ಸುಮಲತಾ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕ: ಮೈತ್ರಿ ಗೆ ಮತ್ತೊಂದು ಶಾಕ್

ಸುಮಲತಾ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕ: ಮೈತ್ರಿ ಗೆ ಮತ್ತೊಂದು ಶಾಕ್

ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿರುವ ಕುಮಾರಸ್ವಾಮಿರವರ ಅದೃಷ್ಟ ಯಾಕೋ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ ಪ್ರತಿಬಾರಿಯೂ ಮೈತ್ರಿ ಪಕ್ಷವಾದ ಕಾಂಗ್ರೆಸ್ ನಾಯಕರು ಹಲವಾರು ಬಾರಿ ಕುಮಾರಸ್ವಾಮಿ ಅವರ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದಾರೆ. ಇನ್ನು ಕೆಲವು ಕಾಂಗ್ರೆಸ್ ನಾಯಕರು ಈಗಲೂ ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಮಾತನಾಡಿ ಕುಮಾರಸ್ವಾಮಿರವರ ನಿದ್ದೆಗೆಡಿಸಿದ್ದಾರೆ ಅಷ್ಟೇ ಅಲ್ಲದೇ ಕೇವಲ 37 ಸೀಟು ಗೆದ್ದು ಮುಖ್ಯಮಂತ್ರಿಯಾಗಿ ರುವುದರಿಂದ ಕುಮಾರಸ್ವಾಮಿ ಅವರು ಹಲವಾರು ಟೀಕೆಗಳನ್ನು ಎದುರಿಸುವ ಪರಿಣಾಮ ಎದುರಾಗಿದೆ. ಈಗಾಗಲೇ ಹಲವಾರು ಬಾರಿ ಕುಮಾರಸ್ವಾಮಿ ರವರು ಸಹ ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತು ರಾಜಿನಾಮೆ ನೀಡುವ ಮಾತನ್ನು ಸಹ ಆಡಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರನನ್ನು ಅಖಾಡಕ್ಕೆ ಇಳಿಸಲು ನಿರ್ಧರಿಸಿರುವ ಕುಮಾರಸ್ವಾಮಿ ರವರಿಗೆ ಇನ್ನಿಲ್ಲದ ತಕರಾರುಗಳು ಎದುರಾಗುತ್ತವೆ. ಪ್ರತಿದಿನವೂ ಒಂದೊಂದು ಹೊಸ ಸಮಸ್ಯೆ ಎದುರಾಗುತ್ತಿದ್ದು, ಕುಮಾರಸ್ವಾಮಿ ರವರಿಗೆ ತನ್ನ ಮಗನ ರಾಜಕೀಯ ಭವಿಷ್ಯದ ಚುನಾವಣೆ ಎನಿಸಿಕೊಂಡಿರುವ ಮೊಟ್ಟ ಮೊದಲ ಚುನಾವಣೆಯಲ್ಲಿ ಭಾರಿ ಸವಾಲುಗಳು ಎದುರಾಗುತ್ತಿವೆ. ಕುಮಾರಸ್ವಾಮಿರವರ ಸಹೋದರ ಕೂಡ ಸುಮಲತಾ ರವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬಗ್ಗೆ ಕುಮಾರಸ್ವಾಮಿ ಅವರು ಸಹ ಸರಿಯಾದ ಪ್ರತಿಕ್ರಿಯೆಯನ್ನೂ ನೀಡದೆ ಮತ್ತಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇಷ್ಟು ಸಾಲದು ಎಂಬಂತೆ ಮೊದಲಿಂದಲೂ ಕುಮಾರಸ್ವಾಮಿ ರವರ ವಿರುದ್ಧ ಕಿಡಿಕಾರಿದ ಬರುತ್ತಿರುವ ಕಾಂಗ್ರೆಸ್ ಶಾಸಕ ಸುಧಾಕರ್ ಅವರು ಇದೀಗ ಕುಮಾರಸ್ವಾಮಿ ರವರ ವಿರುದ್ಧ ತಿರುಗಿಬಿದ್ದಿದ್ದಾರೆ. ಮೊನ್ನೆಯಷ್ಟೇ ನಿಗಮ ಮಂಡಳಿ ಸ್ಥಾನ ದ ಬಗ್ಗೆ ಮಾತನಾಡಿದ್ದ ಸುಧಾಕರ್ ಅವರು ಪುಟಗೋಸಿ ಸ್ಥಾನ ಯಾರಿಗೆ ಬೇಕು ಎಂದು ಕುಮಾರಸ್ವಾಮಿ ರವರ ವಿರುದ್ಧ ಕಿಡಿಕಾರಿದರು. ಇದೀಗ ಸುಧಾಕರ್ ರವರು ಸುಮಲತಾ ಅಂಬರೀಶ್ ಅವರ ಪರ ಬ್ಯಾಟ ಬೀಸಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅಂಬರೀಶ್ ರವರಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದೆ, ಎಷ್ಟರ ಮಟ್ಟಿಗೆ ಎಂದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ನಿಖಿಲ್ ಕುಮಾರಸ್ವಾಮಿ ರವರಿಗೆ ಸ್ಪರ್ಧೆ ಪೈಪೋಟಿ ನೀಡಲಿದ್ದಾರೆ, ಅದೇ ಒಂದು ವೇಳೆ ಬಿಜೆಪಿ ಪಕ್ಷ ಸೇರಿಕೊಂಡು ಕಣಕ್ಕಿಳಿದಿದ್ದಲ್ಲಿ ಖಚಿತವಾಗಿಯೂ ನಿಖಿಲ್ ಕುಮಾರಸ್ವಾಮಿ ರವರಿಗೆ ಸೋಲು ತೋರಿಸುತ್ತಾರೆ.

ಇಂತಹ ಸಮಯದಲ್ಲಿ ಚಿಕ್ಕಬಳ್ಳಾಪುರ ಶಾಸಕರಾಗಿರುವ ಸುಧಾಕರ್ ಅವರು, ಸುಮಲತಾ ಅಂಬರೀಶ್ ರವರ ಪರವಾಗಿ ನಿಂತು ಮಂಡ್ಯದ ಜನತೆ ಅಂಬರೀಶ್ ಅಣ್ಣನವರನ್ನು ಸುಮಲತಾ ಅವರಲ್ಲಿ ಕಾಣುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ,ಸುದ್ದಿಗಾರರೊಂದಿಗೆ ಮಾತನಾಡಿದ  ಸುಧಾಕರ್ಅ ವರು, ಸುಮಲತಾ ಅವರು ಈಗಾಗಲೇ ಸಾಕಷ್ಟು ನೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದ ಜನರ ಮೇಲಿನ ಪ್ರೀತಿ ವಿಶ್ವಾಸ ಧೈರ್ಯ ತೋರಿ ರಾಜಕಾರಣಕ್ಕೆ ಬರುತ್ತಿದ್ದಾರೆ ಅದನ್ನು ಎಲ್ಲರೂ ಮೆಚ್ಚಬೇಕು ಎಂದರು. ಈ ಮೂಲಕ ರೇವಣ್ಣ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಒಪ್ಪಿಗೆ ನೀಡದ ಸುಧಾಕರ್ ಅವರು ಒಂದು ವೇಳೆ ಅದೇ ನಡೆದಲ್ಲಿ ವಿರೋಧ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇನ್ನು ಇಂದಿನ ಸಂಸದರಾಗಿರುವ ವೀರಪ್ಪ ಮೊಯಿಲಿ ರವರಿಗೆ ಟಿಕೆಟ್ ನೀಡಿದರೆ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಕುಮಾರಸ್ವಾಮಿ ರವರಿಗೆ ಹೊಸ ತಲೆನೋವು ತಂದೊಡ್ಡಿದ್ದಾರೆ.