ಜಿ ಟಿ ದೇವೇಗೌಡ ನೀಡಿದ ಶಾಕ್ ಗೆ ವಿದ್ಯಾರ್ಥಿಗಳು ತತ್ತರ: ಬಡವರೇ ಶಿಕ್ಷಣವನ್ನು ಮರೆತುಬಿಡಿ !!

ಜಿ ಟಿ ದೇವೇಗೌಡ ನೀಡಿದ ಶಾಕ್ ಗೆ ವಿದ್ಯಾರ್ಥಿಗಳು ತತ್ತರ: ಬಡವರೇ ಶಿಕ್ಷಣವನ್ನು ಮರೆತುಬಿಡಿ !!

ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಹಲವಾರು ವಸ್ತುಗಳ ಏರಿಕೆ ಕಂಡಿದೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ರೈತರ ಸರಕಾರ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರು ತಮ್ಮದೇ ಸ್ವಂತ ಜಿಲ್ಲೆಯ ರೈತರು ಹೆಚ್ಚು ಆಧಾರಿತವಾಗಿರುವ ಹಸುವಿನ ಹಾಲಿನ ದರದಲ್ಲಿ 2 ರೂಪಾಯಿ ಕಡಿಮೆ ಮಾಡಿ ರೈತರಿಗೆ ಮೊದಲ ಶಾಕ್ ನೀಡಿದ್ದರು. ರೈತರಿಗೆ ಸಾಲ ಮನ್ನಾ ಮಾಡುತ್ತೇನೆ ಎಂಬ ನೆಪದಲ್ಲಿ ಎರಡು ರೂಪಾಯಿ ರೈತರ ಬಳಿ ಪ್ರತಿ ಲೀಟರ್ ಹಾಲಿಗೆ ಕಿತ್ತುಕೊಂಡಿದ್ದರು. ಆದರೆ ಇದುವರೆಗೂ ಸಾಲ ಮನ್ನಾ ಮಾತ್ರ ನಡೆದಿಲ್ಲ.

ತದನಂತರ ಪೆಟ್ರೋಲ್, ವಿದ್ಯುತ್, ಆಸ್ತಿ ತೆರಿಗೆ ಹಾಗೂ ಬಸ್ ದರ ಹೀಗೆ ಹಲವಾರು ದೈನಂದಿನ ಜೀವನದಲ್ಲಿ ಬಹಳ ಅಗತ್ಯವಾಗಿರುವ ಬೆಲೆಗಳನ್ನು ಏರಿಕೆ ಮಾಡಿ ಜನರಿಗೆ ಶಾಕ್ ನೀಡುತ್ತಾ ಬಂದಿದ್ದರು. ಈ ಬಾರಿ ಮುಂದೆಂದೂ ಬಡವರು ಇಂಜಿನಿಯರಿಂಗ್ ಮಾಡಲೇಬಾರದು ಎಂದು ರಾಜ್ಯ ಸರ್ಕಾರವು ನಿರ್ಧರಿಸಿದಂತೆ ಕಾಣುತ್ತಿದೆ. ಕಳೆದ ಸಿದ್ದರಾಮಯ್ಯನವರ ಸರ್ಕಾರ ಏರಿಕೆ ಮಾಡಿದ್ದ ಇಂಜಿನಿಯರಿಂಗ್ ಶುಲ್ಕವನ್ನು ಇಂದಿನ ವಿದ್ಯಾರ್ಥಿಗಳು ಭರಿಸಲು ಸಾಧ್ಯವಾಗುತ್ತಿಲ್ಲ ಇಂತಹ ಸಮಯದಲ್ಲಿ ಜಿ ಟಿ ದೇವೇಗೌಡ ರವರು ಮತ್ತೊಂದು ಶಾಕ್ ನೀಡಿದ್ದಾರೆ.

ಕಳೆದ ಎಂಜಿನಿಯರಿಂಗ್ ಶುಲ್ಕ ಏರಿಕೆಯನ್ನು ಬರಿಸಲಾಗದೆ ಬಡ ವಿದ್ಯಾರ್ಥಿಗಳು ಕಷ್ಟಪಡುತ್ತಿರುವ ಸಮಯದಲ್ಲಿ ಏಕಾಏಕಿ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕವನ್ನು ಶೇಕಡ 10ರಷ್ಟು ಹೆಚ್ಚಳ ಮಾಡಿದ್ದಾರೆ ಸಚಿವ ಜಿಟಿ ದೇವೇಗೌಡ ರವರು. ಈ ಬಗ್ಗೆ ಕುಮಾರಸ್ವಾಮಿ ರವರ ಜೊತೆ ದೂರವಾಣಿಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಈ ಮೂಲಕ ಇಂಜಿನಿಯರಿಂಗ್ ಶ್ರೀಮಂತರಿಗೆ ಮಾತ್ರ ಎಂಬುದನ್ನು ದೋಸ್ತಿ ಸರ್ಕಾರ ನಿರ್ಧಾರ ಮಾಡಿದಂತೆ ಕಾಣುತ್ತದೆ.

ಈಗಾಗಲೇ ಕಾಲೇಜಿನ ಶುಲ್ಕ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ದೈನಂದಿನ ಹಲವಾರು ಖರ್ಚುಗಳು ಇರುತ್ತವೆ ಈ ಎಲ್ಲಾ ಖರ್ಚುಗಳನ್ನು ಮೀರಿ ಇನ್ನು ಮುಂದೆ ಬಡವರು ಇಂಜಿನಿಯರ್ ಆಗುವುದು ಕನಸೇ ಸರಿ. ದಯವಿಟ್ಟು ರಾಜ್ಯ ಸರ್ಕಾರವು ಈ ಕೂಡಲೇ ಈ ನಿರ್ಧಾರವನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಕೋರಿಕೊಳ್ಳುತ್ತೇವೆ. ನಾವು ಸಹ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಕೋರ್ಸ್ ಮುಗಿಸಿದ್ದೇವೆ ಅದರ ಕಷ್ಟ ಏನೆಂಬುದು ನಮಗೆ ಅರ್ಥವಾಗಿದೆ ದಯವಿಟ್ಟು ಈ ಕೂಡಲೇ ದೋಸ್ತಿ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು.