ಬಿಗ್ ನ್ಯೂಸ್: ಗಡಿ ಮತ್ತಷ್ಟು ಉದ್ವಿಗ್ನ, ಸಮುದ್ರದ ಆಳಕ್ಕೆ ಇಳಿದ ಭಾರತೀಯ ನೌಕಾಪಡೆ ಯಾಕೆ ಗೊತ್ತಾ??

  • 6.7K
    Shares

ವಿಂಗ್ ಕಮಾಂಡರ್ ಅಭಿನಂದನ್ ವರ್ತಮನ್ ರವರು ಹಿಂದಿರುಗಿದ ನಂತರ ಭಾರತ ಹಾಗೂ ಪಾಕಿಸ್ತಾನ ಗಡಿ ಶಾಂತಿ ರೂಪಕ್ಕೆ ಮರಳುತ್ತದೆ ಎಂಬ ಭಾವನೆ ಎಲ್ಲರಲ್ಲೂ ಉಂಟಾಗಿತ್ತು. ಆದರೆ ಪಾಕಿಸ್ತಾನವು ತನ್ನ ಕುತಂತ್ರ ನೀತಿಯನ್ನು ಬಿಡಲು ಮಾತ್ರ ಸಿದ್ಧವಿಲ್ಲ, ಮುಂದೆ ಶಾಂತಿ ಎಂದು ಹೇಳಿ ಅಭಿನಂದನ್ ರವರನ್ನು ಬಿಡುಗಡೆ ಮಾಡಿ ಬೆನ್ನ ಹಿಂದೆ ಚೂರಿ ಹಾಕಲು ಸಿದ್ಧತೆ ಮಾಡಿಕೊಂಡಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಪಾಕಿಸ್ತಾನದ ಸೈನ್ಯವು ಈಗಲೂ ಕೂಡ ಗಡಿ ನಿಯಂತ್ರಣ ರೇಖೆಯಲ್ಲಿ ಹಾಗೂ ಅಂತರರಾಷ್ಟ್ರೀಯ ಗಡಿಯ ಕೆಲವು ಪ್ರದೇಶಗಳಲ್ಲಿ ಭಾರಿ ಸೇನೆಯ ಜಮಾವಣೆ ಮಾಡುತ್ತಿದೆ. ಇದನ್ನು ತಿಳಿದುಕೊಂಡ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಯಾವ ಕ್ಷಣದಲ್ಲಿ ಬೇಕಾದರೂ ತಿರುಗೇಟು ನೀಡುವಂತೆ ಸೇನೆಯನ್ನು ಸಜ್ಜುಗೊಳಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡಿರುವ ಭಾರತೀಯ ಸೇನೆಯು ತನ್ನ ಮತ್ತೊಂದು ಅಸ್ತ್ರವನ್ನು ಪಾಕಿಸ್ತಾನದ ಮೇಲೆ ಪ್ರಯೋಗಿಸಲು ಸಿದ್ಧವಾಗಿದೆ.

ರಾಜಸ್ಥಾನ ಹಾಗೂ ಗುಜರಾತಿನ ಗಡಿಯಲ್ಲಿ ಬಾರಿ ಸೇನಾ ಜಮಾವಣೆ ನಡೆಯುತ್ತಿದೆ ವಾಯುಪಡೆಯು ಈ ಗಡಿಯಲ್ಲಿ ಬರುವ ಎಲ್ಲಾ ವಿರೋಧಿಗಳನ್ನು ಎದುರಿಸಲು ಸಿದ್ಧವಾಗಿ ನಿಂತಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಿರುತ್ತದೆ ಎಂಬುದನ್ನು ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ. ಭಾರತೀಯ ವಾಯುಪಡೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನ್ನು ಬೇಟೆಯಾಡಿದ ನಂತರ ಇನ್ನೂ ಹಲವಾರು ತುಕಡಿಗಳು ಗಡಿಯಲ್ಲಿ ಕಾದು ಕುಳಿತಿವೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಭಾರತೀಯ ನೌಕಾಪಡೆಯು ಅಖಾಡಕ್ಕೆ ಇಳಿದಿದ್ದು, ನರೇಂದ್ರ ಮೋದಿರವರು ಸಂಪೂರ್ಣ ಸ್ವಾತಂತ್ರ್ಯ ನೀಡಿದ ಕೇವಲ ಎರಡು ದಿನಗಳಲ್ಲಿ ಯುದ್ಧಕ್ಕೆ ಸಜ್ಜಾಗಿರುವ ಭಾರತೀಯ ನೌಕಾಪಡೆಯ ಹೆಮ್ಮೆಯ INS  ಅಖಾಡಕ್ಕೆ ಇಳಿದಿದೆ. ನೇರವಾಗಿ ಸಮುದ್ರಕ್ಕೆ ಇಳಿದಿರುವ INS ತನ್ನ ಬಳಿ ಇರುವ ಬ್ರಹ್ಮಾಸ್ತ್ರವನ್ನು ಸಮುದ್ರದ ಆಳಕ್ಕೆ ಇಳಿಸಿದೆ.

ಹೌದು ಇದೇ ಮೊದಲ ಬಾರಿಗೆ ಪಾಕಿಸ್ತಾನ ಹಾಗು ಭಾರತದ ವಿಚಾರದಲ್ಲಿ ನೌಕಾಪಡೆಯ ಅಕಾಡಕ್ಕೆ ಇಳಿದಿದೆ ಈಗಾಗಲೇ ವಾಯುಪಡೆ ಹಾಗೂ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡು ತ್ತಿರುವ ಸಮಯದಲ್ಲಿ ಭಾರತೀಯ ನೌಕಾಪಡೆಯ ಬ್ರಹ್ಮಾಸ್ತ್ರ INS ಕಲ್ವಾರಿ-ವರ್ಗದ ಜಲಾಂತರ್ಗಾಮಿ ನೌಕೆ ಯನ್ನು ಸಮುದ್ರದ ಆಳಕ್ಕೆ ಇಳಿಸಿದೆ. ಈ ಸಬ್ ಮೇರಿನ್ ಸಮುದ್ರದ ಆಳಕ್ಕೆ ಇಳಿದು ಸಮುದ್ರದ ತಳ ಭಾಗದಲ್ಲಿ ಶತೃಗಳನ್ನು ಹೊಡೆದುರುಳಿಸುವ ಕಾರ್ಯವನ್ನು ಮಾಡಲಿದೆ. ಇದರಿಂದ ಗಡಿ ಮತ್ತಷ್ಟು ಉದ್ವಿಗ್ನ ಗೊಂಡಿದ್ದು ನೌಕಾಪಡೆಯು ಸಹ ಯುದ್ದಕ್ಕೆ ಸಿದ್ದಗೊಂಡು ಕಾಯುತ್ತಿದೆ, ಯಾವ ಕ್ಷಣದಲ್ಲಿ ಏನು ಆಗುತ್ತದೆ ಎಂಬುದನ್ನು ತಿಳಿಯಬೇಕೆಂದರೆ ನಮ್ಮ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ ಗಡಿಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗುತ್ತದೆ.

Facebook Comments

Post Author: Ravi Yadav