ಜಾದವ್ ಪರ ಪ್ರಚಾರ ಮಾಡಿದ್ದಕ್ಕೆ ಮುಸ್ಲಿಂ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ

ಜಾದವ್ ಪರ ಪ್ರಚಾರ ಮಾಡಿದ್ದಕ್ಕೆ ಮುಸ್ಲಿಂ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ

ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕ ರಾಜ್ಯದ ಹಲವಾರು ರಾಜಕೀಯ ನಾಯಕರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಚುನಾವಣಾ ಸಮಯದಲ್ಲಿ ಐಟಿ ಇಲಾಖೆಯು ತನ್ನ ಪಕ್ಷದ ಬೆಂಬಲಿಗರ ಮೇಲೆ ದಾಳಿ ಮಾಡಿದೆ ಎಂಬ ಆರೋಪವನ್ನು ಮುಂದೆ ಇಟ್ಟುಕೊಂಡು ರಾಜಧಾನಿಯ ಬೀದಿಗಳಲ್ಲಿ ಪ್ರತಿಭಟನೆಗೆ ಹಿರಿಯ ನಾಯಕರು ಹಾಗೂ ಸ್ವತಹ ರಾಜ್ಯದ ಮುಖ್ಯಮಂತ್ರಿಗಳು ಇಳಿದಿದ್ದರು. ಆದರೆ ಇಲ್ಲಿ ಯಾವ ಒಬ್ಬ ರಾಜಕೀಯ ಮುಖಂಡನ ಮೇಲೆ ದಾಳಿ ನಡೆದಿರಲಿಲ್ಲ ಬದಲಾಗಿ ಗುತ್ತಿಗೆದಾರರು ಹಾಗೂ ಇನ್ನಿತರ ಸರ್ಕಾರಿ ಇಂಜಿನಿಯರ್ ಗಳ ಮೇಲೆ ದಾಳಿ ನಡೆದಿತ್ತು.

ಆದರೂ ಸಹ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿ ರಾಜಕೀಯ ನಾಯಕರು ಬೀದಿಗಿಳಿದು ಪ್ರತಿಭಟನೆ ಮಾಡಿ ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡಿದ್ದರು. ಆದರೆ ಇಂದು ತಮಗೆ ಇಷ್ಟ ಬಂದ ಅಭ್ಯರ್ಥಿಯ ಪರ ಪ್ರಚಾರ ಮಾಡಿದ್ದಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರದಲ್ಲಿ ಮುಸ್ಲಿಂ ಮುಖಂಡರ ಮೇಲೆ ಹಲ್ಲೆ ನಡೆಸಲಾಗಿದೆ. ಗುಲ್ಬರ್ಗ ಕ್ಷೇತ್ರದಲ್ಲಿ ಗೆಲುವಿನ ಮುನ್ಸೂಚನೆ ಯೊಂದಿಗೆ ಮುನ್ನುಗ್ಗುತ್ತಿರುವ ಉಮೇಶ್ ಜಾದವ್ ಅವರ ಬೆಂಬಲಿಗರ ಮೇಲೆ ದಾಳಿ ಮಾಡಿ ಸೋಲಿನ ಭಯವನ್ನು ಮತ್ತಷ್ಟು ಹೊರ ಹಾಕಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯ ವಾಗಿದೆ.

ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಧ್ಯಕ್ಷ ಮಹಮದ್ ಚುಲ್ ಬುಲ್ ರವರ ಮನೆ ಮೇಲೆ ಮಧ್ಯರಾತ್ರಿ 2 ಗಂಟೆಯ ವೇಳೆಯಲ್ಲಿ ದಾಳಿ ನಡೆಸಲಾಗಿದೆ. ಮಾಜಿ ಸಚಿವ ದಿವಂಗತ ಖಮರುಲ್ಲಾ ಇಸ್ಲಾಂ ಅವರ ಪತ್ನಿ ಹಾಗೂ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ಫಾತಿಮಾ ತಮ್ಮ ಬೆಂಬಲಿಗರ ಮೂಲಕ ದಾಳಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಹಾಗೂ ದೂರು ದಾಖಲಿಸಲಾಗಿದೆ. ನೂರಕ್ಕೂ ಹೆಚ್ಚು ಯುವಕರು ಮಧ್ಯರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿರುವ ಸಮಯದಲ್ಲಿ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ.

ಮನೆಯ ಎದುರು ನಿಲ್ಲಿಸಲಾಗಿದ್ದ ಇನೋವಾ ಕಾರಿನ ಗಾಜುಗಳನ್ನು ಪುಡಿ-ಪುಡಿ ಮಾಡಲಾಗಿದ್ದು ಮನೆಯೊಳಗಿನ ಪೀಠೋಪಕರಣಗಳನ್ನು ಸಂಪೂರ್ಣವಾಗಿ  ಧ್ವಂಸ ಮಾಡಲಾಗಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮುಸ್ಲಿಂ ಮತದಾರರು ಹೇಗಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ಧೋರಣೆಯನ್ನು ಅಳವಡಿಸಿಕೊಂಡು ಮುಸ್ಲಿಮರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಇತ್ತೀಚೆಗೆ ಮಿಲ್ಲಿ ಕೌನ್ಸಿಲ್ ಸಂಘಟನೆಯು ಉಮೇಶ್ ಜಾದವ್ ರವರ ಬೆಂಬಲಕ್ಕೆ ನಿಲ್ಲುವ ಬಗ್ಗೆ ಚಿಂತನೆ ನಡೆಸಿದ್ದು ಆದ ಕಾರಣದಿಂದ ಅಭಿಪ್ರಾಯ ಕ್ರೋಡೀಕರಿಸುವ ಸಮಯದಲ್ಲಿ ಈ ರೀತಿಯ ಘಟನೆಗಳು ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದರ ಬಗ್ಗೆ ಯಾವೊಬ್ಬ ರಾಜಕೀಯ ನಾಯಕನ ಧ್ವನಿ ಎತ್ತಿಲ್ಲ ಯಾಕೆಂದರೆ ಇದು ಐಟಿ ರೈಡ್ ಅಲ್ಲ ಬದಲಾಗಿ ಮಾರಣಾಂತಿಕ ಹಲ್ಲೆ. ಅವರ ಪ್ರಕಾರ ಇದೇ ಪ್ರಜಾ ಪ್ರಭುತ್ವ ಇರಬೇಕು.