ಅಧಿಕೃತ ರಾಜಕೀಯಕ್ಕೆ ಸಿಎಂ ಪುತ್ರ ಎಂಟ್ರಿ: ಮೊದಲ ದಿನವೇ ಯು ಟರ್ನ್ ಒಡೆದು ಭಾರಿ ಸದ್ದು

ಅಧಿಕೃತ ರಾಜಕೀಯಕ್ಕೆ ಸಿಎಂ ಪುತ್ರ ಎಂಟ್ರಿ: ಮೊದಲ ದಿನವೇ ಯು ಟರ್ನ್ ಒಡೆದು ಭಾರಿ ಸದ್ದು

ಮಂಡ್ಯ ಲೋಕಸಭಾ ಕ್ಷೇತ್ರವು ದೋಸ್ತಿಗಳ ಯಾವ ಪಕ್ಷದ ಪಾಲಾಗಲಿದೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ ಕೊನೆಗೂ ಕುಮಾರಸ್ವಾಮಿ ರವರು ತಮ್ಮ ಪುತ್ರ ಅಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಮಂಡ್ಯದಿಂದ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಈ ನಿರ್ಧಾರಕ್ಕೆ ಮಾಜಿ ಪ್ರಧಾನಿಗಳ ಆಗಿರುವ ದೇವೇಗೌಡರು ಸಹ ಅಸ್ತು ಎಂದಿದ್ದು ಸುಮಲತಾ ರವರಿಗೆ ಬಹು ದೊಡ್ಡ ಶಾಕ್ ಉಂಟಾಗಿದೆ. ಹಾಗೂ ಈ ಮೂಲಕ ರಾಜಕೀಯದಲ್ಲಿ ಜೆಡಿಎಸ್ ಪಕ್ಷವು ಕುಟುಂಬ ರಾಜಕಾರಣ ಮಾಡುತ್ತದೆ ಎಂಬ ಆರೋಪಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇನ್ನು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೊದಲ ದಿನವೇ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡು ಯು ಟರ್ನ್ ಒಡೆದು ಭಾರಿ ಸದ್ದು ಮಾಡಿದ್ದಾರೆ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಇದ್ದಕ್ಕಿದ್ದ ಹಾಗೆ ಮೊನ್ನೆ ಕುಮಾರಸ್ವಾಮಿ ರವರು ಅಂಬರೀಶ ರವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಮಂಡ್ಯ ಜಿಲ್ಲೆಯು ಅಂಬರೀಶ್ ರವರ ಸಮಯದಲ್ಲಿ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ ಎಂಬಂತೆ ಮಾತನಾಡಿದ ಕುಮಾರಸ್ವಾಮಿ ರವರು ಮಗನಿಗಾಗಿ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ತದನಂತರ ಅಂಬರೀಶ್ ರವರ ಸಾವಿನ ವಿಚಾರದಲ್ಲಿ ಕುಮಾರಸ್ವಾಮಿ ಅವರು ರಾಜಕೀಯವನ್ನು ಎಳೆದು ತಂದು, ಅಂಬರೀಶ್ ರವರ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲೆಗೆ ತೆಗೆದುಕೊಂಡು ಹೋದದ್ದು ನಾನು ಎಂದು ಹೇಳಿಕೆ ನೀಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ರವರು, ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಮಂಡ್ಯ ಜಿಲ್ಲೆಯಿಂದ ಸುಮಲತಾ ಅಥವಾ ಅಂಬರೀಶ್ ಅವರ ಸುಪುತ್ರ ಸ್ಪರ್ಧಿಸುತ್ತಾರೆ ಆಗ ನೀವು ಏನು ಮಾಡುತ್ತೀರಿ ಎಂದು ಕೇಳಿದ ತಕ್ಷಣ, ಒಂದು ವೇಳೆ ಅದೇ ನಡೆದಲ್ಲಿ ನಾನು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಬೆದರಿಕೆಯನ್ನು ಒಡ್ಡಿದರು. ಹೀಗೆ ಅಪ್ಪ ಮಕ್ಕಳು ಇಬ್ಬರು ಸೇರಿ ಅಂಬರೀಶ್ ರವರ ವಿರುದ್ಧ ಹೇಳಿಕೆಗಳನ್ನು ನೀಡಿದ ನಂತರ ಮಂಡ್ಯ ಜಿಲ್ಲೆಯು ಮತ್ತಷ್ಟು ಕುತೂಹಲವನ್ನು ಕೆರಳಿಸಿತ್ತು.

ಆದರೆ ಇದ್ದಕ್ಕಿದ್ದ ಹಾಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ತಕ್ಷಣ ನಿಖಿಲ್ ಕುಮಾರಸ್ವಾಮಿ ರವರು ಏನು ಹೇಳಿದ್ದಾರೆ ಗೊತ್ತಾ?? ಮಂಡ್ಯ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ ರವರು ಅಂಬರೀಶ್ ಅವರ ಮೇಲೆ ನನಗೆ ಭಾರಿ ಗೌರವವಿದೆ ಸುಮಲತಾ ಅಂಬರೀಶ್ ರವರ ಸ್ಪರ್ಧೆ ಕುರಿತು ನಾನು ಏನನ್ನು ಹೇಳಲು ಸಾಧ್ಯವಿಲ್ಲ ಇನ್ನೂ ಅಂಬರೀಶ್ ರವರ ಪುತ್ರನ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದಿದ್ದ ನಿಖಿಲ್ ಕುಮಾರಸ್ವಾಮಿ ಇದ್ದಕ್ಕಿದ್ದ ಹಾಗೆ ಅಂಬರೀಶ ಅವರ ಪುತ್ರ ಅಭಿ ನನ್ನ ಸಹೋದರ ಇದ್ದಂತೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ರಚಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ನಿಖಿಲ್ ಕುಮಾರಸ್ವಾಮಿ ಅವರು, ರಾಜಕೀಯಕ್ಕೆ ಬಂದ ತಕ್ಷಣ ಯು ಟರ್ನ್ ಒಡೆಯುವುದನ್ನು ಪ್ರಾರಂಭಿಸಿದ್ದಾರೆ.