ಹೇಮಾವತಿಯಿಂದ ದೇವೇಗೌಡರ ಸೋಲು?? ಮರೆತರೇ ತುಮಕೂರು ಜನತೆ??

ಹೇಮಾವತಿಯಿಂದ ದೇವೇಗೌಡರ ಸೋಲು?? ಮರೆತರೇ ತುಮಕೂರು ಜನತೆ??

ಮೊದಲಿನಿಂದಲೂ ತುಮಕೂರಿನ ಜನತೆಗೆ ಹೇಮಾವತಿ ನದಿ ನೀರು ಒಂದು ಕನಸಾಗಿ ಉಳಿದುಕೊಂಡಿದೆ. ಕಳೆದ ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಗೆ ನೀರು ಬಿಡಬೇಕು ಎಂಬ ಪ್ರಸ್ತಾವನೆ ಸಲ್ಲಿಸಿತ್ತು ಆದರೆ ಕಾವೇರಿ ನದಿಯ ವಿವಾದದಲ್ಲಿ ತಮಿಳುನಾಡಿಗೆ ಹೆಚ್ಚು ನೀರು ಬಿಡಬೇಕಾಗಿದ್ದ ಕಾರಣ ಹೇಮಾವತಿ ನೀರನ್ನು ಹಾಸನ ಜಿಲ್ಲೆಗೆ ಬಳಸಿಕೊಳ್ಳಬೇಕು ಎಂಬ ಪಟ್ಟು ದೇವೇಗೌಡ ರದ್ದಾಗಿತ್ತು. ಕಳೆದ ಬಾರಿ ಸಿದ್ದರಾಮಯ್ಯರವರಿಗೆ ದೇವೇಗೌಡರು ಪತ್ರ ಬರೆದು ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನದಿಯಿಂದ ನೀರು ಬಿಡಬೇಕು ಎಂದು ಒತ್ತಾಯಿಸಿದರು.ಹೇಮಾವತಿ ನೀರು ನಮಗೆ ಬರುತ್ತದೆ ಎಂದು ಕನಸು ಇಟ್ಟುಕೊಂಡಿದ್ದ ತುಮಕೂರಿನ ಜನತೆಗೆ ಅಂದು ದೇವೇಗೌಡರು ಅಡ್ಡ ಬಂದಿದ್ದರು.

ಸಿದ್ದರಾಮಯ್ಯರವರಿಗೆ ಉಗ್ರ ಕ್ರಮದ ಎಚ್ಚರಿಕೆ ನೀಡಿದ ದೇವೇಗೌಡರು ಕೊನೆಗೂ ತುಮಕೂರಿಗೆ ಹೇಮಾವತಿ ನದಿ ನೀರು ಹೋಗದಂತೆ ನೋಡಿಕೊಂಡಿದ್ದರು. ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಲು ದೇವೇಗೌಡರು ಸಿದ್ಧರಾಗಿದ್ದಾರೆ ಒಂದು ವೇಳೆ ತುಮಕೂರಿನ ಜನ ಹೇಮಾವತಿ ನದಿ ನೀರನ್ನು ಗಮನದಲ್ಲಿಟ್ಟುಕೊಂಡು ಮತ ನೀಡಿದರೆ ದೇವೇಗೌಡರ ಸೋಲು ಖಚಿತ. ತಮಿಳುನಾಡಿಗೆ ಪ್ರತಿದಿನ 7ರಿಂದ 8 ಸಾವಿರ ಕ್ಯೂಸೆಕ್ ನೀರು ಹರಿದರೂ ಸಹ ಹೇಮಾವತಿ ನದಿ ನೀರು ತುಮಕೂರನ್ನು ತಲುಪಲಿಲ್ಲ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ತುಮಕೂರಿನ ಜನ ಮತ ನೀಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬಂದಿವೆ.