ಖರ್ಗೆ ಸೋಲು ಫಿಕ್ಸ್ ! ಜಾದವ್ ಬೆಂಬಲಕ್ಕೆ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಪುತ್ರ !!

ಖರ್ಗೆ ಸೋಲು ಫಿಕ್ಸ್ ! ಜಾದವ್ ಬೆಂಬಲಕ್ಕೆ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಪುತ್ರ !!

ಮಲ್ಲಿಕಾರ್ಜುನ ಖರ್ಗೆ ರವರಿಗೆ 2019 ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ತಮ್ಮ ಕೊನೆಯ ಚುನಾವಣೆಗೆ ಇನ್ನಿಲ್ಲದ ಸವಾಲುಗಳು ಎದುರಾಗುತ್ತಿವೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದು ಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದು ಬಹಳ ಕಷ್ಟ ವೆನಿಸಿದೆ, ಒಂದಲ್ಲ ಒಂದು ಕಡೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗಾಗಲೇ ಹಲವಾರು ತೊಂದರೆಗಳು ಎದುರಾಗಿವೆ. ತಮ್ಮದೇ ಪಕ್ಷದ ಮಾಜಿ ಶಾಸಕ ಉಮೇಶ್ ಜಾಧವ್ ರವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತೊಡೆತಟ್ಟಿ ಇರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇಷ್ಟು ಸಾಲದು ಎಂಬಂತೆ ಈಗಾಗಲೇ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಶಾಸಕರಾಗಿರುವ ಹಲವಾರು ನಾಯಕರು ಉಮೇಶ್ ಜಾದವ್ ಅವರ ಪರವಾಗಿ ನಿಂತಿದ್ದಾರೆ. ಹಲವಾರು ಸಮುದಾಯಗಳು ಉಮೇಶ್ ಜಾದವ್ ಅವರ ಬೆಂಬಲಕ್ಕೆ ನಿಂತಿರುವ ಕಾರಣ ಖರ್ಗೆ ರವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಉಮೇಶ್ ಜಾದವ್ ರವರು ಬಿಜೆಪಿ ಪಕ್ಷ ಸೇರಿಕೊಂಡ ನಂತರ ನನ್ನ ಬಳಿ ಅಸ್ತ್ರಗಳಿವೆ ಸಮಯ ಬಂದಾಗ ಪ್ರಯೋಗಿಸುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಇದೀಗ ಆ ಸಮಯ ಬಂದಂತೆ ಕಾಣುತ್ತಿದೆ ಒಂದಲ್ಲ ಒಂದು ಸವಾಲು ಗಳು ಮಲ್ಲಿಕಾರ್ಜುನ ಖರ್ಗೆ ರವರ ಕದ ಕದ ತಟ್ಟುತ್ತಿವೆ.

ಇನ್ನು ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕಲಬುರ್ಗಿ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ವೈಜನಾಥ್ ಪಾಟೀಲ್ ರವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಗುಡುಗಿ ಏಕಾಏಕಿ ಪಕ್ಷದ ಎಲ್ಲಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಶಾಕ್ ನೀಡಿದ್ದರು. ಇಷ್ಟು ಸಾಲದು ಎಂಬಂತೆ ಈಗ ಮಲ್ಲಿಕಾರ್ಜುನ ಖರ್ಗೆ ರವರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ, ಮಲ್ಲಿಕಾರ್ಜುನ ಖರ್ಗೆ ರವರ ಆಪ್ತಮಿತ್ರ ಎನಿಸಿಕೊಂಡಿದ್ದ ಧರ್ಮಸಿಂಗ್ ರವರ ಪುತ್ರ ಬಹು ದೊಡ್ಡ ಶಾಕ್ ನೀಡಿದ್ದಾರೆ.

ಕೆಲವು ಮೂಲಗಳ ಪ್ರಕಾರ ಧರ್ಮಸಿಂಗ್ ರವರ ಮಗ ಅಜಯ್ ಸಿಂಗ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಯಾದವ್ ಅವರ ಬೆಂಬಲಕ್ಕೆ ನಿಲ್ಲುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪೂರಕ ಎಂಬಂತೆ ಎಲ್ಲ ಅಸ್ತ್ರಗಳನ್ನು ಸಮಯ ಬಂದಾಗ ಪ್ರಯೋಗಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಉಮೇಶ್ ಜಾದವ್ ರವರಿಗೆ ಸಾಮಾಜಿಕ ಜಾಲತಾಣದ ಅಕೌಂಟಿನಲ್ಲಿ ಅಜಯ್ ಸಿಂಗ್ ರವರು ಗ್ರೇಟ್ ಜಾದವ್ ಜೀ ಎಂದು ಕಾಮೆಂಟ್ ಮಾಡಿದ್ದಾರೆ. ಮೊದಲಿನಿಂದಲೂ ಉಮೇಶ್ ಜಾದವ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್ ಆಪ್ತ ಬಣದಲ್ಲಿ ಕಾಣಿಸಿಕೊಂಡಿರುವ ಅಜಯ್ ಸಿಂಗ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಉಮೇಶ್ ಜಾದವ್ ರವರಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಇವರೆಲ್ಲರ ಬೆಂಬಲವಿಲ್ಲದೆ ಮಲ್ಲಿಕಾರ್ಜುನ ಖರ್ಗೆ ರವರ ಗೆಲುವು ಸಾಧ್ಯವೇ ಇಲ್ಲ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.