ನಿಖಿಲ್ ಕೈ ಕೊಟ್ಟ ಕಾಂಗ್ರೆಸ್ ಹೈ ಕಮಾಂಡ್, ನಿಖಿಲ್ ಗೆ ಬಿಗ್ ಶಾಕ್

ನಿಖಿಲ್ ಕೈ ಕೊಟ್ಟ ಕಾಂಗ್ರೆಸ್ ಹೈ ಕಮಾಂಡ್, ನಿಖಿಲ್ ಗೆ ಬಿಗ್ ಶಾಕ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೆ ಎಂದು ಖುದ್ದು ಕುಮಾರಸ್ವಾಮಿ ರವರು ಈಗಾಗಲೇ ಘೋಷಿಸಿದ್ದಾರೆ. ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿರುವ ಕಾರಣ ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಸಹ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ಸುಮಲತಾ ಅವರು ಮೊದಲಿನಿಂದಲೂ ಒಪ್ಪಿರಲಿಲ್ಲ, ಮಂಡ್ಯ ಜಿಲ್ಲೆ ಯಿಂದಲೇ ಸ್ಪರ್ಧಿಸುತ್ತಿದ್ದೇನೆ ಎಂದು ಪಟ್ಟು ಹಿಡಿದಿದ್ದರು ಹಾಗೂ ಕೊನೆ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್ ಗಾಗಿ ಕಾಯುತ್ತೇನೆ ಒಂದು ವೇಳೆ ಟಿಕೆಟ್ ನೀಡದಿದ್ದರೆ ಮುಂದಿನ ದಾರಿ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಈಗಾಗಲೇ ಹಲವಾರು ಕಾಂಗ್ರೆಸ್ ನಾಯಕರ, ಸಿನಿಮಾ ತಾರೆಯರ ಹಾಗೂ ಪ್ರಮುಖವಾಗಿ ಭಾರಿ ಜನ ಬೆಂಬಲ ವನ್ನು ಹೊಂದಿರುವ ಸುಮಲತಾ ಅಂಬರೀಶ್ ರವರು ಒಂದು ವೇಳೆ ಪಕ್ಷೇತರ ಅಥವಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು ನಿಖಿಲ್ ಕುಮಾರಸ್ವಾಮಿ ಅವರು ಸೋಲನ್ನು ಕಾಣುವುದು ಬಹುತೇಕ ಖಚಿತ. ಈ ವಿಷಯ ಎಲ್ಲರಿಗೂ ತಿಳಿದಿತ್ತು ಇದೀಗ ಇದೇ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಧ್ವನಿ ಎತ್ತಿದೆ, ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬ್ಯಾಟಿಂಗ್ ಮಾಡಿದ್ದಾರೆ. ಇದರಿಂದ ನಿಖಿಲ್ ಕುಮಾರಸ್ವಾಮಿ ರವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ.

ಹೌದು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ ಎಂದ ತಕ್ಷಣ ಸಭೆಯಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಸುಮಲತಾ ರವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿ ಪಕ್ಷ ಬೆಂಬಲ ನೀಡುವ ಸಾಧ್ಯತೆ ಇದೆ ಒಂದು ವೇಳೆ ಅದೇ ನಡೆದಲ್ಲಿ ಸುಮಲತಾ ಅವರು ಬಹಳ ಸುಲಭವಾಗಿ ಗೆದ್ದು ಬರುತ್ತಾರೆ, ಇಂತಹ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಯಾಕೆ ಬಿಟ್ಟು ಕೊಡಬೇಕು ಎಂಬ ಪ್ರಶ್ನೆ ಕರ್ನಾಟಕದ ರಾಜಕೀಯ ನಾಯಕರಿಗೆ ಕೇಳಲಾಗಿದೆ.

ಇದು ಪಕ್ಷದ ಹಿರಿಯ ನಾಯಕರ ನಿರ್ಧಾರ ಎಂದ ತಕ್ಷಣ ನೇರವಾಗಿ ಈ ನಿರ್ಧಾರ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರವರ ವೈಯಯುಕ್ತ ನಿರ್ಧಾರವಾಗಿದ್ದು ಇದಕ್ಕೆ ಹಲವಾರು ಕಾಂಗ್ರೆಸ್ ನಾಯಕರ ಅಸಮಾಧಾನ ಸಹ ಇದೆ ಎಂಬುದು ಹೈಕಮಾಂಡ್ಗೆ ತಿಳಿದುಬಂದಿದೆ. ಇದರಿಂದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರವರು ತೀವ್ರ ಮುಜುಗರಕ್ಕೆ ಉಂಟಾದ ಘಟನೆಯೂ ನಡೆದಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇಂತಹ ಸಮಯದಲ್ಲಿ ಈ ರೀತಿಯ ಪ್ರಶ್ನೆ ಇದೀಗ ಉದ್ಭವಿಸಿರುವ ಕಾರಣ ಮಂಡ್ಯ ಜಿಲ್ಲೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಟಿಕೆಟ್ ಗಾಗಿ ಹಣಾಹಣಿ ನಡೆಯಲಿದೆ. ಒಂದು ವೇಳೆ ಅದು ನಡೆದಲ್ಲಿ ಕಾಂಗ್ರೆಸ್ ಪಕ್ಷ ಹೇಳಿದ ಹಾಗೆ ಜೆಡಿಎಸ್ ಪಕ್ಷ ಕೇಳಬೇಕಾಗುತ್ತದೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗುತ್ತದೆ.