ನಾಮಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-‌ಅಖಾಡಕ್ಕೆ ಬಿಜೆಪಿ ಹಾಗೂ ಸುಮಲತಾ, ಅಂತ್ಯ ವಾಗುತ್ತಾ ದಬ್ಬಾಳಿಕೆ ರಾಜಕಾರಣ??

ನಾಮಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-‌ಅಖಾಡಕ್ಕೆ ಬಿಜೆಪಿ ಹಾಗೂ ಸುಮಲತಾ, ಅಂತ್ಯ ವಾಗುತ್ತಾ ದಬ್ಬಾಳಿಕೆ ರಾಜಕಾರಣ??

ಮಂಡ್ಯ ಜಿಲ್ಲೆಯ ಚುನಾವಣಾ ಅಧಿಕಾರಿ ಮಂಜುಶ್ರೀ ರವರು ನಿಖಿಲ್ ರವರು ನಾಮಪತ್ರ ಸಲ್ಲಿಸಿದ ವೇಳೆಯಲ್ಲಿ ಪರಿಶೀಲನೆ ಮಾಡಲಾದ ವಿಡಿಯೋ ಬಹಿರಂಗ ಮಾಡಲು ಹಿಂದೇಟು ಹಾಕುತ್ತಿರುವುದು ಎಲ್ಲರಿಗೂ ತಿಳಿದಿದೆ. ಇರುವ ವಿಡಿಯೋವನ್ನು ತೋರಿಸದೆ 3 ಗಂಟೆಗಳ ಕಾಲ ಕಾಲಾವಕಾಶ ಕೇಳಿ ತದನಂತರ 24 ಗಂಟೆಗಳು ಕಳೆದರೂ ಮಂಜುಶ್ರೀ ರವರು ಇದುವರೆಗೂ ಯಾವುದೇ ವಿಡಿಯೋ ದಾಖಲಾತಿಯನ್ನು ಸುಮಲತಾ ಪರ ವಕೀಲರಿಗೆ ನೀಡಿಲ್ಲ. ವಿಪರ್ಯಾಸವೆಂದರೆ ಕೇವಲ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಮಾತ್ರ ಈ ಸುದ್ದಿ ಪ್ರಕಟಣೆ ಕೊಳ್ಳುತ್ತದೆ, ಸದಾ ಮಂಡ್ಯ ಜಿಲ್ಲೆಯಲ್ಲಿ ಟಿಕಾಣಿ ಹೂಡುವ ಹಲವಾರು ಮಾಧ್ಯಮಗಳು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ, ಬಹುಶಹ ಸೂಟ್ಕೇಸ್ಗಳು ಅವರನ್ನು ತಲುಪಿರಬಹುದು.

ಮಂಜುಶ್ರೀ ರವರ ಈ ನಡೆ ಕುಮಾರಸ್ವಾಮಿ ರವರು ಅವಧಿ ಮುಗಿದ ನಂತರ ನಾಮಪತ್ರದಲ್ಲಿ ದೋಷಗಳನ್ನು ಸರಿಪಡಿಸಲು ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ ಹತ್ತು ಮೂವತ್ತಕ್ಕೆ ವಿಡಿಯೋ ದಾಖಲಾತಿ ಬಿಡುಗಡೆ ಮಾಡುತ್ತೇನೆ ಎಂದಿದ್ದ ಮಂಜುಶ್ರೀ ರವರು ಇದುವರೆಗೂ ಸಹ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ ಇದರಿಂದ ಕೆರಳಿರುವ ಸುಮಲತಾ ಬೆಂಬಲಿಗರು ಚುನಾವಣಾ ಕಛೇರಿಯ ಮುಂದೆ ಧರಣಿ ಕುಳಿತಿದ್ದಾರೆ.

ಇತ್ತ ಚುನಾವಣಾ ಆಯೋಗವು ಸಹ ಕೈಕಟ್ಟಿ ಕುಳಿತಿರುವುದನ್ನು ಕಂಡು ಬೇಸತ್ತಿರುವ ಸುಮಲತಾ ಅಂಬರೀಶ್ ಅವರು ತಾವೇ ಖುದ್ದು ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ವಿಡಿಯೋ ಸಿಡಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇನ್ನು ಇದಕ್ಕೆ ಬೆಂಬಲವಾಗಿ ರಾಜ್ಯದ ಬಿಜೆಪಿ ನಾಯಕರು ಕೈಜೋಡಿಸಲು ನಿರ್ಧರಿಸಿದ್ದು, ಮೂಲಗಳ ಪ್ರಕಾರ ಹಲವಾರು ಹಿರಿಯ ನಾಯಕರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಈಗಾಗಲೇ ಸಾಮಾನ್ಯ ಜನರು ರಾಜ್ಯದ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಒಂದು ವೇಳೆ ಈ ಪ್ರಕರಣದಲ್ಲಿ ಸರಿಯಾದ ದಾಖಲೆಗಳ ಪರಿಶೀಲನೆ ಮಾಡಿ ತೀರ್ಪು ಯಾರ ಪರವಾಗಿ ಬಂದರೂ ಸಹ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಆದಕಾರಣ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ಕೇಳಿ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮೂಲಗಳು ಖುದ್ದು ಹಲವಾರು ಹಿರಿಯ ನಾಯಕರು ಸುಮಲತಾ ಅವರ ಬೆಂಬಲಕ್ಕೆ ನಿಲ್ಲಲಿದ್ದು, ನಾಮಪತ್ರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.