ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ನಿಖಿಲ್- ಈಗಲಾದರೂ ಸಿಗುವುದೇ ನ್ಯಾಯ?

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ನಿಖಿಲ್- ಈಗಲಾದರೂ ಸಿಗುವುದೇ ನ್ಯಾಯ?

ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ರವರ ಸುದ್ದಿಗೋಷ್ಠಿಯ ನಂತರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಮೊದಲಿನಿಂದಲೂ ಚುನಾವಣೆಗೂ ಹೆಚ್ಚು ನಿಖಿಲ್ ಅವರ ನಾಮಪತ್ರ ಸದ್ದು ಮಾಡುತ್ತಿದೆ. ನಿಖಿಲ್ ಕುಮಾರಸ್ವಾಮಿ ರವರ ನಾಮಪತ್ರದ ವಿಷಯದಲ್ಲಿ ಸುಮಲತಾ ಅವರ ಬೆಂಬಲಿಗರು ತಾಳ್ಮೆ ಕಳೆದುಕೊಳ್ಳುವತ್ತಾ ಸಾಗಿದ್ದಾರೆ. ಯಾಕೆಂದರೆ ಯಾವೊಬ್ಬ ಅಧಿಕಾರಿಗಳು ಸಹ ಸುಮಲತಾ ರವರ ಮನವಿಯನ್ನು ಕೇಳಿಸಿಕೊಳ್ಳುತ್ತಿಲ್ಲ. ಇತ್ತ ವಿರೋಧ ಪಕ್ಷದವರು ಸಹ ಮೌನವಾಗಿ ಕುಳಿತಿರುವ ಕಾರಣ ಎಲ್ಲರಲ್ಲೂ ಇನ್ನಿಲ್ಲದ ಅನುಮಾನಗಳು ಕಾಡತೊಡಗಿವೆ.

ಇತ್ತ ಸುದ್ದಿಗೋಷ್ಠಿ ನಡೆಸಿದ ಸುಮಲತಾ ರವರು ಸುದ್ದಿಗೋಷ್ಠಿ ಪ್ರಾರಂಭವಾದ ತಕ್ಷಣವೇ ಇಡೀ ಮಂಡ್ಯ ಜಿಲ್ಲೆಯಲ್ಲಿ ಕೇಬಲ್ ಕಟ್ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಹಲವಾರು ಸಾಮಾನ್ಯ ಜನರೂ ಸಹ ಸುಮಲತಾ ಅವರ ಮಾತಿಗೆ ಹೌದು ಕೇಬಲ್ ಕಟ್ ಆಗಿದೆ ಎಂದು ಉತ್ತರ ನೀಡಿದ್ದು ಮಾಧ್ಯಮಗಳಲ್ಲಿ ಈಗಾಗಲೇ ಪ್ರಸಾರವಾಗುತ್ತಿದೆ. ಇಂತಹ ಸಮಯದಲ್ಲಿ ರೆಡ್ ಹ್ಯಾಂಡಾಗಿ ನಿಖಿಲ್ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಮಪತ್ರದ ವಿಷಯದ ಜೊತೆಗೆ ಚುನಾವಣಾ ಮತ ಯಂತ್ರದಲ್ಲಿ ನೀಡಲಾಗಿರುವ ಕ್ರಮ ಸಂಖ್ಯೆ ಸಹ ಅಕ್ರಮವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ನಂತರ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿ ಸಂಖ್ಯೆಯನ್ನು ನೀಡಬೇಕಾಗಿತ್ತು, ಆದರೆ ನಿಖಿಲ್ ಕುಮಾರಸ್ವಾಮಿ ಅವರು ಕ್ರಮ ಸಂಖ್ಯೆ 1 ಪಡೆದುಕೊಂಡಿದ್ದಾರೆ, ನಂತರ ರಾಷ್ಟ್ರೀಯ ಪಕ್ಷವೆನಿಸಿಕೊಂಡಿರುವ ಬಿಎಸ್ಪಿ ಪಕ್ಷದ ಅಭ್ಯರ್ಥಿ ಹೆಸರು ನಮೂದಿಸಲಾಗಿದೆ.

ಈಗಾಗಲೇ ಜಿಲ್ಲಾ ಚುನಾವಣಾ ಅಧಿಕಾರಿಗೆ ಕ್ಯಾಮೆರಾಮೆನ್ ರವರನ್ನು ನಾಮಪತ್ರ ಸಲ್ಲಿಸಿದ ಮರುಕ್ಷಣ ಮದುವೆ ಚಿತ್ರೀಕರಣಕ್ಕೆ ಕಳುಹಿಸಿ, ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಯಾಗಿರುವ ಮಂಜುಶ್ರೀ ರವರು ಕ್ಯಾಮೆರಾಮೆನ್ ರವರ ಮೇಲೆ ಕ್ರಿಮಿನಲ್ ಕೇಸ್ ಅನ್ನು ದಾಖಲಿಸಿ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಇಷ್ಟೆಲ್ಲಾ ವಿದ್ಯಮಾನಗಳ ನಂತರ ಇದೀಗ ಕ್ರಮ ಸಂಖ್ಯೆಯ ವಿಚಾರ ಮತ್ತೊಮ್ಮೆ ಸದ್ದು ಮಾಡುತ್ತಿದ್ದು ವಿಷಯದ ಇದರ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಈ ವಿಷಯ ಸದ್ದು ಮಾಡುತ್ತಿದ್ದಂತೆ ನಾಮಪತ್ರ ಸಲ್ಲಿಸುವ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಮಾಡಿರುವ ಭಾಷಣದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಯಾಕೆಂದರೆ ನಾಮಪತ್ರ ಸಲ್ಲಿಸುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ರವರು ನನ್ನ ಕ್ರಮ ಸಂಖ್ಯೆ 1 ಅದಕ್ಕೆ ಮತ ನೀಡಿ ಎಂದು ಕೋರಿಕೊಂಡಿದ್ದಾರೆ. ಯಾವ ಅಭ್ಯರ್ಥಿಗೂ ನಾಮಪತ್ರ ಸಲ್ಲಿಸುವ ಮುನ್ನ ಕ್ರಮ ಸಂಖ್ಯೆ ತಿಳಿಯುವ ಸಾಧ್ಯತೆಗಳು ಬಹಳ ಕಡಿಮೆ. ಇಂತಹ ಸಮಯದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅಭ್ಯರ್ಥಿ ನಾಮಪತ್ರ ಕ್ಕೂ ಮುನ್ನ ಹೇಗೆ ತನ್ನ ಕ್ರಮ ಸಂಖ್ಯೆಯನ್ನು ಘೋಷಿಸುತ್ತಾನೆ ಎಂದು ಸುಮಲತಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾತು ನಿಖಿಲ್ ಕುಮಾರಸ್ವಾಮಿ ಅವರ ಬಾಯಿಂದ ಹೊರ ಬಿದ್ದಿರುವ ಕಾರಣ, ಅದೇ ಕ್ರಮ ಸಂಖ್ಯೆಯನ್ನು ಪಡೆಯಲು ಕುಮಾರಸ್ವಾಮಿ ರವರು ಒತ್ತಡ ಹೇರಿದ ಬಹುದು ಎಂಬ ಅನುಮಾನ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಮಂಡ್ಯ ಜಿಲ್ಲೆಯ ಚುನಾವಣಾ ಅಧಿಕಾರಿಯ ಸಹ ಉತ್ತರ ನೀಡದೆ ಜಾರಿಗೊಂಡಿರುವ ಕಾರಣ ಅನುಮಾನಗಳು ಮತ್ತಷ್ಟು ಹೆಚ್ಚಾಗಿದ್ದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಅಧಿಕಾರಿಗಳು ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೆ ಮಂಡ್ಯ ಜಿಲ್ಲೆಗೆ ಆಗಮಿಸಿರುವ ಚುನಾವಣಾ ಅಧಿಕಾರಿಗಳು ಇನ್ನು ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಇದ್ದಾರೆ.

ಈ ವಿಷಯ ತಿಳಿದ ಕೂಡಲೇ ಸುಮಲತಾ ರವರಿಗೆ ಈಗಲಾದರೂ ನ್ಯಾಯ ಸಿಗುವುದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಆರಂಭಿಸಲಾಗಿದೆ. ಈ ಚುನಾವಣೆ ಭಾರೀ ಸದ್ದು ಮಾಡುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಇಡೀ ರಾಜ್ಯವೇ ಇಂದೂ ಕಾದು ಕುಳಿತಿದೆ. ಒಂದು ವೇಳೆ ಪ್ರಕರಣ ನ ನಿರೂಪಣೆ ಗೊಂಡು ತದನಂತರ ನಿಖಿಲ್ ಕುಮಾರಸ್ವಾಮಿ ರವರು ಜಯಿಸಿದರೆ ಸಂಸದ ಸ್ಥಾನವನ್ನು ತ್ಯಜಿಸಿ ಮತ್ತೊಮ್ಮೆ ಚುನಾವಣೆಯನ್ನು ಎದುರಿಸಬೇಕಾಗುತ್ತದೆ.