ಕಾಂಗ್ರೆಸ್ಗೆ ಮರ್ಮಾಘಾತ: ಪಕ್ಷದ ವಿರುದ್ಧ ತಿರುಗಿಬಿದ್ದ ಭಾರತೀಯ ಸೇನೆ

  • 13.5K
    Shares

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಒಂದು ದೇಶದ ಸೇನೆ ರಾಜಕೀಯ ಪಕ್ಷದ ಪರ ಹಾಗೂ ವಿರುದ್ಧ ಹೇಳಿಕೆಗಳನ್ನು ನೀಡುವುದು ಕಾನೂನು ಬದ್ಧ ವಾಗಿರುವುದಿಲ್ಲ. ಆದರೆ ಇದೀಗ ಭಾರತೀಯ ಸೇನೆಯು ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿಬಿದ್ದಿದೆ, ಕಾಂಗ್ರೆಸ್ ನ ದುಷ್ಟ ಆಲೋಚನೆಗಳನ್ನು ಖಡಾಖಂಡಿತವಾಗಿ ನಿಂದಿಸಿರುವ ಭಾರತೀಯ ಸೇನೆಯು ದೇಶದ ರಕ್ಷಣೆಯ ವಿಷಯದಲ್ಲಿ ಬಾರಿ ಆತಂಕಕ್ಕೆ ಒಳಗಾಗಿದ್ದು, ಕಾಂಗ್ರೆಸ್ ಪಕ್ಷದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟಿನ ಮಾತನ್ನು ಸಹ ವಿರೋಧಿಸಿ ಕಾಂಗ್ರೆಸ್ ಪಕ್ಷವು ಈ ನಡೆ ಇಟ್ಟಿದ್ದು ಭಾರಿ ವಿವಾದ ಎಬ್ಬಿಸಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶದ ಭದ್ರತೆಯ ವಿಚಾರದಲ್ಲಿ ಜಮ್ಮು ಹಾಗೂ ಕಾಶ್ಮೀರ ಉಗ್ರರ ಪಾತ್ರ ಮಹತ್ವದಾಗಿರುತ್ತದೆ, ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರ ನ್ನು ಹೊಡೆದುರುಳಿಸಲು ಭಾರತೀಯ ಸೇನೆಯು ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಆಗ ಕಾಂಗ್ರೆಸ್ ಪಕ್ಷವು ಸೇನೆಗೆ ಇರುವ ಎಲ್ಲಾ ಅಧಿಕಾರಗಳನ್ನು ಕಸಿದುಕೊಂಡು, ಜಮ್ಮು ಹಾಗೂ ಕಾಶ್ಮೀರ ದಿಂದ ಸೇನೆಯನ್ನು ಹಿಂತೆಗೆದುಕೊಳ್ಳುತ್ತೇವೆ, ಗಣನೀಯ ಪ್ರಮಾಣದಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆಯು ಜಮ್ಮು ಹಾಗೂ ಕಾಶ್ಮೀರ ದಲ್ಲಿ AFSPA ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಸಹ ಒಪ್ಪಿಗೆ ನೀಡಿದ್ದು ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷವು ತಕರಾರು ತೆಗೆಯುತ್ತಿದೆ, ದೇಶದ ಭದ್ರತೆಯ ವಿಚಾರದಲ್ಲಿ ಇದು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ ಆದ್ದರಿಂದ ಈ ಕೂಡಲೇ ಕಾಂಗ್ರೆಸ್ ಪಕ್ಷವು ತನ್ನ ಮರುಪರಿಶೀಲಿಸಿ ದೇಶದ ಭದ್ರತೆಯ ವಿಚಾರದಲ್ಲಿ ಗಮನಹರಿಸಬೇಕು ಎಂದು ತಿರುಗೇಟು ನೀಡಿದೆ.

ಈ ಪ್ರಣಾಳಿಕೆ ಬಿಡುಗಡೆ ಯಾದ ನಂತರ ಕಾಂಗ್ರೆಸ್ ಪಕ್ಷದ ವಿರುದ್ಧ ಹಲವಾರು ವಿವಾದಗಳು ಕೇಳಿ ಬಂದಿತ್ತು ರಾಷ್ಟ್ರೀಯ ವಿರೋಧಿ ಪಡೆಗಳನ್ನು ಕಾಂಗ್ರೆಸ್ ಪಕ್ಷವು ಬಲಪಡಿಸುತ್ತದೆ ಎಂಬ ಆರೋಪ ಕೇಳಿಬಂದಿದೆ ಇದರಿಂದ ಭಾರತೀಯ ಸೇನೆಯು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದು ದೇಶದ ಭದ್ರತೆಯ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಕೇಳಿಕೊಂಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಕೇವಲ ದೇಶದ್ರೋಹಿಗಳ ಮನವೊಲಿಸಲು ಕಾಂಗ್ರೆಸ್ ಪಕ್ಷವು ಈ ರೀತಿಯ ಹೆಜ್ಜೆ ಇಡುವುದು ಎಷ್ಟು ಸರಿ ಎಂಬುದು ಎಲ್ಲರ ಅಭಿಪ್ರಾಯ ವಾಗಿದೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗೂ ಚುನಾವಣೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ.

Facebook Comments

Post Author: Ravi Yadav