ತುಪ್ಪದ ಬೆಡಗಿ ರಾಗಿಣಿ ಜೈ ಎಂದಿದ್ದು ಯಾವ ಪಕ್ಷಕ್ಕೆ ಗೊತ್ತಾ??

  • 468
    Shares

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗಾಗಲೇ ರಾಜಕೀಯ ಪಕ್ಷಗಳು ಹಾಗೂ ತಾರಾ ಪ್ರಚಾರಕರು ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ. ಸಾಮಾನ್ಯವಾಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಟ ನಟಿಯರು ತಮ್ಮ ಇಷ್ಟದ ಪಕ್ಷದ ಕುರಿತು ಹೇಳಿಕೆಗಳನ್ನು ನೀಡಿ ಜನರಿಗೆ ಮತ ನೀಡುವಂತೆ ಪ್ರೇರೇಪಿಸುತ್ತಾರೆ. ಇಂತಹ ಸಮಯದಲ್ಲಿ ಸ್ಯಾಂಡಲ್ ವುಡ್ ನ ನಟಿ ರಾಗಿಣಿ ರವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಗಿಣಿ ರವರು ನನಗೆ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಪ್ರವೇಶ ಮಾಡುತ್ತೇನೆ, ನನ್ನಲ್ಲಿ ಇಷ್ಟೆಲ್ಲ ಅಭಿಮಾನವನ್ನು ಇಟ್ಟಿರುವ ಜನರ ಸೇವೆಯನ್ನು ನಾನು ಮಾಡಬೇಕಾಗಿದೆ. ಅದಕ್ಕಾಗಿ ನಾನು ರಾಜಕೀಯ ಪ್ರವೇಶಿಸಲು ಉತ್ಸುಕಳಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ನೀವು ಯಾವ ಪಕ್ಷದ ಪರ ಒಲವನ್ನು ಹೊಂದಿದ್ದೀರಾ ಎಂದು ಪ್ರಶ್ನಿಸಿದಾಗ ನನ್ನ ವೈಯಯುಕ್ತ ಆಯ್ಕೆ ಬಿಜೆಪಿ ಪಕ್ಷ ಎಂದು ಉತ್ತರ ನೀಡಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಜನರ ಸೇವೆ ಮಾಡಲು ಬದ್ಧರಾಗಿರಬೇಕು ಎಂಬ ಅಭಿಪ್ರಾಯವನ್ನು ಸಹ ಹೊರಹಾಕಿದ್ದಾರೆ. ಇನ್ನು ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ರಾಗಿಣಿ ರವರು ಬಿಜೆಪಿ ಪಕ್ಷಕ್ಕೆ ಪರೋಕ್ಷ ಬೆಂಬಲವನ್ನು ಘೋಷಿಸಿಕೊಂಡಿದ್ದಾರೆ ಎಂಬುದು ವಾತ್ಸವ. ಮುಂದಿನ ದಿನಗಳಲ್ಲಿ ನಟಿ ರಾಗಿಣಿ ರವರು ಬಿಜೆಪಿ ಪಕ್ಷ ಸೇರಿದರು ಯಾವ ಆಶ್ಚರ್ಯ ಇರುವುದಿಲ್ಲ. ಒಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ಹೇಳಿಕೆ ಕೊಂಚ ಮಹತ್ವವನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.

Facebook Comments

Post Author: RAVI