ಕೊನೆಗೂ ವಿಘ್ನ ನಿವಾರಣೆ, ಮೋದಿ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್

  • 967
    Shares

ನರೇಂದ್ರ ಮೋದಿ ಅವರ ಜೀವನದ ಆಧಾರಿತ ಸಿನಿಮಾ ಪಿಎಂ ನರೇಂದ್ರ ಮೋದಿ ಬಿಡುಗಡೆಗೆ ಇದ್ದ ಅಡೆತಡೆಗಳು ಕೊನೆಗೂ ನಿವಾರಣೆಯಾಗಿವೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರೋಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆ ಮಾಡಬಾರದು, ಯಾಕೆಂದರೆ ನೇರವಾಗಿ ಇದು ಚುನಾವಣೆಯ ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ಮುಂದೂಡಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ ನ್ಯಾಯಾಲಯವು ಕೊನೆಗೂ ಪಿಎಂ ನರೇಂದ್ರ ಮೋದಿ ರವರ ಜೀವನ ಆಧಾರಿತ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ನೀಡಿದೆ. ಸಿನಿಮಾ ಬಿಡುಗಡೆಗೆ ನ್ಯಾಯಾಲಯದಿಂದ ಯಾವುದೇ ತಕರಾರು ಗಳು ಇನ್ನು ಮುಂದೆ ಬರುವುದಿಲ್ಲ ಹಾಗೂ ಚುನಾವಣಾ ಆಯೋಗವು ಸಹ ಇದಕ್ಕೆ ಅಡ್ಡಿ ಬರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇನ್ನು ಇಡೀ ದೇಶದ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ ನಡೆಯುವ ದಿನ ಏಪ್ರಿಲ್ 11, ಈ ದಿನವೇ ಬಾಲಿವುಡ್ ನಟ ವಿವೇಕ್ ಒಬೆರಾಯ್ ರವರು ನಟಿಸಿರುವ ಪಿಎಂ ನರೇಂದ್ರ ಮೋದಿ ರವರ ಚಿತ್ರ ಬಿಡುಗಡೆಯಾಗಲಿದೆ. ಮೊದಲ ಹಂತದ ಚುನಾವಣೆಯ ದಿನ ಬಿಡುಗಡೆಯಾಗುತ್ತಿರುವ ಕಾರಣ ಅಭಿಮಾನಿಗಳು ಮತ್ತಷ್ಟು ಉತ್ಸಾಹದಿಂದ ಈ ಚಿತ್ರಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ನ ಮೂಲಕ ಭಾರಿ ಸದ್ದು ಮಾಡಿರುವ ನರೇಂದ್ರ ಮೋದಿ ರವರ ಚಿತ್ರ ಚಿತ್ರಮಂದಿರಗಳಲ್ಲಿ ಯಾವ ರೀತಿಯ ಪ್ರದರ್ಶನ ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ ಹಾಗೂ ಮುಂದಿನ ಚುನಾವಣೆಯ ಮೇಲೆ ಇದರ ಪರಿಣಾಮ ಯಾವ ರೀತಿ ಬೀಳಲಿದೆ ಎಂಬುದು ಮುಖ್ಯವಾಗುತ್ತದೆ.

Facebook Comments

Post Author: RAVI