ಚೀನಾ ಪಾಕ್ ಗೆ ಮರ್ಮಾಘಾತ, ವಿಶ್ವಕ್ಕೆ ಆರ್ಥಿಕ ಗುರುವಾದ ಭಾರತ, ಮೋದಿ ಗೆ ಮತ್ತೊಂದು ಬೃಹತ್ ಗರಿ

ಚೀನಾ ಪಾಕ್ ಗೆ ಮರ್ಮಾಘಾತ, ವಿಶ್ವಕ್ಕೆ ಆರ್ಥಿಕ ಗುರುವಾದ ಭಾರತ, ಮೋದಿ ಗೆ ಮತ್ತೊಂದು ಬೃಹತ್ ಗರಿ

ನರೇಂದ್ರ ಮೋದಿ ರವರು ಅಧಿಕಾರದ ಗದ್ದುಗೆ ಏರಿದ ಮೇಲೆ ಭಾರತ ದೇಶವು ವಿಶ್ವ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಪಡೆದುಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ, ನೋಟ್ ಬ್ಯಾನ್ ನ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವ ಸಮಯದಲ್ಲಿ ಈಡೀ ವಿಶ್ವವೇ ಇಂದು ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾರೆ ನರೇಂದ್ರ ಮೋದಿ, ಈದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವು ಮತ್ತೊಮ್ಮೆ ಘರ್ಜಿಸಿದ್ದು, ಚೀನಾ ದೇಶ ತನ್ನ ಕಿರೀಟ ಎಂದು ಬೀಗುತ್ತಿದ್ದ ಬೃಹತ್ ಸ್ಥಾನವನ್ನು ಭಾರತ ಕಿತ್ತುಕೊಂಡು ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ.

ಹೌದು, ವಿಶ್ವಬ್ಯಾಂಕ್ ನ ವಲಸೆ ಹಾಗೂ ಅಭಿವೃದ್ಧಿ ವಿಭಾಗ ಪ್ರತಿ ವರ್ಷವೂ ಸಂಕ್ಷಿಪ್ತ ಅಂಕಿ ಅಂಶಗಳ ವರದಿಯ ಆಧಾರದಲ್ಲಿ, ಹಣ ಪಾವತಿ ಹಾಗೂ ವಿದೇಶಿ ಹೂಡಿಕೆದಾರರನ್ನು ಸೆಳೆಯುವ ಸಂಪೂರ್ಣ ಆಧಾರದ ಮೇಲೆ ದೇಶಗಳ ಸ್ಥಾನಮಾನವನ್ನು ನಿರ್ಧರಿಸುತಿತ್ತು, ನರೇಂದ್ರ ಮೋದಿ ರವರು ಅಧಿಕಾರಕ್ಕ ಬಂದಮೇಲೆ ಚೀನಾ ದೇಶವು ಆಟವು ನಡೆಯದೆ ೨ ವರ್ಷಗಳು ಆಗಿವೆ, ನರೇಂದ್ರ ಮೋದಿ ರವರ ರಾಜತಾಂತ್ರಿಕತೆಯೇ ನೆರವಿನಿಂದ ಭಾರತ ದೇಶದಲ್ಲಿ ವಿದೇಶಿ ಹಣ ಹೂಡಿಕೆ ಯಾಗಿ ದೇಶ ಆರ್ಥಿಕ ಸ್ಥಿತಿ ಬಹಳಷ್ಟು ಮೇಲೆ ಏರಿದೆ. ತಾನೇ ಎಲ್ಲ ಎಂದು ಬೀಗುತ್ತಿದ್ದ ಚೀನಾ ದೇಶವು ಹೇಗಾದರೂ ಮಾಡಿ ಈ ವರ್ಷವಾದರೂ ಭಾರತ ದೇಶವನ್ನು ಹಿಂದಿಕ್ಕಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡಿತ್ತು.


ಎಷ್ಟೋ ವಿವಿಧ ರೀತಿಯಲ್ಲಿ ತೆರಿಗೆಗಳನ್ನು ಸುಧಾರಿಸಿ ಕಂಪನಿಗಳ ಕಾಲಿಗೆ ಬಿದ್ದಿತ್ತು ಚೀನಾ ದೇಶ, ಆದರೆ ನರೇಂದ್ರ ಮೋದಿರವರ ಚಾಕ ಚಕ್ಯತೆ ಮುಂದೆ ಮತ್ತೊಮ್ಮೆ ಭಾರತ ಮುಂದೆ ಸೋತು ಸುಣ್ಣವಾಗಿದೆ.ಹೌದು, ವಿದೇಶಿ ಹೂಡಿಕೆದಾರ ರಾಷ್ಟ್ರದ ಅಗ್ರ ಸ್ಥಾನಮಾನವನ್ನು ಭಾರತ ದೇಶವು ಮತ್ತೊಮ್ಮೆ ತನ್ನಲ್ಲೇ ಉಳಿಸಿಕೊಂಡಿದೆ, ಕಳೆದ ವರ್ಷ ಬರೋಬ್ಬರಿ ೭೯ ಶತಕೋಟಿ ಡಾಲರ್ ಹಣವನ್ನು ವಿದೇಶಗಳಿಂದ ಪಡೆದು ಕೊಂಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಹರಿಬಿಟ್ಟಿರುವ ವಿಶ್ವ ಬ್ಯಾಂಕ್ ಅಗ್ರ ಅಗ್ರ ವಿದೇಶೀ ಹೂಡಿಕೆದಾರ ರಾಷ್ಟ್ರದ ಸ್ಥಾನಮಾನವನ್ನು ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಹೇಳಿದೆ. ಇದರಿಂದ ನರೇಂದ್ರ ಮೋದಿ ರವರ ಆಡಳಿತ ಆರ್ಥಿಕ ವ್ಯವಸ್ಥೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದು ಎಲ್ಲರಿಗೂ ತಿಳಿಯಲಿದೆ.

ಇನ್ನಿಲ್ಲದ ಸಾಹಸಗಳನ್ನು ಮಾಡಿದ ಚೀನಾ(67 ಶತಕೋಟಿ ಡಾಲರ್) ದೇಶವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೆಕ್ಸಿಕೊ(36 ಶತಕೋಟಿ ಡಾಲರ್), ಫಿಲಿಪೈನ್ಸ್(34 ಶತಕೋಟಿ ಡಾಲರ್) ಹಾಗೂ ಈಜಿಪ್ಟ್(29 ಶತಕೋಟಿ ಡಾಲರ್) ಸ್ಥಾನವನ್ನು ಪಡೆದುಕೊಂಡಿದೆ, ಇನ್ನು ನೆರೆಯ ಶತ್ರು ದೇಶವಾದ ಪಾಕಿಸ್ತಾನವು ಪ್ರತಿ ಪೈಸೆಗೂ ಅಲೆಯುತ್ತಿರುವ ಸಮಯದಲ್ಲಿ ಭಾರತದ ಈ ಬೆಳವಣಿಗೆ ಶತೃಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ನರೇದ್ರ ಮೋದಿ ರವರ ಈ ರಾಜತಾಂತ್ರಿಕೆಗೆ ವಿದೇಶಿಗರು ಮರುಗಾಗಿ ಭಾರತ ದೇಶದಲ್ಲಿ ಬಾರಿ ಹಣ ಹೂಡಿಕೆ ಮಾಡಿ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತಿದೆ.