ಬಿಜೆಪಿಗೆ ಆನೆಬಲ- ಮೋದಿ ಗೆ ಉಘೇ ಉಘೇ ಅಂದ ಸೇನಾಧಿಕಾರಿ,ಬಿಜೆಪಿ ಸೇರ್ಪಡೆ.

ಬಿಜೆಪಿಗೆ ಆನೆಬಲ- ಮೋದಿ ಗೆ ಉಘೇ ಉಘೇ ಅಂದ ಸೇನಾಧಿಕಾರಿ,ಬಿಜೆಪಿ ಸೇರ್ಪಡೆ.

ಮುಂದಿನ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷಗಳು ತಮ್ಮದೇ ಆದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೀವೆ. ಈ ಬಾರಿ ಪ್ರತಿಯೊಂದು ಕ್ಷೇತ್ರಗಳು ಮುಖ್ಯವಾಗಿರುವ ಕಾರಣ ಮಹಾಮೈತ್ರಿಕೂಟ ಹಾಗೂ ನರೇಂದ್ರ ಮೋದಿ ರವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಪಕ್ಷಾಂತರಿಗಳು ಸಹ ಹೆಚ್ಚಾಗಿವೆ. ಈ ಹಿಂದೆ ಹಲವು ದಿನಗಳಿಂದ ಬಿಜೆಪಿ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇದು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ, ಪಕ್ಷದ ನಾಯಕರು ತಮ್ಮ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.

ಅದರಲ್ಲಿಯೂ ಪ್ರಮುಖವಾಗಿ ನರೇಂದ್ರ ಮೋದಿ ರವರ ನಾಯಕತ್ವದಿಂದ ಆಕರ್ಷಕವಾದ ಅದೆಷ್ಟೊ ನಾಯಕರು ಬಿಜೆಪಿ ಪಕ್ಷ ಸೇರಿಕೊಂಡು ಪಕ್ಷದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಇನ್ನೂ ಕೆಲವು ನಾಯಕರು ತಮ್ಮ ಪಕ್ಷ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಮೈತ್ರಿ ಧರ್ಮವನ್ನು ಪಾಲಿಸಲಾಗಿದೆ, ನಾಯಕರ ನಿರ್ಧಾರದಿಂದ ಬೇಸತ್ತು ಪಕ್ಷ ತ್ಯಜಿಸಿ ಬಿಜೆಪಿ ಪಕ್ಷ ಸೇರುತ್ತಿದ್ದಾರೆ. ಇದೀಗ ಅದೇ ಸಾಲಿಗೆ ಕಳೆದ ವರ್ಷ ನಿವೃತ್ತರಾಗಿದ್ದ ಸೇನಾಧಿಕಾರಿಗಳು ಸೇರಿಕೊಂಡಿದ್ದಾರೆ.

ಗಡಿಯಲ್ಲಿ ಹಲವು ವರ್ಷಗಳ ಕಾಲ ಶತ್ರುಗಳಿಂದ ಭಾರತ ದೇಶವನ್ನು ರಕ್ಷಿಸಿ ಕೇವಲ ಕಳೆದ ವರ್ಷ ಸೇನಾ ವೃತ್ತಿಯಿಂದ ನಿವೃತ್ತರಾಗಿದ್ದ ಶರತ್ ಚಂದ್ ಇದೀಗ ರಾಜಕೀಯ ಅಂಗಳಕ್ಕೆ ಇಳಿದಿದ್ದಾರೆ. ಸೇನಾಪಡೆಯಲ್ಲಿ ಮಾಜಿ ಉಪ ಮುಖ್ಯಸ್ಥರಾಗಿದ್ದಲೆಫ್ಟಿನಂಟ್ ಜನರಲ್  ಶರತ್ ಚಂದ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಸೇರ್ಪಡೆ ಗೊಂಡಿದ್ದಾರೆ ಇದರಿಂದ ಬಿಜೆಪಿ ಪಕ್ಷವು ಮತ್ತಷ್ಟು ಬಲಗೊಂಡಿದೆ ಎಂದರೆ ತಪ್ಪಾಗಲಾರದು. ಈ ಮೂಲಕ ದೇಶದ ಸೈನಿಕರ ಬಲ ಬಿಜೆಪಿ ಪಕ್ಷಕ್ಕೆ ಬಂದಂತಾಗಿದ್ದು ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗಿದೆ.

ಇನ್ನು ತಮ್ಮ ರಾಜಕೀಯ ಸೇರ್ಪಡೆಗೆ ಕಾರಣವನ್ನು ತಿಳಿಸಿರುವ ಶರತ್ ಚಂದ್ ಅವರು ಕೇವಲ ನರೇಂದ್ರ ಮೋದಿ ಅವರ ನಾಯಕತ್ವದಿಂದ ನಾನು ಪ್ರಭಾವಿತನಾಗಿದ್ದೇನೆ ಆದ ಕಾರಣಕ್ಕಾಗಿ ಪಕ್ಷ ಸೇರಿಕೊಂಡಿದ್ದೇನೆ. ಬಿಜೆಪಿ ಪಕ್ಷ ಯಾವ ಕ್ಷೇತ್ರದಿಂದ ಟಿಕೆಟ್ ನೀಡಿದರೂ ಸಹ ಬಹಳ ಖುಷಿಯಿಂದ ಸ್ವೀಕರಿಸಿ ಸ್ಪರ್ಧೆ ಮಾಡುತ್ತೇನೆ ಒಂದು ವೇಳೆ ಟಿಕೆಟ್ ನೀಡದೇ ಇದ್ದರೆ ಗಲ್ಲಿ ಗಲ್ಲಿಯಲ್ಲೂ ನರೇಂದ್ರ ಮೋದಿ ರವರ ಪರ ಪ್ರಚಾರ ನಡೆಸಿ ಅವರ ಸಾಧನೆಗಳನ್ನು ಜನರಿಗೆ ಮುಟ್ಟಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.