ಸುಮಲತಾ ರವರಿಗೆ ಬಿಗ್ ಶಾಕ್- ನೋಟಿಸ್ ನೀಡಿದ ಜಿಲ್ಲಾಧಿಕಾರಿ. ಯಾಕೆ ಗೊತ್ತಾ??

ಸುಮಲತಾ ರವರಿಗೆ ಬಿಗ್ ಶಾಕ್- ನೋಟಿಸ್ ನೀಡಿದ ಜಿಲ್ಲಾಧಿಕಾರಿ. ಯಾಕೆ ಗೊತ್ತಾ??

ಕಳೆದ 42 ಗಂಟೆಗಳಿಂದ ನಿಖಿಲ್ ಕುಮಾರಸ್ವಾಮಿ ರವರ ನಾಮಪತ್ರದ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ನಿಖಿಲ್ ಕುಮಾರಸ್ವಾಮಿ ರವರು ಮೊದಲು ಸಲ್ಲಿಸಿದ್ದ ನಾಮಪತ್ರ ಹಳೆಯದಾಗಿದ್ದು, ಸುಮಲತಾ ಬೆಂಬಲಿಗರು ಮಾಹಿತಿ ಅರಿತು ಆರೋಪ ಮಾಡಿದ ತಕ್ಷಣ ನಾಮಪತ್ರ ಸಲ್ಲಿಸುವ ಕಾಲ ಮುಗಿದು ಹೋಗಿದ್ದರೂ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುಶ್ರೀ ರವರು ಕುಮಾರಸ್ವಾಮಿರವರ ಒತ್ತಡಕ್ಕೆ ಮಣಿದು ಎರಡನೇ ನಾಮಪತ್ರವನ್ನು ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದರಿಂದ ಕೆರಳಿದ್ದ ಸುಮಲತಾ ಬೆಂಬಲಿಗರು ಸಾಮಾನ್ಯವಾಗಿ ಮೊದಲು ಮಂಜುಶ್ರೀ ರವರನ್ನು ಭೇಟಿ ಮಾಡಿ ತಮ್ಮ ಅನುಮಾನ ವ್ಯಕ್ತ ಪಡಿಸಿದ ನಂತರ, ಮಂಜುಶ್ರೀ ರವರ ಉತ್ತರಗಳನ್ನು ಕೇಳಿ ಅನುಮಾನ ಮತ್ತಷ್ಟು ಹೆಚ್ಚಾಗಿ ಚುನಾವಣಾ ಆಯೋಗದ ಕದ ತಟ್ಟಿದ್ದರು. ಚುನಾವಣಾ ಆಯೋಗವು ಸಹ ವಿಡಿಯೋ ನೀಡುವಂತೆ ಒತ್ತಾಯ ಮಾಡಿದ ನಂತರ ಮಂಜುಶ್ರೀ ರವರು 3 ಗಂಟೆಗಳ ಕಾಲಾವಕಾಶ ಕೇಳಿದ ನಂತರ 24 ಗಂಟೆಗಳ ಆದರೂ ವಿಡಿಯೋ ನೀಡಿರಲಿಲ್ಲ ಇದರಿಂದ ಮತ್ತಷ್ಟು ವಿಚಲಿತರಾದ ಬೆಂಬಲಿಗರು ಚುನಾವಣಾ ಅಧಿಕಾರಿ ಕಚೇರಿಯ ಮುಂದೆ ಧರಣಿ ಕುಳಿತು ಕೊಳ್ಳುತ್ತಾರೆ.

ಧರಣಿಗೆ ಸುಮಲತಾ ಅಂಬರೀಶ್ ರವರು ಆಗಮಿಸಿ ಸ್ವತಹ ಮಂಜುಶ್ರೀ ರವರ ಬಳಿ ಮಾತನಾಡಿ ವಿಡಿಯೋ ನೀಡುವಂತೆ ಮನವಿ ಮಾಡಿಕೊಂಡ ನಂತರ ಕೇವಲ ಅರ್ಧ ವಿಡಿಯೋ ವನ್ನು ಬಿಡುಗಡೆ ಮಾಡಿ ಮತ್ತಷ್ಟು ಅನುಮಾನಗಳನ್ನು ಹೆಚ್ಚಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರೆಕಾರ್ಡ್ ಮಾಡಲಾದ ವಿಡಿಯೋವನ್ನು ಸಂಪೂರ್ಣವಾಗಿ ಎಡಿಟ್ ಮಾಡಿ, ಮೊದಲ ಭಾಗವನ್ನು ಮಾತ್ರ ಸುಮಲತಾ ಅಂಬರೀಶ್ ಅವರ ಬೆಂಬಲಿಗರಿಗೆ ಮಂಜುಶ್ರೀ ರವರು ನೀಡಿದ್ದಾರೆ ಎಂದು ಬೆಂಬಲಿಗರು ರೊಚ್ಚಿಗೆದ್ದಿದ್ದರು.

ಇದರಿಂದ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ಅಂಬರೀಶ್ ಅವರಿಗೆ ಭಾರಿ ಜನ ಬೆಂಬಲ ಕೇಳಿ ಬಂದಿತ್ತು ಕುಮಾರಸ್ವಾಮಿ ರವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಂಜುಶ್ರೀ ರವರನ್ನು ಒತ್ತಡಕ್ಕೆ ಒಳಪಡಿಸಿ ಈ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು . ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಕೇಳಿಬಂದ ತಕ್ಷಣ ಹಲವಾರು ಬಿಜೆಪಿ ನಾಯಕರು ಸಹ ಸುಮಲತಾ ಅಂಬರೀಶ್ ಅವರಿಗೆ ನ್ಯಾಯ ಕೊಡಿಸುವುದಕ್ಕೆ ಧರಣಿ ಕೂರುವುದಾಗಿ ಘೋಷಿಸಿದ್ದರು.

ಇಷ್ಟೆಲ್ಲಾ ವಿದ್ಯಮಾನಗಳು ನಡೆದ ನಂತರ ಸುಮಲತಾ ರವರಿಗೆ ನ್ಯಾಯ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದರು ಆದರೆ ಇದೀಗ ಸುಮಲತಾ ರವರಿಗೆ ದೊಡ್ಡ ಶಾಕ್ ಎದುರಾಗಿದ್ದು , ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಯಾಗಿರುವ ಮಂಜುಶ್ರೀ ರವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಕುಮಾರಸ್ವಾಮಿ ರವರ ವಿರುದ್ಧ ಮತ್ತಷ್ಟು ಜನ ಧ್ವನಿಯೆತ್ತಿದ್ದು ಮಂಡ್ಯ ಜಿಲ್ಲೆಯು ಕ್ಷಣಕ್ಷಣವೂ ರಣ ರಂಗವಾಗಿ ಮಾರ್ ಪಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಷ್ಟಕ್ಕೂ ಜಿಲ್ಲಾಧಿಕಾರಿ ಮಂಜುಶ್ರೀ ರವರು ಯಾವ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಗೊತ್ತಾ??

ಕೆಲವೇ ಕೆಲವು ಗಂಟೆಗಳ ಹಿಂದೆ ಸುಮಲತಾ ರವರು ಜಿಲ್ಲಾಧಿಕಾರಿಯ ನಡವಳಿಕೆಯ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿ ಈ ರೀತಿಯ ಬೆಂಬಲ ನೀಡುವುದು ಸರಿಯಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು ಇದರಿಂದ ಕೆರಳ ಇರುವವರು ಜಿಲ್ಲಾಡಳಿತ ದ ವಿರುದ್ಧ ಹೇಳಿಕೆ ನೀಡಿ ಸುಮಲತಾ ಅಂಬರೀಶ್ ರವರು ಜಿಲ್ಲಾಧಿಕಾರಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪ ಮಾಡಿ, ಸುಮಲತಾ ಅಂಬರೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಐಪಿಸಿ ಸೆಕ್ಷನ್ 189 ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು ಉತ್ತರ ನೀಡಲು ಕೇವಲ ಒಂದು ದಿನದ ಅವಕಾಶ ನೀಡಲಾಗಿದೆ.

ಮಂಜುಶ್ರೀ ರವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಈ ನಿರ್ಧಾರದ ಹಿಂದೆ ಕುಮಾರಸ್ವಾಮಿ ರವರ ಕೈವಾಡವಿದೆ, ಕುಮಾರಸ್ವಾಮಿ ಅವರು ತಮ್ಮ ಮಗನ ಸೋಲಿನ ಭಯದಿಂದ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಏನು ಮಾಡಿದರು ನಿಖಿಲ್ ಕುಮಾರಸ್ವಾಮಿ ಅವರು ಗೆಲ್ಲುವ ಸಾಧ್ಯತೆ ಇಲ್ಲ ಎಂದು ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಈಗ ಮಂಡ್ಯ ಜಿಲ್ಲೆಯು ಅಕ್ಷರಸಹ ರಣರಂಗ ವಾಗಿದ್ದು, ಸುಮಲತಾ ಅಂಬರೀಶ್ ರವರು ಮುಂದೇನು ಮಾಡುತ್ತಾರೆ ಎಂದು ಎಲ್ಲರೂ ಕಾದು ಕುಳಿತಿದ್ದಾರೆ.