ಯೋಧನ ಮತ ಪಡೆದು ಕೊಂಡ ಮತ್ತೊಂದು ಬಿಜೆಪಿ ಅಭ್ಯರ್ಥಿ- ಕೇಸರಿ ಮಯದತ್ತ ಕರ್ನಾಟಕ

ಯೋಧನ ಮತ ಪಡೆದು ಕೊಂಡ ಮತ್ತೊಂದು ಬಿಜೆಪಿ ಅಭ್ಯರ್ಥಿ- ಕೇಸರಿ ಮಯದತ್ತ ಕರ್ನಾಟಕ

ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರತೊಡಗಿದೆ. ಅದರಲ್ಲಿಯೂ ಈಗಾಗಲೇ ಮತದಾನ ಮಾಡಿರುವ ಯೋಧರು ಯಾರಿಗೆ ಮತ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಬ್ಬರಂತೆ ಬಹಿರಂಗಪಡಿಸುತ್ತಾ ದೇಶ ರಕ್ಷಕ ನ ಒಲವು ಯಾವ ಪಕ್ಷದ ಕಡೆಯಿದೆ ಎಂಬುದನ್ನು ಸಾಬೀತು ಮಾಡಲು ಹೊರಟಿದ್ದಾರೆ. ಇಂತಹ ಸನ್ನಿವೇಶಗಳು ಇದು ಮೂರನೇ ಬಾರಿಗೆ ಹೊರಬೀಳುತ್ತವೆ. ಇದರಿಂದ ಬಿಜೆಪಿ ಪಕ್ದಲ್ಲಿ ಹೊಸ ಉಮ್ಮಸ್ಸು ಹುಟ್ಟಿಕೊಂಡರೆ ವಿರೋಧಗಳಲ್ಲಿ ಈಗಾಗಲೇ ನಡುಕ ಆರಂಭವಾಗಿದೆ.

ಮೊದಲಿಗೆ ಮಂಡ್ಯ ಜಿಲ್ಲೆಯ ಯೋಧ ಸುಮಲತಾ ರವರಿಗೆ ಮತ ನೀಡಿ ಫೋಟೋ ತೆಗೆದುಕೊಂಡು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಸುಮಲತಾ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ತದನಂತರ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಭಾರೀ ಗೆಲುವಿನ ಸೂಚನೆ ಕಾಣುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಮತ ನೀಡಿ ಬಹಿರಂಗಪಡಿಸಿ ನರೇಂದ್ರ ಮೋದಿ ಅವರ ಅಲೆ ಎಷ್ಟು ಜೋರಾಗಿ ಇದೆ ಎಂಬುದನ್ನು ಸಾಬೀತುಪಡಿಸಿದರು.

ಇದೀಗ ಇದೇ ಸಾಲಿಗೆ ಮತ್ತೊಬ್ಬ ಬಿಜೆಪಿ ನಾಯಕರು ಸೇರ್ಪಡೆಗೊಂಡಿದ್ದು, ಯೋಧ ತಾನು ಸೆಲೆಕ್ಟ್ ಮಾಡಿದ ಅಭ್ಯರ್ಥಿಯ ಪರ ಮತ ನೀಡಿ, ಮತಪತ್ರವನ್ನು ಬಹಿರಂಗಪಡಿಸಿದ್ದಾನೆ. ಆದರೆ ತನ್ನ ಹೆಸರನ್ನು ಬಹಿರಂಗಪಡಿಸದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಹೈ ವೋಲ್ಟೇಜ್  ಕ್ಷೇತ್ರಗಳಲ್ಲಿ ಒಂದಾಗಿರುವ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡು ಇದೀಗ ಕೇಸರಿಮಯವಾಗಿ ಬದಲಾಗುತ್ತಿರುವ ಹಾಸನ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಈಗಾಗಲೇ ಬಾರಿ ಜನ ಬೆಂಬಲದೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೋಲಿನ ರುಚಿ ತೋರಿಸುವ ಎಲ್ಲಾ ಸಾಧ್ಯತೆಗಳನ್ನು ಮುಂದೆ ಇಟ್ಟಿರುವ ಹಾಸನ ಬಿಜೆಪಿ ಪಕ್ಷದ ಅಭ್ಯರ್ಥಿ ಎ ಮಂಜು ರವರಿಗೆ ಯೋಧ ಮತನೀಡಿ ತನ್ನ ಮತಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿ ಬಾರಿ ತಲ್ಲಣವನ್ನು ಸೃಷ್ಟಿಸಿದ್ದಾರೆ. ಇದೀಗ ಈ ಮತಪತ್ರ ವೈರಲ್ ಆಗಿದ್ದು ಎ ಮಂಜುರವರು ಯೋಧನ ಶ್ರೀರಕ್ಷೆ ಪಡೆದುಕೊಂಡಿದ್ದಾರೆ. ಆದಕಾರಣ ಖಂಡಿತವಾಗಲೂ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಗೆದ್ದು ರಾರಾಜಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ಇದೇ ರೀತಿ ಘಟನೆಗಳು ಹಲವಾರು ಕಡೆ ನಡೆದಿದ್ದು ಎಲ್ಲಾ ದೇಶ ರಕ್ಷಕರು ಬಿಜೆಪಿ ಪಕ್ಷದ ಪರವಾಗಿ ಮತ ನೀಡಿ ನರೇಂದ್ರ ಮೋದಿ ಅವರಿಗೆ ಉಘೇ ಉಘೇ ಎಂದಿದ್ದಾರೆ.