ಹಿರಿಯ ಕಾಂಗ್ರೆಸ್ ನಾಯಕ ರಾಜೀನಾಮೆ, ಖರ್ಗೆ ಗೆ ಬಿಗ್ ಶಾಕ್, ಬಿಜೆಪಿಗೆ ಆನೆಬಲ

2019 ರ ಮಹಾ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದಲ್ಲಿ ಮಹತ್ವದ ಘಟನೆಗಳು ಸಂಭವಿಸುತ್ತಿವೆ. ಪುತ್ರನ ವ್ಯಾಮೋಹ ಕ್ಕಾಗಿ ಉಳಿದ ನಾಯಕರನ್ನು ಮಲ್ಲಿಕಾರ್ಜುನ ಖರ್ಗೆ ಅವರು ಕಡೆಗಣಿಸಿದ್ದಾರೆ ಎಂಬ ಆರೋಪದಿಂದ ಈಗಾಗಲೇ ಹಲವಾರು ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ತಿರುಗಿಬಿದ್ದಿದ್ದಾರೆ, ಇನ್ನು ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಉಮೇಶ್ ಜಾದವ್ ರವರು ರಾಜೀನಾಮೆ ಪತ್ರವನ್ನು ನೀಡಿ ಅಂಗೀಕಾರ ವಾಗುವ ಮುನ್ನವೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗುವಂತೆ ಮಾಡಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ಉಮೇಶ್ ಜಾದವ್ ರವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಹಲವಾರು ಶಾಸಕರನ್ನು ತನ್ನ ಬೆಂಬಲದಲ್ಲಿ ಇಟ್ಟುಕೊಂಡಿರುವ ಉಮೇಶ್ ಜಾದವ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿ ಮಾಡುತ್ತಿದ್ದಾರೆ, ಎತ್ತ ನೋಡಿದರೂ ಉಮೇಶ್ ಜಾಧವ ರವರ ಹವಾ ಜೋರಾಗಿ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಾಂಗ್ರೆಸ್ ಪಕ್ಷದ ಅಧಿಕೃತ ಪುಟ ಗಳಲ್ಲಿ ನಡೆದ ಪೋಲ್ ಗಳಲ್ಲಿ ಉಮೇಶ್ ಜಾದವ್ ರವರು ಬಹಳ ಸುಲಭವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹಲವಾರು ಸಮುದಾಯಗಳ ಬೆಂಬಲವನ್ನು ಹೊಂದಿರುವ ಉಮೇಶ್ ಜಾದವ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ರವರನ್ನು ಬಹಳ ಸುಲಭವಾಗಿ ಸೋಲಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರದಲ್ಲಿ ಮತ್ತೊಂದು ಭಾರಿ ಮುಖಭಂಗ ಉಂಟಾಗಿದೆ. ಈಗಾಗಲೇ ನರೇಂದ್ರ ಮೋದಿ ರವರ ಅಲೆ ಹಾಗೂ ಉಮೇಶ್ ಜಾದವ್ ರವರ ವರ್ಚಸ್ಸು ಸೇರಿಕೊಂಡು ಮಲ್ಲಿಕಾರ್ಜುನ ಖರ್ಗೆ ರವರನ್ನು ಸೋಲಿಸಲು ಸಿದ್ಧವಿರುವಾಗ ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತೊಬ್ಬ ಹಿರಿಯ ನಾಯಕ ಸಿಡಿದೆದ್ದಿದ್ದಾರೆ, ಕಲಬುರ್ಗಿ ಕ್ಷೇತ್ರದಲ್ಲಿ ಭಾರಿ ವರ್ಚಸ್ ಹೊಂದಿರುವ ಮಾಜಿ ಸಚಿವ ವೈಜನಾಥ ಪಾಟೀಲ್ ರವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದ್ದಕ್ಕಿದ್ದಂತೆ ಸಿಡಿದೆದ್ದಿರುವ ವೈಜನಾಥ್ ಪಾಟೀಲ್ ರವರು ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ಗುಡುಗಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಯ ಅನುದಾನ ಸಂಪೂರ್ಣವಾಗಿ ಇದುವರೆಗೂ ಬಳಕೆಯಾಗುತ್ತಿಲ್ಲ. ಅಲ್ಲದೆ 371 ಜೆ ಕಾಯ್ದೆಯನ್ನು ಇದುವರೆಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಯಾವ ಸರ್ಕಾರವೂ ಸಹ ಈ ಭಾಗದ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಆಸಕ್ತಿ ತೋರುತ್ತಿಲ್ಲ. ಇಷ್ಟೆಲ್ಲಾ ಆರೋಪಗಳನ್ನು ಮಾಡಿರುವ ವೈಜನಾಥ್ ಪಾಟೀಲ್ ರವರು ಈ ಎಲ್ಲಾ ಬೆಳವಣಿಗೆಗಳಿಂದ ರಾಜೀನಾಮೆ ಪತ್ರವನ್ನು ದಿನೇಶ್ ಗುಂಡೂರಾವ್ ರವರಿಗೆ ರವಾನಿಸಿದ್ದಾರೆ. ಇನ್ನು ವೈಜನಾಥ್ ಪಾಟೀಲ್ ರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ಕಣಕ್ಕಿಳಿಯುವ ಉಮೇಶ್ ಜಾದವ್ ರವರನ್ನು ಬೆಂಬಲಿಸಿದ್ದಾರೆ.