ಮೋದಿ ಅಲೆ ಕಂಡು ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡ ರೇವಣ್ಣ !! ದೇವೇಗೌಡರು ಕಣಕ್ಕೆ?

ಮೋದಿ ಅಲೆ ಕಂಡು ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡ ರೇವಣ್ಣ !! ದೇವೇಗೌಡರು ಕಣಕ್ಕೆ?

ದೋಸ್ತಿಗಳು ಸೀಟು ಹಂಚಿಕೆಯ ನಂತರ ಹಾಸನ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ಹಾಕಿದಾಗ ಮೊದಲು ಧ್ವನಿಯೆತ್ತಿದ್ದು ಎ ಮಂಜುರವರು. ಮೊದಲಿಂದಲೂ ರೇವಣ್ಣ ಹಾಗೂ ಇವರು ರಾಜಕೀಯ ಶತ್ರುಗಳಾಗಿ ಬೆಳೆದು ಬಂದಿದ್ದರೂ, ಆದರೆ ಇದೀಗ ರೇವಣ್ಣ ರವರ ಮಗ ಪ್ರಜ್ವಲ್ ರೇವಣ್ಣ ರವರಿಗೆ ನಾನು ಹೇಗೆ ಕ್ಷೇತ್ರವನ್ನು ಬಿಟ್ಟು ಕೊಡಲು ಸಾಧ್ಯ, ಒಂದು ವೇಳೆ ಮೈತ್ರಿ ಧರ್ಮವನ್ನು ಗೌರವಿಸಿ ದೇವೇಗೌಡರಿಗೆ ಬಿಟ್ಟು ಕೊಡಲು ಸಿದ್ಧ ಆದರೆ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧಿಸಿದರೆ ರಾಜಕೀಯ ನಿಂತ ನೀರಲ್ಲ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂಬ ಎಚ್ಚರಿಕೆ ನೀಡಿದರು.

ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜೆಡಿಎಸ್ ಪಕ್ಷವು ಗೆಲುವು ನಮ್ಮದೇ ಎಂದು ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುತ್ತಾರೆ ಎಂದು ಹಲವು ಬಾರಿ ಹೇಳಿಕೆಗಳನ್ನು ನೀಡಿ ಅದಕ್ಕೆ ತಕ್ಕಂತೆ ಪ್ರಜ್ವಲ್ ರೇವಣ್ಣ ಅವರು ಸಹ ಹಾಸನ ಜಿಲ್ಲೆಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಿದ್ದರಾಮಯ್ಯ ರವರ ಜೊತೆ ಮಾತುಕತೆ ವಿಫಲವಾದ ನಂತರ ಎ ಮಂಜುರವರು ಒಂದು ಕ್ಷಣವು ಎದುರು ನೋಡದೆ ನೇರವಾಗಿ ಪ್ರೀತಂ ಗೌಡ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ ನೆನ್ನೆಯಷ್ಟೇ ಸೇರಿಕೊಂಡಿದ್ದರು.

ಎ ಮಂಜುರವರು ಈ ನಡೆ ಜೆಡಿಎಸ್ ಪಕ್ಷದ ನಿದ್ದೆಗೆಡಿಸುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆ ಮತ್ತಷ್ಟು ಪೂರಕ ಎಂಬಂತೆ ಪ್ರಜ್ವಲ್ ರೇವಣ್ಣ ಅವರು ಎ ಮಂಜು ರವರ ಮುಂದೆ ಚುನಾವಣೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆಲ್ಲ ಕಾರಣ ದೇವೇಗೌಡರ ಪುತ್ರ ಎಚ್ ಡಿ ರೇವಣ್ಣ, ಯಾಕೆಂದರೆ ಇಂದು ಇದ್ದಕ್ಕಿದ್ದ ಹಾಗೆ ನಡೆದ ಮಹತ್ವದ ಬೆಳವಣಿಗೆಗಳಲ್ಲಿ ರೇವಣ್ಣ ಅವರು ತಮ್ಮ ತಂದೆ ದೇವೇಗೌಡರನ್ನು ಭೇಟಿ ಯಾಗಿ ಮೊಮ್ಮಗನ ರಾಜಕೀಯದ ಭವಿಷ್ಯದ ಕುರಿತು ಮಾತನಾಡಿದ್ದಾರೆ. ಬಹಳ ಆತಂಕ ವ್ಯಕ್ತಪಡಿಸಿರುವ ರೇವಣ್ಣ ರವರು ದೇವೇಗೌಡರ ಸ್ಪರ್ಧೆ ಕುರಿತು ಮಾತನಾಡಿದ್ದಾರೆ.

ಮೋದಿ ರವರ ಅಲೆ ಹಾಗೂ ಎ ಮಂಜುರವರು ವರ್ಚಸ್ಸನ್ನು ಸ್ವತಹ ಹಾಸನದ ಜಿಲ್ಲೆಯಲ್ಲಿ ಕಂಡಿರುವ ರೇವಣ್ಣ ರವರು ತಮ್ಮ ತಂದೆಯನ್ನು ಅಖಾಡಕ್ಕೆ ಇಳಿಯಲು ಕೋರಿಕೊಂಡಿದ್ದಾರೆ, ಹಾಸನದಲ್ಲಿ ಎ ಮಂಜುರವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವ ಕಾರಣ ಪ್ರಜ್ವಲ್ ರೇವಣ್ಣ ಅವರಿಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಇದು ಮೊದಲ ಚುನಾವಣೆ ಆದ್ದರಿಂದ ರಿಸ್ಕ್ ತೆಗೆದುಕೊಳ್ಳುವುದು ಬೇಡ ಆದ್ದರಿಂದ ಸ್ವತಹ ದೇವೇಗೌಡರು ಚುನಾವಣೆಯಿಂದ ಸ್ಪರ್ಧಿಸಬೇಕು ಎಂಬ ಯೋಜನೆಯನ್ನು ರೇವಣ್ಣ ಅವರು ಮುಂದಿಟ್ಟಿದ್ದಾರೆ. ಹಾಸನ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದರು ಸಹ ಮೋದಿ ರವರ ಅಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಕೊಚ್ಚಿ ಕೊಂಡು ಹೋಗುತ್ತಾರೆ ಎಂಬುದನ್ನು ರೇವಣ್ಣ ಅವರು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.