ಆರ್ಸಿಬಿ vs ಸಿಎಸ್ಕೆ: ಜಿದ್ದಾಜಿದ್ದಿನ ಹೋರಾಟಕ್ಕೆ ಸಿದ್ಧವಾದ ಸಂಭವನೀಯ ಆಟಗಾರರು

  • 121
    Shares

ಪ್ರತಿಬಾರಿಯಂತೆ ಭಾರೀ ಕುತೂಹಲವನ್ನು ಹುಟ್ಟುಹಾಕಿರುವ 2019ರ ಐಪಿಎಲ್ ಟೂರ್ನಿ ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಆರಂಭವಾಗಲಿದೆ. ಉದ್ಘಾಟನಾ ಕಾರ್ಯಕ್ರಮದ ವೆಚ್ಚವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಹಾಗೂ ದೇಶದ ಸೈನಿಕರ ನಿಧಿ ಗೆ ನೀಡಿರುವ ಕಾರಣ ಯಾವುದೇ ಉದ್ಘಾಟನೆ ಕಾರ್ಯಕ್ರಮ ಇಲ್ಲದಿದ್ದರೂ ಸಹ ಭಾರಿ ಸದ್ದು ಮಾಡುತ್ತಿರುವ ಈ ಬಾರಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಬದ್ಧ ವೈರಿಗಳು ಎನಿಸಿಕೊಂಡಿರುವ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಎದುರಾಳಿ ಗಳಾಗಿವೆ.

ಹಲವಾರು ವರ್ಷಗಳಿಂದ ಪ್ರಶಸ್ತಿಗೆ ಮುತ್ತಿಡಲು ಇನ್ನಿಲ್ಲದ ಸಾಹಸ ಮಾಡುತ್ತಿರುವ ಬೆಂಗಳೂರು ತಂಡವೂ ಈ ಬಾರಿಯೂ ಸಹ ಈ ಸಲ ಕಪ್ ನಮ್ದೆ ಎಂಬ ಘೋಷಣ ವಾಕ್ಯ ದಿಂದ ಕಣಕ್ಕೆ ಇಳಿದಿದೆ. ಬಲಾಡ್ಯ ಆಟಗಾರರನ್ನು ಹೊಂದಿರುವ ಬೆಂಗಳೂರು ತಂಡ ಯಾವ ರೀತಿಯ ಗೇಮ್ ಪ್ಲಾನ್ ಮೂಲಕ ಕಣಕ್ಕಿಳಿಯಲಿದೆ ಎಂದು ಬೆಂಗಳೂರು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಎರಡು ತಂಡಗಳ ನಡುವಿನ ಕಾದಾಟಕ್ಕೆ ಸಂಭಾವ್ಯ ತಂಡಗಳು ಇಂತಿವೆ.

ಸಿಎಸ್ಕೆ ಸಂಭವನಿಯ ತಂಡ:ಎಂ.ಎಸ್.ಧೋನಿ(ನಾಯಕ), ಶೇನ್ ವ್ಯಾಟ್ಸನ್, ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಕರಣ್ ಶರ್ಮಾ, ಶಾರ್ದೂಲ್ ಠಾಕೂರ್.

ಆರ್ಸಿಬಿ ಸಂಭವನೀಯ ತಂಡ: ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಎಬಿ ಡಿವಿಲಿಯರ್ಸ್, ಶಿಮ್ರೊನ್ ಹೆಟ್ಮೆಯರ್, ಮೊಯಿನ್ ಆಲಿ, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಉಮೇಶ್ ಯಾಧವ್, ಯಜುವೆಂದ್ರ ಚಹಾಲ್, ನವದೀಪ್ ಸೈನಿ, ಟಿಮ್ ಸೌಥಿ

Facebook Comments

Post Author: RAVI