ಕನ್ನಡಿಗರಿಗೆ ಸಿಕ್ಕಳು ಕನ್ನಡದ ಶ್ರೇಯಾ ಘೋಷಾಲ್: ಸಾಕ್ಷಿಯ ಎಂಟ್ರಿ ನೋಡಿ ಶೇಕ್ ಆಯಿತು ಇಂಟರ್ನೆಟ್

  • 8.5K
    Shares

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆಯಷ್ಟೇ ಸರಿಗಮಪ ಲಿಟಲ್ ಚಾಂಪ್ಸ್ 16 ಕಾರ್ಯಕ್ರಮ ಆರಂಭಗೊಂಡಿದೆ. ಪುಟ್ಟ ಮಕ್ಕಳು ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಗೀತೆಗಳನ್ನು ಹಾಡುತ್ತಾ ಇಡೀ ಕರ್ನಾಟಕದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗುವ ಈ ಕಾರ್ಯಕ್ರಮ ತನ್ನ ಹದಿನಾರನೇ ಆವೃತ್ತಿಯನ್ನು ನೆನ್ನೆಯಷ್ಟೇ ಆರಂಭಿಸಿದೆ. ಮೊದಲ ದಿನವೇ ಹಲವಾರು ಭರವಸೆ ಹುಟ್ಟಿಸುವ ಸ್ಪರ್ಧಿಗಳು ಸರಿಗಮಪ ವೇದಿಕೆಯಲ್ಲಿ ತಮ್ಮ ಹಾಡುಗಳ ಮೂಲಕ ಮನಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಸಾಕ್ಷಿ ಎಂಬ ಹುಡುಗಿ ಸರಿಗಮಪ ವೇದಿಕೆಯಲ್ಲಿ ಭರ್ಜರಿ ಸೌಂಡು ಮಾಡಿದ್ದಾರೆ.

ಹಾಡಿದ ಹಲವಾರು ಜನರಲ್ಲಿ ಒಂದು ಹುಡುಗಿ ಮಾತ್ರ ಇಡೀ ಕರ್ನಾಟಕದಲ್ಲಿ ಕೆಲವೇ ಕೆಲವು ಗಂಟೆಗಳಲ್ಲಿ ಸದ್ದು ಮಾಡಿದ್ದಾರೆ. ತನ್ನ ಅಪ್ಪನ ಕನಸನ್ನು ನನಸು ಮಾಡಲು ಸರಿಗಮಪ ವೇದಿಕೆಯನ್ನು ಬಳಸಿಕೊಳ್ಳಲು ತಯಾರಾಗಿ ನಿಂತಿರುವ ಸಾಕ್ಷಿ ರವರು ಹಾಡನ್ನು ಪ್ರಾರಂಭ ಗೊಳಿಸಿದ ತಕ್ಷಣವೇ ಅರ್ಜುನ್ ಜನ್ಯ ಅವರು ಗ್ರೀನ್ ಸಿಗ್ನಲ್ ನೀಡಿದ್ದರು ತದ ನಂತರ ಉಳಿದ ತೀರ್ಪುಗಾರರು ಸಹ ಸಾಕ್ಷಿ ರವರ ಹಾಡು ಕೇಳಿ ಫಿದಾ ಆಗಿದ್ದು ಕರ್ನಾಟಕಕ್ಕೆ ಕನ್ನಡಿಗರ ಶ್ರೇಯಾ ಘೋಷಲ್ ಸಿಕ್ಕಿದ್ದಾರೆ ಎಂಬ ಮಾತುಗಳ ಮೂಲಕ ಹಾಡಿ ಹೊಗಳಿದ್ದಾರೆ.

Facebook Comments

Post Author: RAVI