ಬಿಗ್ ಬ್ರೇಕಿಂಗ್: ಕೊನೆಗೂ ಎಚ್ಚೆತ್ತುಕೊಂಡ ಸುಮಲತಾ, ಬಿಜೆಪಿ ಸೇರಲು ನಿರ್ಧಾರ !!

  • 9.1K
    Shares

ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆ ಇನ್ನಿಲ್ಲದ ಕುತೂಹಲ ಘಟ್ಟದತ್ತ ಮುನ್ನಡೆದಿದೆ, ಪ್ರತಿದಿನವೂ ಹಲವಾರು ತಿರುವುಗಳನ್ನು ಪಡೆದು ಕೊಂಡಿರುವ ಮಂಡ್ಯ ರಾಜಕೀಯವೂ ಇಂದು ಮತ್ತೊಂದು ಬೃಹತ್ ತಿರುವನ್ನು ಪಡೆದುಕೊಂಡಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಶಾಕ್ ನೀಡಲು ಸುಮಲತಾ ರವರು ಸಿದ್ಧರಾದ ಅಂತೆ ಕಾಣುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮಲತಾ ರವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಬಿಜೆಪಿ ಪಕ್ಷವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬೆಂಬಲ ನೀಡುವುದಿಲ್ಲ ಎಂದು ಅಭ್ಯರ್ಥಿ ಘೋಷಿಸುವುದಾಗಿ ಕೇವಲ ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಘೋಷಣೆ ಮಾಡಿತ್ತು.

ಆದರೆ ಸುಮಲತಾ ರವರು ಇಂದು ರಾಜಕೀಯವನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ವಿರುದ್ಧ ನೇರ ಹಣಾಹಣಿ ನಡೆಯುತ್ತಿದೆ. ಈಗಾಗಲೇ ಇಬ್ಬರು ಅಭ್ಯರ್ಥಿಗಳು ಸಹ ಮತ ಬೇಟೆಯ ಆರಂಭಿಸಿದ್ದಾರೆ, ನಿನ್ನೆ ಕುಮಾರಸ್ವಾಮಿ ರವರು ಮಗನ ಪರವಾಗಿ ನಿಲ್ಲಲು ಸುಮಲತಾ ಬೆಂಬಲಿಗರ ಪಟ್ಟಿಯನ್ನು ತರಿಸಿಕೊಂಡು ಜೆಡಿಎಸ್ ಪಕ್ಷಕ್ಕೆ ಸೆಳೆಯಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿತ್ತು.

ಬಹುಶಃ ಈ ಕಾರಣಕ್ಕಾಗಿಯೇ ಸುಮಲತಾ ರವರು ಕೊನೆಗೂ ತಮ್ಮ ನಿರ್ಧಾರವನ್ನು ಹೊರ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಕ್ಷವು ಹಲವಾರು ಬಾರಿ ತಮ್ಮ ಪಕ್ಷಕ್ಕೆ ಸ್ವಾಗತ ಮಾಡಿದರೂ, ಸುಮಲತಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ಆದರೆ ಈಗ ಸೀಟು ಹಂಚಿಕೆಯ ನಂತರ ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕಾರಣ, ಸುಮಲತಾ ರವರು ಎಚ್ಚೆತ್ತುಕೊಳ್ಳುವ ಸಮಯ ಇದೀಗ ಬಂದಂತೆ ಕಾಣುತ್ತಿದೆ ಅದಕ್ಕೆ ತಕ್ಕನಾಗಿ ಸುಮಲತಾ ಅವರು ಸಹ ಹೆಜ್ಜೆಯಿಡಲು ಸಿದ್ಧರಾಗಿದ್ದಾರೆ.

ಸುಮಲತಾ ಅಂಬರೀಶ್ ರವರ ಕುಟುಂಬಕ್ಕೆ ಬಹಳ ಆಪ್ತರಾಗಿರುವ ಎಸ್ ಎಂ ಕೃಷ್ಣ ಅವರ ಭೇಟಿಗೆ ಸುಮಲತಾ ರವರು ನಿರ್ಧರಿಸಿದ್ದಾರೆ. ಕೆಲವು ರಾಜಕೀಯ ಮೂಲಗಳ ಪ್ರಕಾರ ಎಸ್ ಎಂ ಕೃಷ್ಣ ಅವರ ಜೊತೆ ಮಾತುಕತೆ ನಡೆಸಿ ಸುಮಲತಾ ಅಂಬರೀಶ್ ರವರು ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿಂದೆಯೂ ಸಹ ಎಸ್ ಎಂ ಕೃಷ್ಣ ರವರು ಸುಮಲತಾ ರವರನ್ನು ಬಿಜೆಪಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು ಆದರೆ ಟಿಕೆಟ್ ಗಾಗಿ ಕಾಯುತ್ತಿದ್ದ ಸುಮಲತಾ ರವರಿಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟ ಮೇಲೆ ಇದೀಗ ಸ್ವತಹ ಸುಮಲತಾ ರವರೇ ಎಸ್ ಎಂ ಕೃಷ್ಣ ಅವರ ಭೇಟಿಗೆ ಅನುಮತಿ ಪಡೆದು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.

Facebook Comments

Post Author: RAVI