ಮೋದಿ ಟ್ರಂಪ್ ಜುಗಲ್ಬಂದಿ, ಭಾರತೀಯ ವಾಯುಪಡೆಗೆ ಆನೆ ಬಲ.

ಮೋದಿ ಟ್ರಂಪ್ ಜುಗಲ್ಬಂದಿ, ಭಾರತೀಯ ವಾಯುಪಡೆಗೆ ಆನೆ ಬಲ.

ಪುಲ್ವಾಮ ದಾಳಿಯಿಂದ ಭಯೋತ್ಪಾದನೆ ಜಗತ್ತಿಗೆ ಯಾವ ರೀತಿ ಕಂಟಕವಾಗಿದೆ ಎಂಬುದನ್ನು ಎಲ್ಲಾ ದೇಶಗಳು ಅರಿತುಕೊಂಡಂತೆ ಕಾಣುತ್ತಿದೆ ಅದರಲ್ಲಿಯೂ ಪಾಪಿ ಪಾಕಿಸ್ತಾನದ ಕುತಂತ್ರ ನೀತಿಯನ್ನು ವಿಶ್ವದ ಮುಂದೆ ಭಾರತ ತೆರೆದಿಟ್ಟಿತ್ತು. ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತು ಪಾಕಿಸ್ತಾನಕ್ಕೆ ಹಲವಾರು ಬಾರಿ ಎಚ್ಚರಿಕೆಗಳನ್ನು ನೀಡಿದರೂ ಸಹ ಪಾಕಿಸ್ತಾನವು ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಷ್ಟರಲ್ಲಾಗಲೇ ಭಾರತೀಯ ವಾಯುಪಡೆ ಪ್ರತೀಕಾರ ತೀರಿಸಿಕೊಂಡು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಕತ್ತಿ ಮಸೆದರೆ ಏನಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿತ್ತು, ನರೇಂದ್ರ ಮೋದಿರವರು ಉಗ್ರರ ದಮನ ಮಾಡಲು ಬಿಡುವ ಮಾತೇ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದರು.

ಅದೇ ನಿಟ್ಟಿನಲ್ಲಿ ಈಗ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ನರೇಂದ್ರ ಮೋದಿ ಅವರ ಸರ್ಕಾರ ಭಯೋತ್ಪಾದಕರು ಹಾಗೂ ಆತಂಕ ಸೃಷ್ಟಿಸುವ ವೈರಿಗಳನ್ನು ಸದಾ ನಿಗ್ರಹದಲ್ಲಿ ಇಡಲು ವಿಶ್ವದ ಬಲಾಡ್ಯ ದೇಶಗಳಲ್ಲಿ ಒಂದಾದ ಅಮೇರಿಕಾ ದೇಶದ ಜೊತೆ ಜೊತೆ ಕೂಡಿ ಭಾರತ ಮಹತ್ವದ ರಕ್ಷಣಾ ಸಾಮಾಗ್ರಿಗಳು ಹಾಗೂ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ನಿರ್ಮಾಣ ಮಾಡಲು ಮಾತುಕತೆ ಆರಂಭಿಸಿದೆ. ಇದೇ ಯೋಜನೆಯ ಅಡಿಯಲ್ಲಿ ಅತ್ಯಂತ ಹಗುರವಾದ ಹಾಗೂ ಬಲಾಡ್ಯವಾದ ಡ್ರೋನ್ ಗಳು ಅಷ್ಟೇ ಅಲ್ಲದೆ ಮಾನವರಹಿತ ವೈಮಾನಿಕ ವಿಮಾನಗಳು , ರೇಡಾರ್ ಗಳ ಕಣ್ಣಿಗೆ ಕಾಣಿಸದಂತಹ ಅತ್ಯಂತ ಪುಟ್ಟ ಹಾರುವ ಯಂತ್ರ ಗಳು ಹಾಗೂ ಶಸ್ತ್ರಾಸ್ತ್ರಗಳನ್ನು ತಯಾರು ಮಾಡಲು ಎರಡು ದೇಶಗಳು ಜೊತೆಯಾಗಿ ನಿಂತಿವೆ ಈ ಮೂಲಕ ಉಗ್ರರನ್ನು ದಮನ ಮಾಡಿ ವೈರಿಗಳನ್ನು ಹತ್ತಿಕ್ಕುವುದು ಭಾರತದ ಉದ್ದೇಶವಾಗಿದೆ.