ಸೇನೆಯ ಮೇಲೆ ಲೈಂಗಿಕ ಆರೋಪಗಳನ್ನು ಎತ್ತಿ ಹಿಡಿದ ಕಾಂಗ್ರೆಸ್- ದೇಶದ ರಕ್ಷಕರಿಗೆ ಮತ್ತೊಂದು ಅವಮಾನ

ಸೇನೆಯ ಮೇಲೆ ಲೈಂಗಿಕ ಆರೋಪಗಳನ್ನು ಎತ್ತಿ ಹಿಡಿದ ಕಾಂಗ್ರೆಸ್- ದೇಶದ ರಕ್ಷಕರಿಗೆ ಮತ್ತೊಂದು ಅವಮಾನ

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಗೊಳಿಸಿದ ಮೇಲೆ ಇನ್ನಿಲ್ಲದ ವಿವಾದಗಳು ಸೃಷ್ಟಿಯಾಗಿವೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶದ ಭದ್ರತೆಯ ವಿಷಯದಲ್ಲಿ ತಮಾಷೆ ಮಾಡುತ್ತಿರುವಂತೆ ಕಾಂಗ್ರೆಸ್ ಪಕ್ಷವು ಕಾಣಿಸುತ್ತಿದೆ, ಯಾಕೆಂದರೆ ಜಮ್ಮು ಹಾಗೂ ಕಾಶ್ಮೀರ ಮತ್ತು ದೇಶದ ಭದ್ರತೆಯ ವಿಚಾರದಲ್ಲಿ ನರೇಂದ್ರ ಮೋದಿ ರವರ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರಗಳಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಪಕ್ಷವು ನಿರ್ಧಾರ ಮಾಡಿಕೊಂಡಂತೆ ಕಾಣುತ್ತಿದೆ.

ಈಗಾಗಲೇ ದೇಶದೆಲ್ಲೆಡೆ ಭಾರೀ ವಿವಾದವನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ದೊಡ್ಡ ವಿವಾದವನ್ನು ತನ್ನ ಮೇಲೆ ಎಳೆದುಕೊಂಡು ಇದೆ. ಇಷ್ಟು ಸಾಲದು ಎಂಬಂತೆ ಇದೀಗ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪುಟ 35 ಅದನ್ನು ತೆಗೆದು ಓದಿದರೆ, ಇಡೀ ವಿಶ್ವವೇ ಬೆರಗಾಗುವಂತಹ ಅಂಶವನ್ನು ಕಾಂಗ್ರೆಸ್ ಪಕ್ಷವು ಎತ್ತಿ ಹಿಡಿದಿದ್ದು ದೇಶದೆಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ದೇಶ ದ್ರೋಹಿಗಳು ಮೊದಲಿನಿಂದಲೂ ಭಾರತೀಯ ಸೇನೆಯ ಮೇಲೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲೈಂಗಿಕ ಹಿಂಸೆಯ ಕಪಟ ಆರೋಪವನ್ನು ಮಾಡುತ್ತಿದ್ದರು. ನರೇಂದ್ರ ಮೋದಿ ರವರ ಸರ್ಕಾರ ಈ ಆರೋಪಗಳಿಗೆ ಸೊಪ್ಪು ಹಾಕದೆ ಉಗ್ರರನ್ನು ಸದೆಬಡಿಯಲು ಕೆಲಸವನ್ನು ಮಾಡುತ್ತಿದ್ದ ಬೆಂಬಲಕ್ಕೆ ನಿಂತು, ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ ಹೋರಾಡುವಂತೆ ಪ್ರೇರೇಪಿಸುತ್ತಿದ್ದರು.

ಇದೀಗ ದೇಶದ ಸೈನಿಕರ ಮೇಲೆ ಲೈಂಗಿಕ ಹಿಂಸೆಯ ಕಪಟ ಆರೋಪವನ್ನು ಕಾಂಗ್ರೆಸ್ ಪಕ್ಷದ ಎತ್ತಿಹಿಡಿದಿದ್ದು ಜಮ್ಮು ಹಾಗೂ ಕಾಶ್ಮೀರ ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆಗಳು ನಿಯೋಜಿತವಾಗಿ ಕಣಿವೆಯಲ್ಲಿ ಮಹಿಳೆಯರ ಹಿಂಸೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಕಾರಣವೆಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೂಚಿಸಿದೆ. ಭಾರತೀಯ ಸೇನಾ ಪಡೆಗಳು ಹಾಗೂ ಮಾನವ ಹಕ್ಕುಗಳ ಹೋರಾಟದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಸೇನೆಯನ್ನು ಹಿಂಪಡೆದು ಲೈಂಗಿಕ ಕಿರುಕುಳ ಗಳಿಗೆ ಮುಕ್ತಿ ನೀಡುವುದಾಗಿ ಘೋಷಿಸಿದೆ.

ಈ ಅಂಶದ ಮೂಲಕ ಕಾಂಗ್ರೆಸ್ ಪಕ್ಷವು ಭಾರತೀಯ ಸೇನೆಯ ಮೇಲೆ ಕೇಳಿಬಂದಿದ್ದ ಲೈಂಗಿಕ ಆರೋಪಗಳನ್ನು ಎತ್ತಿಹಿಡಿದಂತಾಗಿದ್ದು, ಇಡೀ ದೇಶವೇ ಇಂದು ಮುಜುಗರ ದಲ್ಲಿ ಬದುಕುವಂತಾಗಿದೆ.