದೆ ಇಟ್ಟುಕೊಂಡಿರುವ ದರ್ಶನ್ ಅಭಿಮಾನಿಗಳು ಈಗ ತಿಳಿಯಿತೇ  ಯಾರು ಡಿ ಬಾಸ್ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಮಂಡ್ಯ ಜಿಲ್ಲೆಯಲ್ಲಿ ಭಾರೀ ಪೈಪೋಟಿಯನ್ನು ಎದುರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರು ಎಂದಿನಂತೆ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕೆ ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಪ್ರಚಾರ ವಾಹನಗಳಿಗೆ ದರ್ಶನ್ ಅಭಿಮಾನಿಗಳು ಎದುರಾಗಿದ್ದಾರೆ. ದರ್ಶನ್ ರವರ ಅಭಿಮಾನಿ ಬಳಗದ ಬಗ್ಗೆ ನಿಮಗೆ ಹೇಳಬೇಕಾದ ಅವಶ್ಯಕತೆ ಇಲ್ಲ ಎನ್ನಿಸುತ್ತದೆ, ಯುವಕರ ತಂಡ ನಿಖಿಲ್ ಕುಮಾರಸ್ವಾಮಿ ಅವರಿಗೆ ಎದುರಾದ ಕ್ಷಣ ದರ್ಶನ್ ರವರ ಘೋಷಣೆಗಳು ಮೊಳಗುತ್ತವೆ, ತದನಂತರ ಗೋ ಬ್ಯಾಕ್ ನಿಖಿಲ್ ಎಂದು ಘೋಷಣೆ ಗಳು ಮೊಳಗುತ್ತವೆ. ಪೊಲೀಸರು ಅಡ್ಡ ಬಂದರೂ ಸಹ ಜಗ್ಗದ ದರ್ಶನ್ ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿ ರವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

Facebook Comments

Post Author: RAVI