ಹೊರಬಿತ್ತು ಆರ್ ಸ್ ಸ್ ಮಹಾ ಸಮೀಕ್ಷೆ, ಮೋದಿ ಕೇವಲ ಅಲೆಯಲ್ಲ ಸುನಾಮಿ

ಹೊರಬಿತ್ತು ಆರ್ ಸ್ ಸ್ ಮಹಾ ಸಮೀಕ್ಷೆ, ಮೋದಿ ಕೇವಲ ಅಲೆಯಲ್ಲ ಸುನಾಮಿ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಮೀಕ್ಷೆಗಳು ಜೋರಾಗಿ ನಡೆಯುತ್ತಿವೆ. ಎಲ್ಲ ಸಮೀಕ್ಷೆಗಳಲ್ಲಿಯೂ ನರೇಂದ್ರ ಮೋದಿ ರವರ ಅಲೆ ಜೋರಾಗಿದೆ. ಇನ್ನು ಇಷ್ಟೆಲ್ಲ ಸಮೀಕ್ಷೆಗಳು ಹೊರಬಂದರು ಸಹ ಪಕ್ಷಗಳು ತಮ್ಮ ಆಂತರಿಕ ಸಮೀಕ್ಷೆಗಳಲ್ಲಿ ತೊಡಗಿಕೊಂಡಿವೆ. ಅದರಲ್ಲಿಯೂ ಮತ್ತೊಮ್ಮೆ ದೇಶದ ಅಭಿಕಾರದ ಗದ್ದುಗೆ ಏರಲು ಬರೋಬ್ಬರಿ ೨೦ ಕ್ಕೂ ಹೆಚ್ಚು ಪಕ್ಷಗಳನ್ನು ಎದುರಿಹಾಕಿಕೊಳ್ಳಬೇಕಾದ ಬಿಜೆಪಿ ಪಕ್ಷವು ಕೊಂಚ ಮುಂದಿದೆ.


ಪ್ರತಿಯೊಂದು ಪಕ್ಷಗಳಂತೆ ಕಳೆದ ಒಂದು ತಿಂಗಳಿಂದ ನಡೆದ ಆರ್ ಸ್ ಸ್ ನ ಆಂತರಿಕ ಸಮೀಕ್ಷೆ ಈದೀಗ ಹೊರಬಿದ್ದಿದ್ದು ತನ್ನ ಬಲಾಬಲದ ಲೆಕ್ಕಾಚಾರ ನಡೆಸುತ್ತಿದೆ. ಇಷ್ಟು ಸಾಕಾಗುವುದಿಲ್ಲ ಎಂದು ನರೇಂದ್ರ ಮೋದಿ ರವರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಹೆಚ್ಚಿಸಲು ಸಿದ್ಧತೆ ನಡೆಸಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೂ ಸಹ ದೋಸ್ತಿಗಳ ಮೈತ್ರಿಯಾ ನಡುವೆ ಒಂದು ವೇಳೆ ಬಿಜೆಪಿ ಪಕ್ಷ ಇಷ್ಟು ಸಾಧನೆ ಮಾಡಿದರೆ ಮೈತ್ರಿಗೆ ಬಾರಿ ಮುಖಬಂಘ ಉಂಟಾಗುತ್ತದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.


ಕಳೆದ ಒಂದು ತಿಂಗಳಿಂದ ನಡೆದ ಈ ಆಂತರಿಕ ಸಮೀಕ್ಷೆಯಲ್ಲಿ ನರೇಂದ್ರ ಮೋದಿರವರ ಅಲೆ ಜೋರಾಗಿದ್ದು ಕರ್ನಾಟಕದಲ್ಲಿ ಇಂದಿನ ಸ್ಥಿತಿಯನ್ನು ನೋಡಿದರೆ ಕನಿಷ್ಠ ೧೭ ಸೀಟುಗಳು ಗೆಲ್ಲುವ ಸಾಧ್ಯತೆಗಳಿವೆ. ಕೆಲವೊಂದು ಕ್ಷೇತ್ರಗಳಲ್ಲಿ ಬಾರಿ ಪೈಪೋಟಿ ಎದುರಾಗಲಿದೆ ಎಂಬ ಅಂಶ ಹೊರಬಿದ್ದಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಅಲೆಗೆ ದೋಸ್ತಿಗಳು ಕೊಚ್ಚಿಹೋಗಲಿದ್ದಾರೆ ಎಂಬ ಅಂಶವು ಸಹ ಹೊರಬಿದ್ದಿದೆ.

ಈ ಸಮೀಕ್ಷೆ ಹೊರಬೀಳುತ್ತಿದ್ದಂತೆ ಕರ್ನಾಟಕ ಬಿಜೆಪಿ ನಾಯಕರು ಎಚ್ಚೆದ್ದುಕೊಂಡಿದ್ದಾರೆ ಎಂಬ ಮಾಹಿತಿಯು ಸಹ ಹೊರಬಿದ್ದಿದೆ ಹಾಗೂ ಇನ್ನು ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ಹೆಣೆಯಲು ಸಿದ್ಧತೆ ಮಾಡಿಕೊಂಡಿವೆ. ಮಾನ್ಯ ಯೆಡಿಯೂರಪ್ಪ ನವರು ಕನಿಷ್ಠ ೨೨ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ ಆದ ಕಾರಣ ನರೇಂದ್ರ ಮೋದಿರವರ ಸಮಾವೇಶಗಳ ಸಂಖ್ಯೆಯೆನ್ನು ಹೆಚ್ಚು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ