ಪ್ರಿಯಾಂಕಾ ಚೋಪ್ರಾ ರವರ ಮೇಲೆ ದೂರು ದಾಖಲಿಸಿದ ಪಾಕಿಸ್ತಾನ: ಯಾಕೆ ಗೊತ್ತಾ??

  • 1.3K
    Shares

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ರವರು ಒಂದಲ್ಲ ಒಂದು ವಿವಾದಗಳಿಗೇ ಗುರಿಯಾಗುತ್ತ ಇರುತ್ತಾರೆ. ಆದರೆ ಈ ಬಾರಿ ಸ್ವಲ್ಪ ವಿಚಿತ್ರ ವಿವಾದದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ, ಭಾರತೀಯ ವಾಯುಪಡೆಯ ದಾಳಿಯನ್ನು ಬೆಂಬಲಿಸಿ ಪ್ರಿಯಾಂಕಾ ಚೋಪ್ರಾ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪಾಕಿಸ್ತಾನಕ್ಕೆ ನೀವು ನಡೆಯುತ್ತಿರುವ ಹಾದಿ ಸರಿ ಇಲ್ಲ ಎಂದು ಹೇಳಿದ್ದರು. ಸಾಮಾನ್ಯವಾಗಿ ಇದು ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿತ್ತು. ಪ್ರಿಯಾಂಕಾ ಚೋಪ್ರಾ ರವರು ತಮ್ಮ ಒಂದು ಟ್ವೀಟ್ ನಿಂದ ಈಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದು ತಮ್ಮ ಪ್ರತಿಷ್ಠಿತ ಸ್ಥಾನವನ್ನು ಕಳೆದುಕೊಳ್ಳುವತ್ತ ಸಾಗುತ್ತಿದ್ದಾರೆ.

ಪ್ರಿಯಾಂಕ ಚೋಪ್ರಾ ರವರು ಯುನಿಸೆಫ್ ಗುಡ್ ವಿಲ್ ಅಥವಾ ಯುನಿಸೆಫ್ ಸೌಹಾರ್ದ ರಾಯಭಾರಿ, ಆದ್ದರಿಂದ ತಮ್ಮ ಸ್ಥಾನಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ ಎಂದು ಪಾಕಿಸ್ತಾನದ ಹಲವಾರು ನಾಯಕರು ಪ್ರಿಯಾಂಕಾ ಚೋಪ್ರಾ ರವರ ವಿರುದ್ಧ ಕಿಡಿಕಾರಿದ್ದಾರೆ ಹಾಗೂ ವಿಶ್ವಸಂಸ್ಥೆಗೆ ಆನ್ ಲೈನ್ ಮೂಲಕ ದೂರನ್ನು ಸಲ್ಲಿಸಿ ಕೂಡಲೇ ಪ್ರಿಯಾಂಕಾ ಚೋಪ್ರಾ ರವರನ್ನು ಯುನಿಸೆಫ್ ರಾಯಬಾರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯ ಮಾಡಿದ. ಇನ್ನು ಇದಕ್ಕೆ ಪ್ರಿಯಾಂಕಾ ಚೋಪ್ರಾ ರವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Facebook Comments

Post Author: RAVI