ಬಿಗ್ ಬ್ರೇಕಿಂಗ್: ಸೇನೆಯ ತೆಕ್ಕೆಗೆ ಬ್ರಹ್ಮಾಸ್ತ್ರ, ವಿಶ್ವದಲ್ಲಿಯೇ ಎರಡನೇ ಸ್ಥಾನ ಪಡೆದ ಭಾರತ

ಬಿಗ್ ಬ್ರೇಕಿಂಗ್: ಸೇನೆಯ ತೆಕ್ಕೆಗೆ ಬ್ರಹ್ಮಾಸ್ತ್ರ, ವಿಶ್ವದಲ್ಲಿಯೇ ಎರಡನೇ ಸ್ಥಾನ ಪಡೆದ ಭಾರತ

ಭಾರತ ದೇಶವು ದಿನೇ ದಿನೇ ಬಲಗೊಳ್ಳುತ್ತಿದೆ ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಸದಾ ಯೋಧರಿಗೆ ನೆರವಾಗುವಂತಹ ಅತ್ಯುತ್ತಮ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದಾರೆ. ಇದರಲ್ಲಿ ಬಾಂಗ್ಲಾ ದೇಶದ ಗಡಿಯಲ್ಲಿ ಸ್ಮಾರ್ಟ್ ಬೇಲಿ ಸಹ ಇತ್ತೀಚೆಗಷ್ಟೇ ಅನಾವರಣಗೊಂಡಿದೆ ಹಾಗೂ ಈ ಮೂಲಕ ಬಾಂಗ್ಲಾದೇಶದಿಂದ ನುಸುಳಿ ಬರುವ ಉಗ್ರರನ್ನು ಬಹಳ ಸುಲಭವಾಗಿ ತಡೆಯಬಹುದು. ಇಷ್ಟೇ ಅಲ್ಲದೆ ಈಗಾಗಲೇ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿರುವ ಕೇಂದ್ರ ಸರ್ಕಾರವು ಭಾರತೀಯ ಸೇನೆಯನ್ನು ಬಲ ಪಡಿಸುವುದರಲ್ಲಿ ಬಹಳ ಶ್ರಮ ವಹಿಸುತ್ತಿದೆ ಎಂಬುದು ಕೇಂದ್ರ ಸರ್ಕಾರದ ಕಾರ್ಯವೈಖರಿಯಿಂದ ತಿಳಿದು ಬರುತ್ತದೆ. ಈಗ ಭಾರತೀಯ ಸೇನೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರಿಕೊಳ್ಳಲಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶದ ನಂತರ ಕೇವಲ ಭಾರತ ದೇಶವು ಮಾತ್ರ ಅಣ್ವಸ್ತ್ರ ಪ್ರಯೋಗಿಸುವ 3 ಜಲಾಂತರ್ಗಾಮಿ ನೌಕೆಗಳನ್ನು ಹೊಂದಲಿದೆ.

ಭಾರತೀಯ ಕಾರ್ಯತಂತ್ರದ ರಕ್ಷಣಾ ಪಾಲುದಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ರಷ್ಯಾ ದೇಶವು ಭಾರತ ಮತ್ತೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಹೌದು ಬರೋಬ್ಬರಿ ಮೂರು ಶತಕೋಟಿ ಡಾಲರ್ ಬೆಲೆ ಬಾಳುವ ಒಪ್ಪಂದ ಅಂತಿಮವಾಗಿದ್ದು 2025ರ ವೇಳೆಗೆ ಚಕ್ರ-3 ಜಲಾಂತರ್ಗಾಮಿ ನೌಕೆ ಭಾರತದ ಬಳಕೆಗೆ ಸಿಗಲಿದೆ. ಈಗಾಗಲೇ ಎರಡು ಸಬ್ ಮೇರಿನ್ ಗಳು ವಿಶಾಖಪಟ್ಟಣಂನಲ್ಲಿ ಸಿದ್ಧವಾಗುತ್ತಿದ್ದು ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರತೀಯ ಸೇನೆಯ ತೆಕ್ಕೆಗೆ ಸೇರಿಸಿಕೊಳ್ಳಲಿವೆ. ತದನಂತರ ಐದು ವರ್ಷಗಳ ನಂತರ ಮತ್ತೊಂದು ಜಲಾಂತರ್ಗಾಮಿ ನೌಕೆ ಭಾರತೀಯ ಸೇನೆಗೆ ಲಭ್ಯವಾಗಲಿದೆ. ಇನ್ ಮುಂದೆ ಸಮುದ್ರದಿಂದ ಬರುವ ವೈರಿಗಳನ್ನು ಸಹ ಬಹಳ ಸುಲಭವಾಗಿ ಭಾರತೀಯ ನೌಕಾಪಡೆಯು ಹಿಮ್ಮೆಟ್ಟಿಸಲು ಇದೆ.

ಈ ಜಲಾಂತರ್ಗಾಮಿ ನೌಕೆಗಳ ಮೂಲಕ ಭಾರತವು ಸಮುದ್ರದಿಂದ ಶತ್ರುಗಳ ಮೇಲೆ ಅಣು ಬಾಂಬ್ ದಾಳಿಯನ್ನು ನಡೆಸಬಹುದಾಗಿದೆ. ಸುತ್ತ ಮುತ್ತಲು ಸಮುದ್ರ ವಿರುವ ಕಾರಣ ವೈರಿ ಪಡೆಯನ್ನು ಸಮುದ್ರದಿಂದ ದಾಳಿ ಮಾಡಲು ಈ ಜಲಾಂತರ್ಗಾಮಿ ನೌಕೆಗಳು ಬಹಳ ಉಪಯುಕ್ತವಾಗಲಿದೆ ಹಾಗೂ ಈ ಮೂಲಕ ಬಾರತದ ಶತ್ರು ರಾಷ್ಟ್ರ ಗಳಿಸಿಕೊಂಡಿರುವ ಚೀನಾ ಹಾಗೂ ಪಾಕಿಸ್ತಾನಕ್ಕೆ ನಡುಕ ಆರಂಭವಾಗಲಿದೆ ಯಾಕೆಂದರೆ, ಎರಡು ದೇಶಗಳ ಬಳಿಯೂ ಅಣ್ವಸ್ತ್ರ ಪ್ರಯೋಗಿಸಬಹುದಾದ ಜಲಾಂತರ್ಗಾಮಿ ನೌಕೆಗಳು ಅಷ್ಟಾಗಿ ಬಳಕೆಯಲಿಲ್ಲ, ಈ ಮೂಲಕ ಭಾರತ ದೇಶವು 3 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದ ಎರಡನೇ ದೇಶವಾಗಲಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಅಣ್ವಸ್ತ್ರ ಪ್ರಯೋಗಿಸುವ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ.

ಇನ್ನು ಈ ಒಪ್ಪಂದದಲ್ಲಿ ಭಾರತೀಯ ಸೇನೆಗೆ ರಷ್ಯಾದ ಜಲಾಂತರ್ಗಾಮಿ ನೌಕೆಗಳ ಸಂಪೂರ್ಣ ಬಳಕೆಯ ಬಗ್ಗೆ ತಿಳಿಸಿಕೊಡಲು ಸ್ವತಹ ರಷ್ಯಾದ ಬ್ಯಾಲೆಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯ ಸೈನಿಕರು ಭಾರತೀಯ ಸೈನಿಕರಿಗೆ ಸಂಪೂರ್ಣವಾಗಿ ತರಬೇತಿ ನೀಡಲಿದ್ದಾರೆ ಎಂಬುದು ತಿಳಿದುಬಂದಿದೆ. ಇದರಿಂದ ರಷ್ಯಾದ ಜಲಾಂತರ್ಗಾಮಿ ನೌಕೆಗಳ ಬಗ್ಗೆ ಭಾರತೀಯ ಸೈನಿಕರಿಗೆ ಸಂಪೂರ್ಣ ಮಾಹಿತಿ ದೊರೆಯಲಿದ್ದು, ಭಾರತೀಯ ಸೇನೆಯು ಮತ್ತಷ್ಟು ಬಲಗೊಳ್ಳಲಿ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೂಲಕ ಭಾರತೀಯ ದೇಶದ ಪಕ್ಕದಲ್ಲಿ ಇದು ನೇರವಾಗಿ ಹೋರಾಡದೆ ಬೆನ್ನಿಗೆ ಚೂರಿ ಹಾಕುವ ಎರಡು ದೇಶಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ. ಜೈ ಹಿಂದ್