ಸರ್ಕಾರಿ ಶಾಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೊತ್ತೊಯ್ದ ಬಿಜೆಪಿ ನಾಯಕರು

ಸರ್ಕಾರಿ ಶಾಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೊತ್ತೊಯ್ದ ಬಿಜೆಪಿ ನಾಯಕರು

0

ಸರ್ಕಾರಿ ಶಾಲೆ ಎಂದ ತಕ್ಷಣ ಹಲವಾರು ಪೋಷಕರು ಮಕ್ಕಳನ್ನು ಸೇರಿಸಲು ಹಿಂದೆ-ಮುಂದೆ ನೋಡುತ್ತಾರೆ. ಆದರೆ ಈ ಒಂದು ಶಾಲೆಯಲ್ಲಿ ಮಾತ್ರ ಪೋಷಕರು ಮಕ್ಕಳನ್ನು ಸೇರಿಸಲು ಮುಗಿಬೀಳುತ್ತಾರೆ, ಪ್ರತಿ ವರ್ಷವೂ ನೂರಾರು ಹೊಸ ವಿದ್ಯಾರ್ಥಿಗಳನ್ನು ಸೆಳೆಯುವ ಈ ಶಾಲೆಯಲ್ಲಿ ಬರೋಬ್ಬರಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದ ಈ ಸರ್ಕಾರಿ ಶಾಲೆ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಈಗ ಸದ್ದು ಮಾಡುತ್ತಿದೆ. ಈಗಾಗಲೇ ಹಲವು ಬಾರಿ ವಿದೇಶಿಗರು ಈ ಶಾಲೆಯ ಮಕ್ಕಳ ಕೌಶಲ್ಯತೆ ಕಂಡು ಬೆರಗಾಗಿದ್ದಾರೆ ಹಾಗೂ ತಾವೇ ಸ್ವತಹ ಶಾಲೆಗೆ ಆಗಮಿಸಿ ಮಕ್ಕಳನ್ನು ಮತ್ತಷ್ಟು ಪ್ರೇರೇಪಿಸುತ್ತಿದ್ದಾರೆ. ಈ ಸರ್ಕಾರಿ ಮಕ್ಕಳ ಸಾಧನೆ, ಶಾಲೆಯ ಸೌಲಭ್ಯಗಳು ಹಾಗೂ ಇದರ ಹಿಂದಿರುವ ನಾಯಕರ ಬಗ್ಗೆ ತಿಳಿಯಲು ಎರಡು ನಿಮಿಷ ಸಂಪೂರ್ಣ ಓದಿ ಬಿಡಿ.

ಬೆಂಗಳೂರಿನ ಉತ್ತರಹಳ್ಳಿ ಪ್ರದೇಶದಲ್ಲಿರುವ ಈ ಶಾಲೆ ಖಾಸಗಿ ಶಾಲೆಗಳಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಹಲವು ಬಾರಿ ಈಗಾಗಲೇ ಸಾಬೀತುಪಡಿಸಿದೆ. ಈ ಶಾಲೆಯ ಮಕ್ಕಳು ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಾಜೆಕ್ಟ್ ಗಳನ್ನು ಮಾಡಿ ಶಾಲೆಗೆ ಒಳ್ಳೆಯ ಹೆಸರು ತಂದು ಕೊಟ್ಟಿದ್ದಾರೆ. ಇನ್ನು ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಇರುವ ಸೌಲಭ್ಯಗಳನ್ನು ನೋಡಿದರೆ ನೀವು ಇದು ಸರ್ಕಾರಿ ಶಾಲೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಇಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸಲು ಉತ್ತರಹಳ್ಳಿ ಕ್ಷೇತ್ರವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಎಂಎಲ್ಎ ಕೃಷ್ಣಪ್ಪರವರು ಹಾಗೂ ಇಂದಿನ ಉತ್ತರಹಳ್ಳಿ ವಾರ್ಡಿನ ಬಿಬಿಎಂಪಿ ಕಾರ್ಪೊರೇಟರ್ ಹನುಮಂತಯ್ಯನವರ ಶ್ರಮ ಸಾಕಷ್ಟಿದೆ.

ಈ ಸರ್ಕಾರಿ ಶಾಲೆಯಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬ್ ಗಳು , ಆಡಿಯೋ ರೂಮ್, ವಿಶುಯಲ್ ರೂಮ್, ವರ್ಚುಯಲ್ ಲೈಬ್ರರಿ, ಸೈನ್ಸ್ ಲ್ಯಾಬ್ ಹೀಗೆ ಅದೆಷ್ಟೋ ಖಾಸಗಿ ಶಾಲೆಗಳು ಹೊಂದಿರದ  ಹತ್ತು ಹಲವಾರು ಸೌಲಭ್ಯಗಳನ್ನು ಈ ಶಾಲೆ ಹೊಂದಿದೆ. ಇನ್ನು ಮಕ್ಕಳಿಗೆ ಕೇವಲ ಉಚಿತ ಸಮವಸ್ತ್ರ ಕೊಡುವುದಷ್ಟೇ ಅಲ್ಲದೆ ಸ್ವತಹ ಇಲ್ಲಿನ ರಾಜಕೀಯ ನಾಯಕರು ತಾವೇ ಮುಂದೆ ನಿಂತು ಸರಿಯಾದ ಅಳತೆಯಲ್ಲಿ ಮಕ್ಕಳಿಗೆ ಹೊಲಿಗೆ ಹಾಕಿಸಿಕೊಡುತ್ತಾರೆ.ಶೂ ಗಳನ್ನೂ ಸ್ವತಹ ಇಲ್ಲಿನ ನಾಯಕರು ತಮ್ಮ ಸ್ವಂತ ಹಣದಿಂದ ಮಕ್ಕಳಿಗೆ ಅವರ ಅಳತೆಗೆ ತಕ್ಕಂತೆ ನೀಡುತ್ತಾರೆ.  ಇನ್ನು ಮಕ್ಕಳು ಆಂಗ್ಲ ಭಾಷೆಯಲ್ಲಿ ಹಿಂದೆ ಉಳಿಯಬಾರದು ಎಂದು ಆಂಗ್ಲ ಮಾಧ್ಯಮದ ಘಟಕವನ್ನು ಸಹ ಈ ಶಾಲೆಯಲ್ಲಿ ಈಗಾಗಲೇ ಆರಂಭಿಸಲಾಗಿದೆ, ತರಗತಿ ೫ ರ ನಂತರ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಪ್ರೇರೇಪಿಸಲಾಗುತ್ತದೆ.

ಇಷ್ಟೆಲ್ಲಾ ಸಕಲ ಸೌಲಭ್ಯಗಳನ್ನು ಹೊಂದಿರುವ ಉತ್ತರ ಹಳ್ಳಿಯ ಸರ್ಕಾರಿ ಶಾಲೆಗೆ ಬೆನ್ನೆಲುಬಾಗಿ ಬೆಂಗಳೂರು ದಕ್ಷಿಣದ ಶಾಸಕರು ಎಂ ಕೃಷ್ಣಪ್ಪ ಹಾಗೂ ಇಂದಿನ ಬಿಬಿಎಂಪಿ ಕಾರ್ಪೊರೇಟರ್ ಹನುಮಂತಯ್ಯ ನವರು ನಿಂತಿದ್ದಾರೆ. ಯಾವುದೇ ಸಮಯದಲ್ಲಿ ಎಂತಹ ಸೌಲಭ್ಯ ಬೇಕು ಎಂದರೆ ಸಾಕು, ತಮ್ಮ ಸ್ವಂತ ಹಣವಾದರೂ ಬಳಸಿ ಆ ಕ್ಷಣದಲ್ಲಿ ಅದನ್ನು ಒದಗಿಸುತ್ತಾರೆ ಈ ನಾಯಕರು. ಮಕ್ಕಳಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಮಕ್ಕಳನ್ನು ಮರೆತಿರುವ ಸರ್ಕಾರಗಳ ನಡುವೆ ಈ ರೀತಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಈ ನಾಯಕರಿಗೆ ನಮ್ಮದೊಂದು ಸಲಾಂ.

ಎಲ್ಲಾ ಕ್ಷೇತ್ರಗಳಲ್ಲೂ ಈ ರೀತಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ಇಂದು ಪೋಷಕರನ್ನು ಕಿತ್ತು ತಿನ್ನುತ್ತಿರುವ ಖಾಸಗಿ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ ದಯವಿಟ್ಟು ಸರ್ಕಾರವು ಇದರ ಬಗ್ಗೆ ಗಮನ ಹರಿಸಬೇಕಾಗಿ ಕೋರಿಕೊಳ್ಳುತ್ತಿದ್ದೇವೆ.