ಬಿಗ್ ನ್ಯೂಸ್: ಸುಮಲತಾ ರವರ ವಿರುದ್ಧ ಮತ್ತೊಂದು ಕುತಂತ್ರ- ನೀಚ ಮಟ್ಟಕ್ಕೆ ಇಳಿದ ರಾಜಕೀಯ

ಬಿಗ್ ನ್ಯೂಸ್: ಸುಮಲತಾ ರವರ ವಿರುದ್ಧ ಮತ್ತೊಂದು ಕುತಂತ್ರ- ನೀಚ ಮಟ್ಟಕ್ಕೆ ಇಳಿದ ರಾಜಕೀಯ

ಈ ಲೇಖನ ಓದಿದ ನಂತರ ದೇಶದ ರಾಜಕೀಯ ವ್ಯವಸ್ಥೆ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂಬುದು ನಿಮಗೇ ಅರ್ಥವಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸುಮಲತಾ ಅವರನ್ನು ಮಣಿಸಲು ನಾಲ್ಕು ಹೆಸರಿನ ಸುಮಲತಾ ರವರು ಸ್ಪರ್ಧೆಗೆ ಇಳಿದಿದ್ದಾರೆ. ಯಾರ ಕೈವಾಡವೂ ತಿಳಿದಿಲ್ಲ ಕ್ರಮೇಣವಾಗಿ 19, 2,0 21, 22 ಕ್ರಮ ಸಂಖ್ಯೆ ಗಳಲ್ಲಿ ಸುಮಲತಾ ಎಂಬ ಹೆಸರು ಕೇಳಿ ಬರುತ್ತದೆ. ಆದರೆ ಇಂತಹ ರಾಜಕೀಯ ತಂತ್ರಗಳನ್ನು ವಿಫಲಗೊಳಿಸಲು ಇದೇ ಮೊಟ್ಟಮೊದಲ ಬಾರಿಗೆ ಮತ ಯಂತ್ರದಲ್ಲಿ ಅಭ್ಯರ್ಥಿಗಳ ಫೋಟೋ ಇರುವಂತೆ ಚುನಾವಣಾ ಆಯೋಗ ನಿರ್ಧಾರ ಮಾಡಿತ್ತು.

ಇದರಿಂದ ವಿರೋಧಿಗಳ ಯೋಜನೆ ವಿಫಲವಾಗುವ ಸಾಧ್ಯತೆಗಳಿದ್ದವು,  ಆದಕಾರಣ ವಿರೋಧಿಗಳು ಮತ್ತೊಮ್ಮೆ ಕುತಂತ್ರ ರಾಜಕಾರಣವನ್ನು ಮುಂದುವರಿಸಿದ್ದು ಇದು ಕೇವಲ ಕುತಂತ್ರ ರಾಜಕಾರಣ ವಾಗಿ ಉಳಿದಿಲ್ಲ ಬದಲಾಗಿ ಇನ್ನೂ ಕೀಳು ಮಟ್ಟಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಥೇಟ್ ಸುಮಲತಾ ರವರನ್ನು ಹೋಲುವಂತೆ ಇದೀಗ ಕ್ರಮ ಸಂಖ್ಯೆ 19ರಲ್ಲಿ ಸ್ಪರ್ಧಿಸುತ್ತಿದ್ದ ಅವರಿಗೆ ಮೇಕಪ್ ಮಾಡಿ ಫೋಟೋ ತೆಗಿಸಲಾಗಿದೆ.

ಹೌದು, ಕ್ರಮ ಸಂಖ್ಯೆ 19 ಸುಮಲತಾ ರವರನ್ನು ನೋಡಿದ ತಕ್ಷಣ ಮತದಾರರು ಕನ್ಫ್ಯೂಸ್ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಯಾಕೆಂದರೆ ಥೇಟ್  ಸುಮಲತಾ ರವರನ್ನು ಹೋಲುವಂತೆ ಫುಲ್ ಬ್ಲೌಸ್, ಡ್ರೆಸ್ ಹಾಗೂ ಕನ್ನಡಕ ಹಾಕಿಸಿ ಫೋಟೋ ತೆಗಿಸಲಾಗಿದೆ. ಇದೇ ಫೋಟೋವನ್ನು ಮತ ಯಂತ್ರದಲ್ಲಿ ಹಾಕಲಾಗಿದ್ದು ಸುಮಲತಾ ಅಂಬರೀಶ್ ಹಾಗೂ ಕ್ರಮ ಸಂಖ್ಯೆ 19 ರ ಸುಮಲತಾ ರವರ ಫೋಟೋಗಳನ್ನು ನೋಡಿ ಜನರು ಕನ್ಫ್ಯೂಸ್ ಆಗುವಂತೆ ಮಾಡಲು ವಿರೋಧಿಗಳು ತಂತ್ರ ರೂಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್ ಅವರು ನನ್ನನ್ನು ಸೋಲಿಸಲು ಅಭ್ಯರ್ಥಿಗಳನ್ನು ಹಾಕಿದ್ದು ಮಾತ್ರವಲ್ಲದೆ ಈಗ ಕುತಂತ್ರ ರಾಜಕೀಯ ಮತ್ತೊಮ್ಮೆ ನಡೆಸುತ್ತಿದ್ದಾರೆ. ನನ್ನ ತರವೇ ಫುಲ್ ಬ್ಲೌಸ್ ಹಾಕಿಸಿ ಕನ್ನಡಕ ಹಾಕಿಸಿ ಅಭ್ಯರ್ಥಿಗಳ ಫೋಟೋಗಳನ್ನು ತೆಗೆಯಲಾಗಿದೆ ಸೀರಿಯಲ್ ನಂಬರ್ 19 ನೇ ಅಭ್ಯರ್ಥಿಯನ್ನು ನನ್ನಂತೆ ಬಿಂಬಿಸಿದ್ದಾರೆ. ನೈತಿಕತೆ ಇಟ್ಟುಕೊಂಡು ರಾಜಕೀಯ ಮಾಡಬೇಕು ಬದಲಾಗಿ ಈ ರೀತಿಯ ರಾಜಕಾರಣ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ದಯವಿಟ್ಟು ಈ ಸುದ್ದಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಿ ಯಾಕೆಂದರೆ ಪ್ರತಿಯೊಂದು ಮತ ಸಹ ದೇಶದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ ಕಾರಣದಿಂದ ಜನರು ತಮ್ಮ ಅಭ್ಯರ್ಥಿಗೆ ಮತ ನೀಡಬೇಕು ಬದಲಾಗಿ ಕನ್ಫ್ಯೂಸ್ ಆಗಿ ಬೇರೆ ಅಭ್ಯರ್ಥಿಗೆ ಮತ ನೀಡುವಂತೆ ಆಗಬಾರದು ಎಂಬುದು ನಮ್ಮ ಉದ್ದೇಶ.