ಡಿಕೆಶಿ ಗೆ ಮುಖಭಂಗ: ಅಖಾಡಕ್ಕೆ ಅಮಿತ್ ಶಾ, ದೋಸ್ತಿ ಗಳಿಗೆ ಬಿಗ್ ಶಾಕ್

  • 11.4K
    Shares

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯ ಜಿಲ್ಲೆಯು ಇನ್ನಿಲ್ಲದ ಕುತೂಹಲವನ್ನು ಕೆರಳಿಸುತ್ತಿದೆ, ದಿನ ದಿನಕ್ಕೂ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿರುವ ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರವು ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ ಈ ಬಾರಿ ದೋಸ್ತಿ ಸರ್ಕಾರ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿರುವುದರಿಂದ ಯಾವುದಾದರೂ ಒಂದು ಪಕ್ಷಕ್ಕೆ ಮಾತ್ರ ಕ್ಷೇತ್ರವನ್ನು ಬಿಟ್ಟು ಕೊಡಲಾಗುತ್ತದೆ. ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಸ್ತಿತ್ವ ದಲ್ಲಿಯೇ ಮುಳುಗಿರುವ ಮಂಡ್ಯ ಜಿಲ್ಲೆಯ ಇದುವರೆಗೂ ಬಿಜೆಪಿ ಪಕ್ಷಕ್ಕೆ ಅಷ್ಟಾಗಿ ಮತಗಳನ್ನು ಬಿಟ್ಟುಕೊಟ್ಟಿಲ್ಲ.

ಆದರೆ ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಎಲ್ಲಾ ಚುನಾವಣೆಗಿಂತಲೂ ಹೆಚ್ಚಿನ ಮತಗಳನ್ನು ಪಡೆದು ದೋಸ್ತಿಗೆ ಶಾಕ್ ನೀಡಿತ್ತು. ಬಿಜೆಪಿ ಪಕ್ಷವು ಪಡೆದುಕೊಂಡಿರುವ ಮತ ಸಂಖ್ಯೆಗಳನ್ನು ನೋಡಿದರೆ ಖಂಡಿತವಾಗಿಯೂ ದೋಸ್ತಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಎಚ್ಚರಿಕೆ ಹೆಜ್ಜೆಯನ್ನು ಇಟ್ಟರೆ ಮಾತ್ರ ಗೆಲುವು ಸಾಧ್ಯ ಎಂಬ ಸತ್ಯವನ್ನು ಹೊರಗಡೆ ಎಳೆದಿತ್ತು, ಆದರೆ ಈ ಬಾರಿ ಯಾಕೋ ದೋಸ್ತಿ ಸರ್ಕಾರ ಮಣ್ಣು ಮುಕ್ಕುವಂತೆ ಕಾಣುತ್ತಿದೆ ಕೇವಲ ಒಂದು ತಪ್ಪು ಹೆಜ್ಜೆಯಿಂದ ಮಂಡ್ಯ ಜಿಲ್ಲೆ ಯನ್ನು ಕಳೆದುಕೊಳ್ಳುವ ಸ್ಥಿತಿಯನ್ನು ತಂದುಕೊಳ್ಳ ಲಿದೆ ಎಂಬ ಮಾತು ಕೇಳಿಬರುತ್ತಿದೆ.

ಕ್ಷೇತ್ರವನ್ನು ಕುತೂಹಲಕಾರಿ ಯನ್ನಾಗಿ ಬದಲಾಯಿಸಿರುವುದು ಸುಮಲತಾ ರವರ ಸ್ಪರ್ಧೆ, ಇತ್ತ ಕುಮಾರಸ್ವಾಮಿ ಅವರು ತನ್ನ ಪುತ್ರನನ್ನು ಕಣಕ್ಕೆ ಇಳಿಸಬೇಕು ಆ ಮೂಲಕ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಆದರೆ ಸುಮಲತಾ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಬಿಜೆಪಿ ಪಕ್ಷವು ಮನ ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ, ಕಳೆದ ಎಸ್ ಎಂ ಕೃಷ್ಣ ರವರ ಭೇಟಿಯ ಸಂದರ್ಭದಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಹೊರ ಬಿದ್ದಿತ್ತು.

ನಂತರ ಈ ಬಿಜೆಪಿಯ ಹೊಸ ಯೋಜನೆ ಮಂಡ್ಯ ಜಿಲ್ಲೆಯಲ್ಲಿ ತಮಗೆ ದೊಡ್ಡ ಹೊಡೆತ ನೀಡಲಿದೆ ಎಂಬುದನ್ನು ಅರಿತ ಮೈತ್ರಿ ಸರ್ಕಾರವು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರನ್ನು ಅಖಾಡಕ್ಕೆ ಇಳಿಸಿತ್ತು, ಸುಮಲತಾ  ರವರ ಸ್ಪರ್ಧೆ ಮಾಡದಂತೆ ತಡೆಯಲು ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಅವರು ವಿಫಲರಾಗಿದ್ದಾರೆ, ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಮೊದಲಿಂದಲೂ ಅಂಬರೀಶ್ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದ ಡಿಕೆ ಶಿವಕುಮಾರ್ ಅವರು ಸೋಲನ್ನು ಕಂಡಿದ್ದಾರೆ ಎಂಬ ಕಹಿ ಸತ್ಯ ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ಪಕ್ಷವು ಮೊದಲಿನಿಂದಲೂ ಸುಮಲತಾ ರವರನ್ನು ಬಿಜೆಪಿ ಪಕ್ಷಕ್ಕೆ ಕರೆತರಬೇಕು ಎಂಬ ಆಸಕ್ತಿಯನ್ನು ಹೊಂದಿತ್ತು. ಆದರೆ ಎಸ್ ಎಂ ಎಸ್ ಕೃಷ್ಣ ರವರ ಭೇಟಿಯ ನಂತರ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡುತ್ತದೆ ಎಂಬ ಭರವಸೆಯನ್ನು ಸುಮಲತಾ ಅವರು ಇಟ್ಟುಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕಾರಣ ಯಾವುದೇ ಕಾರಣಕ್ಕೂ ಟಿಕೆಟ್ ಸಿಗುವ ಸಾಧ್ಯತೆಗಳು ಇಲ್ಲ ಎಂಬುದು ಸುಮಲತಾ ಅವರಿಗೆ ಈಗಾಗಲೇ ಅರ್ಥವಾಗಿದೆ. ಆದ ಕಾರಣದಿಂದ ಸುಮಲತಾ ರವರು ಮುಂದೆ ತಮ್ಮದೇ ಆದ ಯೋಜನೆಯ ರೂಪಿಸಿಕೊಳ್ಳಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇಂತಹ ಸಂದಿಗ್ಧ ಪರಿಸ್ಥಿತಿ ಗಾಗಿ ಕಾಯುತ್ತಿದ್ದ ಬಿಜೆಪಿ ಪಕ್ಷವು ಸುಮಲತಾ ಅವರನ್ನು ಮನವೊಲಿಸಿ ಬಿಜೆಪಿ ಪಕ್ಷಕ್ಕೆ ಕರೆತರಬೇಕು ಎಂಬ ಯೋಜನೆಯೊಂದಿಗೆ ಅಕಾಡಕ್ಕೆ ಇಳಿದಿದೆ. ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಕಳೆದ ಬಾರಿ ಬಿಜೆಪಿ ಪಕ್ಷದ ಮತ ಗಳಿಕೆ ಹಾಗೂ ಈ ಬಾರಿಯ ಸುಮಲತಾ ರವರ ವರ್ಚಸ್ಸು ಸೇರಿಕೊಂಡರೆ ಖಂಡಿತವಾಗಿಯೂ ಬಿಜೆಪಿ ಪಕ್ಷಕ್ಕೆ ಸುಲಭ ಗೆಲುವು ಸಿಗಲಿದೆ ಇದನ್ನು ಅರಿತುಕೊಂಡ ಬಿಜೆಪಿ ಪಕ್ಷದ ಚಾಣಕ್ಯ ಅಮಿತ್ ಅಮಿತ್ ಶಾ ರವರು ಈಗಾಗಲೇ ಸುಮಲತಾ ಅವರನ್ನು ಬಿಜೆಪಿಗೆ ಕರೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೊದಲು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಆಗಿರುವ ಎಸ್ ಎಂ ಕೃಷ್ಣ ರವರಿಗೆ ವಹಿಸಿದ್ದ ಜವಾಬ್ದಾರಿ ಈಗಲೂ ಸಹ ಮುಂದುವರೆದಿದ್ದು ಎಸ್ಎಂ ಕೃಷ್ಣ ಅವರಿಗೆ ಹೇಗಾದರೂ ಮಾಡಿ ಸುಮಲತಾ ರವರನ್ನು ಬಿಜೆಪಿ ಕೆ ಕರೆ ತರಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಪಕ್ಷದಿಂದ ಕಣಕ್ಕಿಳಿಯುವುದಿಲ್ಲ ಎಂದಾದರೂ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅಮಿತ್ ಶಾ ರವರು ಸೂಚಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಸುಮಲತಾ ರವರು ಬಿಜೆಪಿ ಪಕ್ಷವನ್ನು ಹೊರತು ಪಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಪಕ್ಷವು ತನ್ನ ಬೆಂಬಲವನ್ನು ಸಹ ಸುಮಲತಾ ಅವರಿಗೆ ನೀಡುವ ಎಲ್ಲಾ ಸಾಧ್ಯತೆಗಳು ಇವೆ.

Facebook Comments

Post Author: Ravi Yadav