ಬಿಗ್ ಬ್ರೇಕಿಂಗ್-ಹಾಸನದಲ್ಲಿ ಮೊದಲ ಬಾರಿಗೆ ಕುಟುಂಬ ರಾಜಕಾರಣದ ವಿರುದ್ಧ ತಿರುಗಿಬಿದ್ದ ಜೆಡಿಎಸ್ ಕಟ್ಟಾ ಕಾರ್ಯಕರ್ತರು. ಮಾಡಿದ್ದೇನು ಗೊತ್ತಾ??

ಬಿಗ್ ಬ್ರೇಕಿಂಗ್-ಹಾಸನದಲ್ಲಿ ಮೊದಲ ಬಾರಿಗೆ ಕುಟುಂಬ ರಾಜಕಾರಣದ ವಿರುದ್ಧ ತಿರುಗಿಬಿದ್ದ ಜೆಡಿಎಸ್ ಕಟ್ಟಾ ಕಾರ್ಯಕರ್ತರು. ಮಾಡಿದ್ದೇನು ಗೊತ್ತಾ?

ಹಾಸನದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಇನ್ನಿಲ್ಲದ ಸವಾಲುಗಳು ಎದುರಾಗುತ್ತವೆ. ಹಾಸನ ಜಿಲ್ಲೆಯ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಕಾರಣ ಸುಲಭವಾಗಿ ಗೆದ್ದು ಬಿಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ರವರು ಊಹಿಸಿದ್ದರು, ಅದೇ ಕಾರಣದಿಂದ ಸ್ವತಹ ಮಾಜಿ ಪ್ರಧಾನಿಗಳಾದ ದೇವೇಗೌಡರು ಸಹ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಹಾಸನ ಜಿಲ್ಲೆಯನ್ನು ಬಿಟ್ಟುಕೊಟ್ಟಿದ್ದರು.

ಆದರೆ ದೋಸ್ತಿ ಸರ್ಕಾರಗಳಿಗೆ ಮೊದಲ ಶಾಕ್ ನೀಡಿದ್ದ ಎ ಮಂಜುರವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈಗಾಗಲೇ ನರೇಂದ್ರ ಮೋದಿ ರವರ ಅಲೆ ಹಾಸನ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಕಾರಣ ಇದರ ಜೊತೆಗೆ ಮಂಜು ರವರ ರಾಜಕೀಯ ವರ್ಚಸ್ಸು ಸೇರಿಕೊಂಡ ಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸೋಲು ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದರು.

ಇತ್ತ ಹಲವಾರು ಕಾಂಗ್ರೆಸ್ ನಾಯಕರು ಸಹ ರೇವಣ್ಣ ರವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಕಾರಣ ಪ್ರಜ್ವಲ್ ರೇವಣ್ಣ ಅವರ ಗೆಲುವು ಮತ್ತಷ್ಟು ಕಗ್ಗಂಟಾಗಿತ್ತು. ಆದರೆ ತನ್ನ ಬಲಕ್ಕೆ ಜೆಡಿಎಸ್ ನ ಆಪ್ತ ಕಟ್ಟಾ ಕಾರ್ಯಕರ್ತರು ಇದ್ದಾರೆ ಎಂದು ಪ್ರಜ್ವಲ್ ರೇವಣ್ಣ ಅವರು ಕೊಂಚ ಧೈರ್ಯದಿಂದ ಚುನಾವಣೆಯನ್ನು ಎದುರಿಸಲು ಸಿದ್ಧರಾಗುತ್ತಿರುವಾಗ ಕೊನೆಗೂ ಕುಟುಂಬ ರಾಜಕಾರಣದಿಂದ ಬೇಸತ್ತ ಹಲವಾರು ಜೆಡಿಎಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದೇ ಮೊಟ್ಟಮೊದಲ ಬಾರಿಗೆ ಕುಟುಂಬ ರಾಜಕಾರಣದ ವಿರುದ್ಧ ಹಾಸನದ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದು ದೇವೇಗೌಡ ಹಾಗೂ ಕುಮಾರಸ್ವಾಮಿ ರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಲವಾರು ಕಾರ್ಯಕರ್ತರು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಎ ಮಂಜು ರವರಿಗೆ ಚುನಾವಣೆಯಲ್ಲಿ ಬಲ ತುಂಬಲಿದ್ದಾರೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದ್ದು, ಮೊಮ್ಮಗನ ಸೋಲಿನ ಭಯದಿಂದ ಸ್ವತಹ ದೇವೇಗೌಡರ ಕಣಕ್ಕಿಳಿದರು ಆಶ್ಚರ್ಯಪಡಬೇಕಿಲ್ಲ.