ಮಹಾ ಸಮೀಕ್ಷೆ:ಮೋದಿ ಗೆ ಭರ್ಜರಿ ಗೆಲುವು, ನಮೋ ಜನಪ್ರಿಯತೆ ಕಂಡು ಪಾತಾಳಕ್ಕಿಳಿದ ರಾಹುಲ್, ಮಹಾಘಟಬಂಧನ್ ಗೆ ಶಾಕ್

ಮಹಾ ಸಮೀಕ್ಷೆ:ಮೋದಿ ಗೆ ಭರ್ಜರಿ ಗೆಲುವು, ನಮೋ ಜನಪ್ರಿಯತೆ ಕಂಡು ಪಾತಾಳಕ್ಕಿಳಿದ ರಾಹುಲ್, ಮಹಾಘಟಬಂಧನ್ ಗೆ ಶಾಕ್

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇಶದ ಪ್ರತಿಷ್ಠಿತ ಸಂಸ್ಥೆಗಳು ಸಮೀಕ್ಷೆಯಲ್ಲಿ ತೊಡಗಿಕೊಂಡಿವೆ. ಇನ್ನು ಮುಂದಿನ ಲೋಕಸಭಾ ಚುನಾವಣೆ ದೇಶದ ಮೂರನೇ ಪಾಣಿಪತ್ ಕದನ ಎಂದೇ ಬಿಂಬಿತವಾಗುತ್ತಿರುವ ಸಮಯದಲ್ಲಿ ನರೇಂದ್ರ ಮೋದಿ ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಂದು ಸಮೀಕ್ಷೆಗಳು ಹೇಳು ತೊಡಗಿವೆ. ಬರೋಬ್ಬರಿ 20 ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ಶಾಸಕ ನರೇಂದ್ರ ಮೋದಿಯವರ ಅಲೆಯನ್ನು ತಡೆಯಲಾರದೆ ಕೊಚ್ಚಿಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ ಎಂಬಂತೆ ಎಲ್ಲಾ ಸಮೀಕ್ಷೆಗಳು ಫಲಿತಾಂಶವನ್ನು ಹೊರ ಹಾಕುತ್ತೇವೆ ಈಗ ಮತ್ತೊಂದು ಸಮೀಕ್ಷೆ ಹೊರ ಬಂದಿದ್ದು ರಾಹುಲ್ ಗಾಂಧಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪ್ರತಿಯೊಂದು ಸಮೀಕ್ಷೆಯಲ್ಲಿ ಯೂ ನರೇಂದ್ರ ಮೋದಿರವರು ಜನಪ್ರಿಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ, ಪ್ರತಿಯೊಂದು ಸಮೀಕ್ಷೆಗಳಿಂದ ನರೇಂದ್ರ ಮೋದಿ ಅವರ ಅಲ್ಲಿ ಭಾರತದಲ್ಲಿ ಇದೆ ಎಂಬುದನ್ನು ತೋರಿಸುತ್ತಿತ್ತು ಆದರೆ ಈ ಮಹಾ ಸಮೀಕ್ಷೆ ನರೇಂದ್ರ ಮೋದಿ ಅವರ ಅಲೆ ಕೇವಲ ಅಲೆಯಾಗಿ ಉಳಿದುಕೊಂಡಿಲ್ಲ ಬದಲಾಗಿ ಸುನಾಮಿಯಾಗಿ ಪರಿವರ್ತನೆಗೊಂಡು ಮಹಾಘಟಬಂಧನ ಎಂಬ ಪ್ರಾದೇಶಿಕ ಪಕ್ಷಗಳ ಒಗ್ಗಟ್ಟನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲಿದೆ ಎಂಬುದು ಬಯಲಾಗಿದೆ. ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳಿಗೂ ಈ ಫಲಿತಾಂಶ ಭರ್ಜರಿ ಶಾಕ್ ನೀಡಿದ್ದು ಫಲಿತಾಂಶದ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಜನವರಿ ತಿಂಗಳಿನಲ್ಲಿ ನಡೆದ ಜನಪ್ರಿಯತೆಯ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರು ಶೇಕಡ 32ರಷ್ಟು ಮತಗಳನ್ನು ಪಡೆದಿದ್ದರು, ಅಂದು ರಾಹುಲ್ ಗಾಂಧಿ ರವರು ಶೇಕಡ 23 ರಷ್ಟು ಮತಗಳನ್ನು ಪಡೆದು ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡಿರುವುದಾಗಿ ದೇಶದ ಮುಂದೆ ತೋರಿಸಿ ಕೊಂಡಿದ್ದರು ಆದರೆ ನರೇಂದ್ರ ಮೋದಿ ರವರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ ನಂತರ ನರೇಂದ್ರ ಮೋದಿ ಅವರ ಜನಪ್ರಿಯತೆ ಶೇಕಡ 39 ಕ್ಕೆ ಏರಿತ್ತು. ಅಂದು ರಾಹುಲ್ ಗಾಂಧಿ ಅವರ ಜನಪ್ರಿಯತೆ ಕುಸಿದು ಶೇಕಡ 18 ಕ್ಕೆ ತಲುಪಿತ್ತು.

ಇಷ್ಟೆಲ್ಲಾ ವಿದ್ಯಮಾನಗಳು ನಡೆದ ಮೇಲೆ ಭಾರತೀಯ ವಾಯುಪಡೆಯು ಫೆಬ್ರವರಿ 26ರಂದು ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದಾಗ ನರೇಂದ್ರ ಮೋದಿ ಅವರ ಜನಪ್ರಿಯತೆ ಇದ್ದಕ್ಕಿದ್ದಂತೆ ಶೇಕಡ 51 ಕ್ಕೆ ತಲುಪಿತ್ತು ಇದಾದ ನಂತರ ರಾಹುಲ್ ಗಾಂಧಿ ರವರ ಜನಪ್ರಿಯತೆ ಮತ್ತಷ್ಟು ಕುಸಿತ ಶೇಕಡ ಹನ್ನೊಂದಕ್ಕೆ ತಲುಪಿಸುವ ಎಲ್ಲಾ ಸಾಧ್ಯತೆಗಳು ಇದ್ದವು. ಇನ್ನು ಇತ್ತೀಚೆಗೆ ಸಿ ಓಟರ್ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರ ಜನಪ್ರಿಯತೆ ಶೇಕಡ 63.2 ಕ್ಕೆ ಬಂದು ತಲುಪಿದೆ ಇನ್ನು ದೇಶದ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಕೇವಲ 8.2 ಕ್ಕೆ ಕುಸಿದಿದೆ. ಈ ಫಲಿತಾಂಶದಿಂದ ದಿನೇ ದಿನೇ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ ಒಂದು ವೇಳೆ ನರೇಂದ್ರ ಮೋದಿ ಅವರ ಜನಪ್ರಿಯತೆ ಹೀಗೆ ಇನ್ನು ಕೇವಲ ಎರಡು ತಿಂಗಳುಗಳ ಕಾಲ ಮುಂದುವರೆದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ದೆಹಲಿಯ ಗದ್ದುಗೆಯಲ್ಲಿ ದೇಶದ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ.