ಭಾರತೀಯ ಯೋಧನನ್ನು ಅಪಹರಿಸಿದ ಹೇಡಿಗಳು, ಕಾರ್ಯಾಚರಣೆ ಆರಂಭ

ಭಾರತೀಯ ಯೋಧನನ್ನು ಅಪಹರಿಸಿದ ಹೇಡಿಗಳು, ಕಾರ್ಯಾಚರಣೆ ಆರಂಭ

ಜಮ್ಮು-ಕಾಶ್ಮೀರದಲ್ಲಿ ಒಂದು ಕಡೆ ಸೇನಾಪಡೆಯು ಉಗ್ರರನ್ನು ಶತಾಯಗತಾಯ ಮುಗಿಸಲು ಕಾರ್ಯಾಚರಣೆಯ ಮೇಲೆ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಗ್ರರು ಹೇಡಿ ಕೃತ್ಯಗಳನ್ನು ಮಾಡಲು ನಿರ್ಧರಿಸಿದಂತೆ ಕಾಣುತ್ತಿದೆ. ಮೊನ್ನೆಯಷ್ಟೇ ಅಮಾಯಕ ನಾಗರಿಕರ ಮೇಲೆ ಗ್ರೆನೇಡ್ ದಾಳಿಯನ್ನು ಮಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಉಗ್ರರು ಈಗ ಭಾರತೀಯ ಯೋಧನನ್ನು ಅಪಹರಿಸಿದ್ದಾರೆ. ಇದರಿಂದ ಸೇನೆ ಮತ್ತಷ್ಟು ಕೆರಳಿದ್ದು ಉಗ್ರರ ವಿರುದ್ಧ ಈಗಾಗಲೇ ಸೇನೆಯು ಯೋಧನ ಗ್ರಾಮದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

ಹೌದು ಜಮ್ಮು-ಕಾಶ್ಮೀರದ ಬಂಡ್ಗಾವ್ ಎಂಬ ಪ್ರದೇಶದಲ್ಲಿ ರಜೆಯ ಮೇಲೆ ಇದ್ದ ಯೋಧನನ್ನು ಉಗ್ರರು ಅಪಹರಿಸಿದ್ದಾರೆ. ಯೋಧನ ಕೈಯಲ್ಲಿ ಬಂದೂಕು ಇಲ್ಲದ ಸಮಯ ನೋಡಿಕೊಂಡು ರಜೆಯ ಮೇಲಿದ್ದ ಯೋಧನನ್ನು ಅಪಹರಣ ಮಾಡುವ ಮೂಲಕ ಹೇಡಿಗಳು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸೇನಾ ಸಿಬ್ಬಂದಿ ಹಾಗೂ ಪೊಲೀಸರು ಗ್ರಾಮಕ್ಕೆ ತೆರಳಿದ್ದು ಶೋಧ ಕಾರ್ಯಾಚರಣೆ ಈಗಾಗಲೇ ಆರಂಭಗೊಂಡಿದೆ. ತನ್ನ ಕುಟುಂಬದ ಜೊತೆ ಕಾಲಕಳೆಯಲು ಫೆಬ್ರವರಿ 26 ನೇ ತಾರೀಖಿನಿಂದ ಮಾರ್ಚ್ ಮೂವತ್ತರ ತಾರೀಖಿನವರೆಗೆ ರಜೆಯಲ್ಲಿ ಮಹಮ್ಮದ್ ಯಾಸೀರ್ ಎಂಬ ಭಾರತೀಯ ಯೋಧ ತನ್ನ ಊರಿಗೆ ತೆರಳಿದ್ದರು ಈ ಸಮಯದಲ್ಲಿ ಉಗ್ರರು ಅಪಹರಿಸಿದ್ದಾರೆ.