ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಬೆಂಬಲಿಗ ಮುಸ್ಲಿಂ ಸಂಘಟನೆ ಬ್ಯಾನ್: ಶಭಾಷ್ ಮೋದಿಜಿ

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಬೆಂಬಲಿಗ ಮುಸ್ಲಿಂ ಸಂಘಟನೆ ಬ್ಯಾನ್: ಶಭಾಷ್ ಮೋದಿಜಿ

ನರೇಂದ್ರ ಮೋದಿರವರು ಈಗಾಗಲೇ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ದೇಶದ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ಎಲ್ಲರಿಗೂ ಮನದಟ್ಟು ಮಾಡಿಕೊಟ್ಟಿದ್ದಾರೆ. ಈಗ ಭಾರತದಲ್ಲಿ ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ಮತ್ತೊಮ್ಮೆ ದೇಶದ ಭದ್ರತೆ ನನಗೆ ಮುಖ್ಯ ಯಾವ ಮತ ಬ್ಯಾಂಕ್ ಗಳಿಗೂ ಸಹ ನಾವು ಕೇರ್ ಮಾಡುವುದಿಲ್ಲ ಬದಲಾಗಿ ಕೇವಲ ದೇಶಕ್ಕಾಗಿ ಇಂತಹ ನಿರ್ಧಾರಗಳನ್ನು ಆದರೂ ತೆಗೆದುಕೊಳ್ಳಬಲ್ಲೇವು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ನರೇಂದ್ರ ಮೋದಿ ಅವರ ಐತಿಹಾಸಿಕ ನಿರ್ಧಾರಕ್ಕೆ ಇಡೀ ದೇಶವೇ ಕೊಂಡಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಇಡೀ ಭಾರತದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಯೋಜನೆ ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ತಕ್ಷಣ ಕೇಂದ್ರ ಸರ್ಕಾರವು ಯಾವುದೇ ಆಲೋಚನೆಯನ್ನು ಮಾಡದೆ ದಿಟ್ಟ ನಿರ್ಧಾರದ ಹೆಜ್ಜೆ ಇಟ್ಟಿದೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಜಮಾತ್ ಇ ಇಸ್ಲಾಮಿ ಸಂಘಟನೆ ದೇಶದೆಲ್ಲೆಡೆ ಸದ್ದು ಮಾಡುತ್ತಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದ ಜಮಾತ್ ಈ ಇಸ್ಲಾಮಿ ಸಂಘಟನೆಯು ಯಾವುದೇ ಆತಂಕವಿಲ್ಲದೆ ಬಹಿರಂಗ ಬೆಂಬಲವನ್ನು ನೀಡುತ್ತಿತ್ತು. ಹಲವಾರು ಬಾರಿ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರು ಸಹ ಲಕ್ಷಾಂತರ ಮತಗಳು ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಯಾರೊಬ್ಬರೂ ಈ ಮುಸ್ಲಿಂ ಸಂಘಟನೆಯ ನ್ನು ಮುಟ್ಟಲು ತಯಾರಿರಲಿಲ್ಲ.

ಆದರೆ ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದಲ್ಲಿ ನಡೆದ ಮಹತ್ವದ ಬೆಳವಣಿಗೆಗಳ ಕಾರಣ, ದೇಶದ ಭದ್ರತೆಯ ವಿಷಯದಲ್ಲಿ 150ಕ್ಕೂ ಹೆಚ್ಚು ಸದಸ್ಯರನ್ನು ಕೇಂದ್ರ ಸರ್ಕಾರ ಬಂಧಿಸಿತು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಆಕ್ರೋಶಗಳು ಹೆಚ್ಚಾಗಿದ್ದವು ಆದರೆ ದೇಶದ ಭದ್ರತೆಯ ವಿಚಾರವಾದ್ದರಿಂದ ಕೇಂದ್ರ ಸರ್ಕಾರವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಯಾರಿರಲಿಲ್ಲ. ತಾನು ಒಬ್ಬ ಮುಸ್ಲಿಮ್ ರಾಜಕೀಯ ಸಂಘಟನೆ ಎಂದು ಹೆಸರಿಟ್ಟುಕೊಂಡು ಹಲವಾರು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಈ ಸಂಸ್ಥೆ ಭಾಗಿಯಾಗುತ್ತಿದ್ದರು.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೇಂದ್ರ ಸರ್ಕಾರವು ಹಲವಾರು ಮತಗಳನ್ನು ಕಳೆದುಕೊಳ್ಳುತ್ತೇವೆ ಎಂಬುದನ್ನು ತಿಳಿದಿದ್ದರೂ ಸಹ, ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಆಗಬಾರದು ಎಂಬ ಸಿದ್ಧಾಂತವನ್ನು ಮನದಲ್ಲಿ ಇಟ್ಟುಕೊಂಡು ಐತಿಹಾಸಿಕ ನಿರ್ಧಾರ ಘೋಷಣೆ ಮಾಡಿದೆ ಹಾಗೂ ಈ ಮೂಲಕ ಇಡೀ ದೇಶದಲ್ಲಿ jamaat-e-islami ಸಂಘಟನೆಯನ್ನು ನಿಷೇಧಿಸಿದೆ. ಈ ನಿರ್ಧಾರಕ್ಕೆ ಇಡೀ ದೇಶದ ಜನರು ಕ್ಷಮಿಸಿ ದೇಶಭಕ್ತರು ಉಘೇ ಉಘೇ ಎನ್ನುತ್ತಿದ್ದಾರೆ.