ಭರ್ಜರಿ ಆರಂಭ ಪಡೆದ ಶೋಭಾ – ಮೋದಿ ಗೆ ದೇಶ ರಕ್ಷಕನ ಅಭಯ

ಭರ್ಜರಿ ಆರಂಭ ಪಡೆದ ಶೋಭಾ – ಮೋದಿ ಗೆ ದೇಶ ರಕ್ಷಕನ ಅಭಯ

ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎಲ್ಲರೂ ಕಾತರದಿಂದ ಕಾದು ಕುಳಿತಿದ್ದಾರೆ, ಪ್ರತಿಯೊಂದು ಮತಗಳು ಪ್ರತಿಯೊಂದು ಕ್ಷೇತ್ರಗಳಷ್ಟೇ ಮುಖ್ಯವಾಗಿವೆ. ನರೇಂದ್ರ ಮೋದಿ ರವರ ಅಲೆ ಸುನಾಮಿಯಾಗಿ ಪರಿವರ್ತನೆಗೊಂಡು ಮಹಾಮೈತ್ರಿಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡುತ್ತದೆಯೇ ಎಂಬುದನ್ನು ನೋಡಲು ಕೋಟ್ಯಂತರ ಜನರು ಕಾದು ಕುಳಿತ್ತಿದ್ದಾರೆ, ಇತ್ತ ವಿರೋಧ ಪಕ್ಷದ ನಾಯಕರು ನರೇಂದ್ರ ಮೋದಿ ರವರ ಗೆಲುವಿನ ಅಭಿಯಾನವನ್ನು ತಡೆ ಇಡಿದು ಅಧಿಕಾರದ ಗದ್ದುಗೆ ಏರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಇಷ್ಟೆಲ್ಲ ಕುತೂಹಲ ಮೂಡಿಸಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಹುಮತ ಪಡೆಯುವುದು ಈಗಾಗಲೇ ಹಲವಾರು ಸಮೀಕ್ಷೆಗಳಲ್ಲಿ ಹೊರಬಿದ್ದಿದೆ, ಆದರೂ ವಿರೋಧ ಪಕ್ಷಗಳು ತಮ್ಮ ಪ್ರಯತ್ನವನ್ನು ಮಾತ್ರ ಬಿಟ್ಟಿಲ್ಲ. ಇಷ್ಟೆಲ್ಲ ವಿದ್ಯಮಾನಗಳ ನಡುವೆ ಈಗಾಗಲೇ ಕೆಲವು ಅಭ್ಯರ್ಥಿಗಳು ಕೆಲವು ಮತಗಳಿಂದ ಮುಂದೆ ಇದ್ದಾರೆ, ಹೌದು ದೇಶಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕೆ ಇತ್ತು ಹೊರಡುವ ದೇಶದ ಯೋಧರು ಈಗಾಗಲೇ ಮತ ಚಲಾವಣೆ ಮಾಡಿದ್ದಾರೆ, ಚುನಾವಣೆಯ ದಿನ ಸಂಪೂರ್ಣ ಭದ್ರತೆಗಳಿಗಾಗಿ ಬೇರೆ ಬೇರೆ ಊರುಗಳಿಗೆ ತೆರಳುವ ಕಾರಣ ಯೋಧರಿಗೆ ಮತ ದಾನದ ಹಕ್ಕನ್ನು ಈಗಲೇ ನೀಡಲಾಗಿದೆ.

ಇತ್ತೀಚೆಗಷ್ಟೇ ಸುಮಲತಾ ರವರಿಗೆ ದೇಶ ಕಾಯುವ ಯೋಧ ಮತ ನೀಡಿ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅರಿಬಿಟ್ಟು ಸುಮಲತಾ ರವರಿಗೆ ಮಂಡ್ಯ ಜನ ಸಂಪೂರ್ಣ ಬೆಂಬಲ ನೀಡಿ ಗೆಲ್ಲಿಸಬೇಕು ಎಂದು ಕೇಳಿಕೊಂಡಿದ್ದನ್ನು ನಾವು ನೋಡಿದ್ದೀವಿ ಅದೇ ಸಾಲಿಗೆ ಇಂದು ಬಿಜೆಪಿ ಪಕ್ಷ ಫೈರ್ ಬ್ರಾಂಡ್ ಖ್ಯಾತಿಯ ಶೋಭಾ ಕರಂದ್ಲಾಜೆ ರವರು ಸೇರಿಕೊಂಡಿದ್ದಾರೆ.ಈಗಲೇ ದೋಸ್ತಿ ಅಭ್ಯರ್ಥಿಯ ಎದುರು ಬಾರಿ ಅಂತರದಲ್ಲಿ ಗೆಲುವು ದಾಖಲಿಸುವ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಶೋಭಾ ಕರಂದ್ಲಾಜೆ ರವರು ಈಗಾಗಲೇ ಒಂದು ಮತದಿಂದ ಮುನ್ನಡೆ ಪಡೆದುಕೊಂಡಿದ್ದಾರೆ.

ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿ ನರೇಂದ್ರ ಮೋದಿ ರವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನನಗೆ ಮತ ನೀಡಿ ಎಂದು ಚುನಾವಣೆಗೆ ಸಿದ್ಧರಾಗುತ್ತಿರುವ ಸಮಯದಲ್ಲಿ ಶೋಭಾ ಕರಂದ್ಲಾಜೆರಾವರಿಗೆ ಮತ್ತಷ್ಟು ಉಮ್ಮಸ್ಸು ತುಂಬಿದೆ ಈ ಯೋಧನ ಮತ ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣದಲ್ಲಿ ಯೋಧನ ಈ ಮತಪತ್ರ ಬಾರಿ ವೈರಲ್ ಆಗಿದ್ದು ೧ ಲಕ್ಷಕ್ಕೂ ಹೆಚ್ಚು ಶೇರ್ ಆಗಿದೆ. ಇದರಿಂದ ಮತ್ತಷ್ಟು ಉಮ್ಮಸ್ಸು ಪಡೆದುಕೊಂಡಿರುವ ನಮೋ ಭಕ್ತರು ದೇಶ ಕಾಯುವ ರಕ್ಷಣಾ ಬೆಂಬಲ ಮೋದಿ ರವರಿಗೆ ಇದೆ ಎಂದಾದರೆ ನರೇಂದ್ರ ಮೋದಿ ರವರನ್ನು ತಡೆಯಲ್ಲೂ ಯಾರೇ ಪ್ರಯತ್ನ ಪಟ್ಟರು ಆಗುವುದಿಲ್ಲ ಎಂದು ಸಂತೋಷದಲ್ಲಿ ಮುಳುಗಿದ್ದಾರೆ.