ಸಿಎಂ ವಿರುದ್ಧ ರೊಚ್ಚಿಗೆದ್ದ ಜನ- ಭಾರಿ ವಿವಾದ ಸೃಷ್ಟಿಸಿದ ಕುಮಾರಸ್ವಾಮಿ

ಸಿಎಂ ವಿರುದ್ಧ ರೊಚ್ಚಿಗೆದ್ದ ಜನ- ಭಾರಿ ವಿವಾದ ಸೃಷ್ಟಿಸಿದ ಕುಮಾರಸ್ವಾಮಿ

ಕುಮಾರಸ್ವಾಮಿ ರವರು ಇತ್ತೀಚೆಗೆ ಭಾರಿ ವಿವಾದಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಹಲವಾರು ಹೇಳಿಕೆಗಳ ಮೂಲಕ ಇಡೀ ರಾಜ್ಯದಲ್ಲಿ ವಿವಾದಗಳ ದೊಡ್ಡ ಅಲೆಯನ್ನು ಸೃಷ್ಟಿಸುತ್ತಿರುವ ಕುಮಾರಸ್ವಾಮಿ ಅವರು ಇದೀಗ ಮತ್ತೊಮ್ಮೆ ಸೈನಿಕರ ವಿಷಯದಲ್ಲಿ ಬಹಳ ದೊಡ್ಡ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಕುಮಾರಸ್ವಾಮಿ ರವರ ಹೇಳಿಕೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾನ್ಯ ಜನ ಸಿಎಂ ರವರ ವಿರುದ್ಧ ತಿರುಗಿಬಿದ್ದು ರೊಚ್ಚಿಗೆದ್ದಿದ್ದಾರೆ.

ನಮ್ಮ ಹೆಮ್ಮೆಯ ದೇಶದ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಾರೆ. ದೇಶದ ಮೇಲಿನ ಭಕ್ತಿಯನ್ನು ಮನದಲ್ಲಿ ಇಟ್ಟುಕೊಂಡು ಅವರು ತಮ್ಮ ಕುಟುಂಬ ಹಾಗೂ ಪ್ರಾಣವನ್ನು ಸಹ ಲೆಕ್ಕಿಸದೆ ದೇಶವನ್ನು ನೆರೆಹೊರೆಯ ಶತ್ರು ರಾಷ್ಟ್ರಗಳಿಂದ ಕಾಪಾಡಿ ಉಗ್ರರನ್ನು ಹೊಡೆದುರುಳಿಸಿ ತಾವು ಇದ್ದೇವೆ ಎಂಬ ಧೈರ್ಯದಿಂದ ಬರೋಬ್ಬರಿ 130 ಕೋಟಿ ಜನರನ್ನು ನೆಮ್ಮದಿಯಿಂದ ನಿದ್ರೆ ಮಾಡು ವಂತೆ ನಮ್ಮ ಸೈನಿಕರು ಕಾಯುತ್ತಾರೆ.

ಆದರೆ ಇಂದು ಕುಮಾರಸ್ವಾಮಿ ರವರು ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಯಾವ ಶ್ರೀಮಂತರ ಮಕ್ಕಳು ದೇಶದ ಗಡಿಗೆ ಹೋಗುವುದಿಲ್ಲ, ಬದಲಾಗಿ ಕೆಲಸವಿಲ್ಲದೆ ಎರಡು ಹೊತ್ತು ಊಟಕ್ಕೆ ಕಷ್ಟಪಡುವ ಯುವಕರು ಬೇರೆ ದಾರಿಯಿಲ್ಲದೆ ಭಾರತೀಯ ಸೇನೆ ಸೇರಿ ರಕ್ಷಣೆ ಮಾಡುತ್ತಾರೆ. ಆದರೆ ನರೇಂದ್ರ ಮೋದಿ ಅವರು ಇವರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಕೇವಲ ತಮ್ಮ ರಾಜಕೀಯ ಉದ್ದೇಶಕ್ಕಾಗಿ ದೇಶದ ಮೇಲಿನ ಭಕ್ತಿಯನ್ನು ಮನದಲ್ಲಿ ಇಟ್ಟುಕೊಂಡು ಸೇನೆ ಸೇರುವ ಸೈನಿಕರ ಬಗ್ಗೆ ಒಂದು ರಾಜ್ಯದ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಕುಮಾರಸ್ವಾಮಿ ರವರ ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ಕುಮಾರ ಸ್ವಾಮಿ ರವರನ್ನು ಕೆಲವರು ನಿಂದನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವಂತಹ ಮಾತನಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕೇವಲ ಒಂದು ಹೇಳಿಕೆಯ ಮೂಲಕ ಹಲವಾರು ದೇಶಭಕ್ತರ ಹಾಗೂ ಸೈನಿಕರ ಕೆಂಗಣ್ಣಿಗೆ ಕುಮಾರಸ್ವಾಮಿರವರ ಗುರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಆದರೂ ಸಹ ಸೇನೆಯನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಬಾರದು ಎಂದ ಕುಮಾರಸ್ವಾಮಿ ರವರು ಇಂದು ತಾವು ಸೇನೆಯನ್ನು ಟೀಕೆ ಮಾಡಿ ಅದನ್ನು ರಾಜಕೀಯ ಲಾಭವನ್ನು ಆಗಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎಂದು ಇನ್ನು ಕೆಲವರು ಆರೋಪ ಮಾಡಿದ್ದಾರೆ.