ಹಾಸನ ದೋಸ್ತಿ ಸಭೆಯಲ್ಲಿ ಮೊಳಗಿದ ಬಿಜೆಪಿ ಕಹಳೆ- ನಡೆಯಲಿಲ್ಲ ರೇವಣ್ಣ ರವರ ಮಾಟ ಮಂತ್ರ, ಬಿಜೆಪಿಗೆ ಜೈಕಾರ ಕೂಗಿದ ಕಾಂಗ್ರೆಸ್ಸಿಗರು

ಹಾಸನ ದೋಸ್ತಿ ಸಭೆಯಲ್ಲಿ ಮೊಳಗಿದ ಬಿಜೆಪಿ ಕಹಳೆ- ನಡೆಯಲಿಲ್ಲ ರೇವಣ್ಣ ರವರ ಮಾಟ ಮಂತ್ರ, ಬಿಜೆಪಿಗೆ ಜೈಕಾರ ಕೂಗಿದ ಕಾಂಗ್ರೆಸ್ಸಿಗರು

ಇಷ್ಟು ವರ್ಷ ಹಾಸನ ಜಿಲ್ಲೆಯಲ್ಲಿ ಬದ್ಧ ವೈರಿಗಳಂತೆ ಕಾದಾಡಿಕೊಂಡು ರಾಜಕೀಯ ನಡೆಸಿದ ದೇವೇಗೌಡರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಪಕ್ಷದ ಮುಖಂಡರು ಮಾಡಿಕೊಂಡಿರುವ ದೋಸ್ತಿಗಾಗಿ ಬದ್ಧ ರಾಜಕೀಯ ಶತ್ರುಗಳು ಎನಿಸಿಕೊಂಡಿರುವ ಮತ್ತೊಂದು ಪಕ್ಷದ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿಲ್ಲ ಎಂಬುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಇದೇ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಜುರವರು ಬಿಜೆಪಿ ಪಕ್ಷ ಸೇರಿಕೊಂಡು ಹಾಸನ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ.

ಇತ್ತ ನರೇಂದ್ರ ಮೋದಿ ರವರ ಅಲೆಯ ಜೊತೆಗೆ ಎ ಮಂಜುರವರು ವರ್ಚಸ್ಸು ಸೇರಿಕೊಂಡಿರುವ ಕಾರಣ ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ಸೋಲನ್ನು ಕಾಣುವ ಎಲ್ಲಾ ಸಾಧ್ಯತೆಗಳಿವೆ ಎಂಬುದನ್ನು  ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ರೇವಣ್ಣ ಅವರು ಅರಿತಿದ್ದಾರೆ ಕಾರಣಕ್ಕಾಗಿಯೇ ಇದೇ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ನಾಯಕರನ್ನು ಕರೆದಿದ್ದರು. ಪರೋಕ್ಷವಾಗಿ ಕ್ಷಮೆಯನ್ನು ಸಹ ಕೇಳಿ ಕಾಂಗ್ರೆಸ್ ನಾಯಕರ ಮನವೊಲಿಸಲು ಪ್ರಯತ್ನ ಪಟ್ಟರು

ಹಲವಾರು ದಿನಗಳಿಂದ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಕಾಂಗ್ರೆಸ್ ಮುಖಂಡರ ಮನವೊಲಿಸುವಂತೆ ಕೋರಿ ಕೊಂಡಿದ್ದ ರೇವಣ್ಣ ಅವರು ಇಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನಡೆದ ಸಮಾರಂಭದಲ್ಲಿ ಮಾಟ ಮಂತ್ರ ಮಾಡುವ ರಂತೆ ಕೈತುಂಬಾ ಹತ್ತಕ್ಕೂ ಹೆಚ್ಚು ನಿಂಬೆಹಣ್ಣುಗಳನ್ನು ಹಿಡಿದುಕೊಂಡು ಗಮನ ಸೆಳೆದಿದ್ದರು. ಆದರೆ ಬಹುಶಹ ರೇವಣ್ಣ ಅವರು ಮಾಡಿದ ಎಲ್ಲಾ ಕಾರ್ಯಗಳು ವಿಫಲ ವಾದಂತೆ ಕಾಣುತ್ತಿದೆ ಯಾಕೆಂದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಿದೆ.

ಯಾವುದೇ ಕಾರಣಕ್ಕೂ ನಾವು ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿಕೆ ನೀಡಿ ಬಿಜೆಪಿ ಪಕ್ಷದ ಪರ ಘೋಷಣೆಗಳನ್ನು ಕೂಗಿ ದ್ದಾರೆ, ಈಗಾಗಲೇ ಜನಬೆಂಬಲ ನ್ನು ಹೊಂದಿರುವ ಏ ಮಂಜು ರವರಿಗೆ ಕಾಂಗ್ರೆಸ್ ಮುಖಂಡರ ಬೆಂಬಲ ಸೇರಿದಲ್ಲಿ ಪ್ರಜ್ವಲ್ ರೇವಣ್ಣ ಅವರು ಬಹಳ ಸುಲಭವಾಗಿ ಸೋಲನ್ನು ಕಾಣಲಿದ್ದಾರೆ. ಇದರಿಂದ ತಲೆ ಕೆಡಿಸಿಕೊಂಡಿರುವ ರೇವಣ್ಣ ಅವರು ಮುಂದೇನು ಎಂಬ ಚಿಂತನೆಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಿನಲ್ಲಿ ಹಾಸನ ಜಿಲ್ಲೆಯು ಸಹ ದಿನೇ ದಿನೇ ಹೊಸ ಕುತೂಹಲವನ್ನು ಮೂಡಿಸುತ್ತಿದ್ದು ಯಾವ ಪಕ್ಷದ ನಾಯಕರು ಯಾರಿಗೆ ಬೆಂಬಲ ನೀಡುತ್ತಾರೆ ಎಂದು ಇಡೀ ರಾಜ್ಯದ ಜನತೆ ಕಾದು ಕುಳಿತಿದ್ದಾರೆ.