ಕಾಂಗ್ರೆಸ್ಗೆ ಮರ್ಮಾಘಾತ: ಬಿ ಜೆ ಪಿ ಸೇರಿದ ಜನ ನಾಯಕ, ಮಹಾರಾಷ್ಟ್ರದಲ್ಲಿ ಮತ್ತಷ್ಟು ಬಲಗೊಂಡ ಬಿಜೆಪಿ

ಕಾಂಗ್ರೆಸ್ಗೆ ಮರ್ಮಾಘಾತ: ಬಿ ಜೆ ಪಿ ಸೇರಿದ ಜನ ನಾಯಕ, ಮಹಾರಾಷ್ಟ್ರದಲ್ಲಿ ಮತ್ತಷ್ಟು ಬಲಗೊಂಡ ಬಿಜೆಪಿ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲ ಒಂದು ಶಾಕ್ ಗಳು ಎದುರಾಗುತ್ತಾ ಬಂದಿವೆ. ಚುನಾವಣೆಗೂ ಮುನ್ನವೇ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಹಲವಾರು ಪಕ್ಷಗಳು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತೊರೆದು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ದೊಡ್ಡ ದೊಡ್ಡ ಪಕ್ಷಗಳು ಮೈತ್ರಿಯನ್ನು ತೊರೆದಿರುವ ಕಾರಣ ಚಿಕ್ಕ ಚಿಕ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಪಕ್ಷವು ಬೇರೆ ವಿಧಿಯಿಲ್ಲದೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿದೆ. ಇನ್ನು ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಮಹಾರಾಷ್ಟ್ರದಲ್ಲಿ ಕೆಲವೇ ಸೀಟುಗಳನ್ನು ಕಳೆದ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತ್ತಷ್ಟು ಸೀಟುಗಳು ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ.

ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಯೋಚಿಸಿದ ಕಾಂಗ್ರೆಸ್ ಪಕ್ಷಕ್ಕೆ ಎರಡು ಪಕ್ಷಗಳು ಒಂದಾಗಿ ಶಾಕ್ ನೀಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ನಾಲ್ಕು ಸೀಟುಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಪಕ್ಷವು ಇದೀಗ 4 ಸೀಟುಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ. ಯಾಕೆಂದರೆ ಈಗಾಗಲೇ ಮಹಾರಾಷ್ಟ್ರದಲ್ಲಿ ನರೇಂದ್ರ ಮೋದಿ ಅವರ ಅಲೆ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರ ವರ್ಚಸ್ಸು ಹೆಚ್ಚಾಗಿದೆ. ಎಷ್ಟರ ಮಟ್ಟಿಗೆ ನರೇಂದ್ರ ಮೋದಿ ರವರ ಹವಾ ನಡೆಯುತ್ತಿದೆ ಎಂದರೆ ನರೇಂದ್ರ ಮೋದಿ ರವರ ಕೆಲಸವನ್ನು ನೋಡಿ ಸ್ವತಹ ವಿರೋಧ ಪಕ್ಷ ನಾಯಕನ ಪುತ್ರ ಕಾಂಗ್ರೆಸ್ ಗೆ ಕೈ ನೀಡಿದ್ದಾನೆ.

ಹೌದು ಮಹಾರಾಷ್ಟ್ರದ ವಿಪಕ್ಷ ನಾಯಕನ ಪುತ್ರ ಸುಜಯ್ ವಿಖೆ ಪಾಟೀಲ್ ರವರು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಹಮದ್ ನಗರದ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಬಿಗಿ ಹಿಡಿತವನ್ನು ಹೊಂದಿರುವ ವಿಪಕ್ಷ ನಾಯಕನ ಪುತ್ರ ಸುಜಯ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ನರೇಂದ್ರ ಮೋದಿ ರವರ ಕೆಲಸವನ್ನು ನೋಡಿ ಸ್ವತಹ ವಿಪಕ್ಷ ನಾಯಕನ ಪುತ್ರ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ವನ್ನು ಉಂಟು ಮಾಡಿದರೆ, ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಹಾಗೂ ಈ ಮೂಲಕ ನರೇಂದ್ರ ಮೋದಿ ರವರ ಅಲೆ ಎಷ್ಟಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಸಿಕ್ಕಂತಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಒಂದು ವೇಳೆ ಇದೇ ರೀತಿ ನರೇಂದ್ರ ಮೋದಿ ಅವರ ವರ್ಚಸ್ಸು ಕೆಲವೇ ಕೆಲವು ದಿನಗಳ ಕಾಲ ಮುಂದುವರೆದಲ್ಲಿ ಮೇ 23ಕ್ಕೆ ನರೇಂದ್ರ ಮೋದಿರವರು ಅಧಿಕಾರದ ಗದ್ದುಗೆ ಮತ್ತೊಮ್ಮೆ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.