ಹಾಸನದಲ್ಲಿ ಸಿದ್ದು ಮಾತುಕತೆ ವಿಫಲ, ರೇವಣ್ಣ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಮುಖಂಡರು

ಯಾಕೋ ಸಚಿವ ರೇವಣ್ಣ ರವರ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತಿಲ್ಲ, ತನ್ನ ಮಗನನ್ನು ರಾಜಕೀಯಕ್ಕೆ ಕರೆತಂದು ಬೆಳೆಸಬೇಕು ಎಂಬುವ ಹೊತ್ತಿನಲ್ಲಿ ಇನ್ನಿಲ್ಲದ ಅಡೆತಡೆಗಳು ಎದುರಾಗುತ್ತಿವೆ. ಮೊನ್ನೆಯಷ್ಟೇ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಸೇರಿಕೊಂಡು ನರೇಂದ್ರ ಮೋದಿ ರವರ ಅಲೆಯ ಜೊತೆ ತಮ್ಮ ವರ್ಚಸ್ಸು ಬಳಸಿಕೊಂಡು ಹಸವನ್ನು ಕೇಸರಿ ಮಾಯಾ ಮಾಡಲು ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಕೆಲವು ಸಮೀಕ್ಷೆಗಳಲ್ಲಿಯೂ ಹಸದಲ್ಲಿ ಕೇಸರಿ ಬಾವುಟ ಹಾರಲಿದೆ ಎಂಬ ಮಾಹಿತಿ ಹೊರಬಿದ್ದಿರುವ ಕಾರಣ, ಸ್ವತಹ ರೇವಣ್ಣರವರು ತನ್ನ ಮಗನನ್ನು ಸ್ಪರ್ಧೆಯಿಂದ ಹಿಂದೆ ಸರಿಸಿ ಮಾಜಿ ಪ್ರಧಾನಿಗಳಾದ ದೇವೇಗೌಡರನ್ನು ಕಣಕ್ಕೆ ಇಳಿಸುವ ಚಿಂತನೆ ನಡೆಸಿದ್ದರು.

ಈಗಾಗಲೇ ಹಲವು ಮುಖಂಡರು ರೇವಣ್ಣ ರವರ ವಿರುದ್ಧ ತಿರುಗಿಬಿದ್ದಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತ್ತು. ಆದರೆ ಸಿದ್ದರಾಮಯ್ಯ ಕುದ್ದು ಬೆಂಬಲ ನೀಡುತ್ತೇನೆ ನಿನ್ನ ಮಗನಿಗೆ ಎಂದ ತಕ್ಷಣ ರೇವಣ್ಣ ರವರ ಕನಸು ಮತ್ತೆ ಅರಳಿತ್ತು. ಆದರೆ ಇದೀಗ ಆ ಕನಸು ಕೂಡ ನುಚ್ಚು ನೂರಾಗಿದೆ. ಈಗ ಪ್ರಜ್ವಲ್ ರೇವಣ್ಣ ರವರು ಮೈತ್ರಿ ಸರ್ಕಾರ ಹಲವು ಮುಖಂಡರ ಬೆಂಬಲವಿಲ್ಲದೆ ಚುನಾವಣೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ವಿಷಯ ಸಂಪೂರ್ಣ ಮಾಹಿತಿಗಾಗಿ ಸಂಪೂರ್ಣ ಓದಿ.


ಹಾಸನ ರಾಜಕೀಯಕ್ಕೆ ಸಿದ್ದರಾಮಯ್ಯ ರವರ ಎಂಟ್ರಿ ನಂತರ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದು ರೇವಣ್ಣ ರವರ ಅದೃಷ್ಟ ಬದಲಾಗಲಿದೆ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ರೇವಣ್ಣ ರವರು ಮೊದಲಿಂದಲೂ ರಾಜಕೀಯದಲ್ಲಿ ಸರ್ವಾಧಿಕಾರ ನಡೆಸುತ್ತಾರೆ ಎಂಬ ಮಾತಿ ಕೇಳಿಬಂದಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ, ಈಗ ಅದೇ ಕಾರಣಕ್ಕೆ ಹಾಸನದ ಕಾಂಗ್ರೆಸ್ ಮುಖಂಡರು ರೇವಣ್ಣ ರವರ ವಿರುದ್ಧ ಸಿಡಿದೆದ್ದಿದ್ದಾರೆ. ಹೌದು ರೇವಣ್ಣ ರವರ ಸರ್ವಾಧಿಕಾರದ ಕುರಿತು ನೇರವಾಗಿ ಸಿದ್ದರಾಮಯ್ಯ ರವರ ಮುಂದೆ ಧ್ವನಿ ಎತ್ತಿರುವ ಕಾಂಗ್ರೆಸ್ ಮುಖಂಡರು ರಾಜಿಯಾಗಲು ಒಪ್ಪುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಇಂದು ಕಾವೇರಿ ಭವನದಲ್ಲಿ ನಡೆದ ರಾಜಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ರೇವಣ್ಣ ರವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಾರೆ. ಎಲ್ಲ ಅಧಿಕಾರಿಗಳು ರೇವಣ್ಣ ರವರ ಮಾತು ಕೇಳುತ್ತಾರೆ, ನಮ್ಮ ಯಾವುದೇ ಕೆಲಸಗಳು ಇಲ್ಲಿಯವರೆಗೂ ನಡೆಯಲು ಬಿಟ್ಟಿಲ್ಲ, ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ದರ್ಬಾರು ನಡೆಸುತ್ತಿದ್ದಾರೆ, ನಮ್ಮ ಮಾತು ಎಲ್ಲು ನಡೆಯುವುದಿಲ್ಲ ಎಂದು ಅಳಲು ತೋಡಿಕೊಂಡು ರಾಜಿ ಮಾಡಿಕೊಳ್ಳಲು ಸಿದ್ದರಿಲ್ಲ ಎಂದು ವಾದಿಸಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ರವರ ಗೆಲುವು ಮತ್ತಷ್ಟು ಕಗ್ಗಂಟಾಗಿದೆ.