ಮೋದಿ ವಿರೋಧಿಗಳ ಬಾಯಿ ಮುಚ್ಚಿಸಿದ ರಾಹುಲ್- ಮೋದಿಗೆ ಮತ್ತಷ್ಟು ಬಲ

ಮೋದಿ ವಿರೋಧಿಗಳ ಬಾಯಿ ಮುಚ್ಚಿಸಿದ ರಾಹುಲ್- ಮೋದಿಗೆ ಮತ್ತಷ್ಟು ಬಲ

ರಾಹುಲ್ ಗಾಂಧಿ ರವರನ್ನು ನರೇಂದ್ರ ಮೋದಿ ಭಕ್ತರು ಸದಾ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ ಎಂದು ಕಾಲೆಳೆಯುತ್ತಿದ್ದಾರೆ. ಆದರೆ ಇಂದು ನಿಜವಾಗಿಯೂ ಸಹ ರಾಹುಲ್ ಗಾಂಧಿ ರವರು ನರೇಂದ್ರ ಮೋದಿ ರವರ ವಿರೋಧಿಗಳ ಬಾಯಿಗಳನ್ನು ಮುಚ್ಚಿ ಸಿದ್ದಾರೆ, ಈ ಮೂಲಕ ತಾವೇ ಖುದ್ದು ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಬಲ ನೀಡಿದ್ದಾರೆ. ನರೇಂದ್ರ ಮೋದಿ ಅವರನ್ನು ಸದಾ ಟೀಕೆ ಮಾಡುತ್ತಿದ್ದ ವಿರೋಧಿಗಳ ಬಾಯಿಗೆ ರಾಹುಲ್ ಗಾಂಧಿ ರವರು ಇಂದು ಬೀಗ ಜಡಿದಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಮ್ಮು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನ ಮಾನ ವನ್ನು ತೆಗೆದು ಹಾಕಬೇಕು ಎಂದು ಪುಲ್ವಾಮಾ ದಾಳಿಯ ನಂತರ ನರೇಂದ್ರ ಮೋದಿ ರವರ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ ಭಾರತೀಯ ಸಂವಿಧಾನದ ಪ್ರಕಾರ ಕೇವಲ ಚುನಾವಣೆಯಲ್ಲಿ ಗೆದ್ದು ಅಧಿಕಾರದಲ್ಲಿ ಇರುವ ರಾಜ್ಯ ಸರ್ಕಾರ ಮಾತ್ರ ತನಗೆ ವಿಶೇಷ ಸ್ಥಾನಮಾನ ಬೇಡ ಎಂದು ವಾಪಸ್ಸು ನೀಡಬಹುದಾಗಿತ್ತು, ಈ ಕಾನೂನನ್ನು ಅರಿತಿದ್ದ ನರೇಂದ್ರ ಮೋದಿರವರು ವಿಶೇಷ ಸ್ಥಾನ ಮಾನ ವನ್ನು ತೆಗೆದು ಹಾಕಲು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.

ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಂದೂಡಲ್ಪಟ್ಟ ಕಾರಣ ನರೇಂದ್ರ ಮೋದಿರವರು ಆರ್ಟಿಕಲ್ 370A ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಸಾಧ್ಯವಾಗಿರಲಿಲ್ಲ, ಆದರೆ ಇಡೀ ದೇಶದ ಎಲ್ಲೆಡೆ ನರೇಂದ್ರ ಮೋದಿ ಅವರ ವಿರೋಧಿಗಳು ಇದನ್ನು ಅರ್ಥಮಾಡಿಕೊಳ್ಳದೆ ಸದಾ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದರು, ಇದರಿಂದ ನರೇಂದ್ರ ಮೋದಿ ರವರ ಮೇಲೆ ಟೀಕೆಗಳ ಬಾಣ ಸುರಿಮಳೆಯಾಯಿತು. ಆದರೆ ಇಂದು ಸ್ವತಹ ರಾಹುಲ್ ಗಾಂಧಿ ರವರು ಇದಕ್ಕೆಲ್ಲ ಬೀಗ ಜಡಿದಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಕೇವಲ ನಿನ್ನೆಯಷ್ಟೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಜಮ್ಮು ಹಾಗೂ ಕಾಶ್ಮೀರ ದ ವಿಶೇಷ ಸ್ಥಾನಮಾನವನ್ನು ಅಥವಾ ಆರ್ಟಿಕಲ್ 370A ಅನ್ನು ರಕ್ಷಿಸುವುದಾಗಿ ಘೋಷಿಸಿದೆ, ಈ ಘೋಷಣೆ ಯಾದ ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನರೇಂದ್ರ ಮೋದಿ ಅವರನ್ನು ಈ ವಿಷಯದಲ್ಲಿ ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಈ ಅಂಶವಿರುವ ಕಾರಣ ಇನ್ನು ಮುಂದೆ ನರೇಂದ್ರ ಮೋದಿ ರವರನ್ನು ಈ ವಿಚಾರದಲ್ಲಿ ದೂಷಿಸಲು ಸಾಧ್ಯವಿಲ್ಲ.

ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸದೆ ದೇಶವನ್ನು ಅಪಾಯದ ಅಂಚಿನಲ್ಲಿ ಇಡುತ್ತಿದ್ದಾರೆ ಎಂದು ಆರೋಪಿಸಿದ್ದ ವಿರೋಧ ಪಕ್ಷಗಳಿಗೆ ಇದರಿಂದ ಸಾಮಾನ್ಯವಾಗಿ ಮುಖಭಂಗ ಉಂಟಾಗಿದ್ದು, ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.