ಅಖಾಡಕ್ಕೆ ಭಾರತೀಯ ಮಾಸ್ಟರ್ ಮೈಂಡ್, ಅಭಿನಂದನ್ ಕ್ಷೇಮವಾಗಿ ವಾಪಸ್ ಬರುವುದು ಪಕ್ಕಾ

ಅಖಾಡಕ್ಕೆ ಭಾರತೀಯ ಮಾಸ್ಟರ್ ಮೈಂಡ್, ಅಭಿನಂದನ್ ಕ್ಷೇಮವಾಗಿ ವಾಪಸ್ ಬರುವುದು ಪಕ್ಕಾ

ಇಂದು ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಗಡಿಯನ್ನು ಪ್ರವೇಶಿಸುವಾಗ, ಅಭಿನಂದನ್ ರವರು ಭಾರತದ ವಾಯುಪಡೆಯ ಮತ್ತಷ್ಟು ಯುದ್ಧವಿಮಾನಗಳ ಜೊತೆ ಪಾಕಿಸ್ತಾನದ ವಾಯುಪಡೆಗೆ ತಕ್ಕ ಉತ್ತರವನ್ನು ನೀಡಲು ಮಿಗ್ 21 ವಿಮಾನದಲ್ಲಿ ಆಗಸಕ್ಕೆ ಹಾರಿದ್ದರು. ತನ್ನ ದೇಶವನ್ನು ರಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಯಾವ ಭಯವೂ ಇಲ್ಲದೆ ಮುನ್ನುಗುತ್ತಿದ್ದಾಗ ದುರಾದೃಷ್ಟವಶಾತ್ ಮಿಗ್-21 ವಿಮಾನ ಕೈ ಕೊಟ್ಟ ಕಾರಣ ಪಾಕಿಸ್ತಾನದ ಗಡಿ ದಾಟಿ ಸೇನೆಯ ಕೈಯಲ್ಲಿ ಸಿಲುಕಿಕೊಂಡಿದ್ದರು.
ತಾಂತ್ರಿಕ ದೋಷಗಳಿಂದ ವಿಮಾನ ಉರುಳಿದೆ ಎಂದು ಹೇಳಲಾಗುತ್ತಿದೆ, ಆದರೆ ಅಭಿನವ್ ರವರು ಬಂದಮೇಲೆ ಸತ್ಯಂಶ ಹೊರಬೀಳಲಿದೆ. ಕೆಲವು ಗ್ರಾಮಸ್ಥರು ಅಭಿನಂದನ್ ರವರ ಮೇಲೆ ಮಾಡಿದ ದಾಳಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿದ್ದಂತೆ ಭಾರತೀಯರ ಆಕ್ರೋಶದ ಕಟ್ಟೆ ಹೊಡೆದಿತ್ತು. ಪ್ರತಿಯೊಬ್ಬ ಭಾರತೀಯನು ಅಭಿನಂದನೆ ಅವರು ಸುರಕ್ಷಿತವಾಗಿ ವಾಪಸ್ ಆಗದಿದ್ದರೆ ಪಾಕಿಸ್ತಾನದ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂಬ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಪಾಕಿಸ್ತಾನದ ಸೇನೆಯ ಕೈಯಲ್ಲಿ ಬಂಧನಕ್ಕೆ ಒಳಗಾಗಿದ್ದ ಅಭಿನಂದನ್ ರವರು ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಗ್ರಾಮಸ್ಥರ ಕೈಯಿಂದ ಸೇನೆಗೆ ಹಸ್ತಾಂತರಿಸಿದ ಮರುಕ್ಷಣದಿಂದ ಭಾರತೀಯ ಯೋಧನಿಗೆ ಯಾವುದೇ ತೊಂದರೆಗಳು ಉಂಟಾಗಿಲ್ಲ ಎಂಬುದು ಈ ವಿಡಿಯೋಇಂದ ತಿಳಿದು ಬಂದಿದೆ. ಈಗಾಗಲೇ ಆ ವಿಡಿಯೋ ವನ್ನು ನೀವು ನೋಡಿರುತ್ತೀರಾ

ಪಾಕಿಸ್ತಾನ ಸೇನೆಯು ತನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದೆ, ಭಾರತಕ್ಕೆ ವಾಪಸಾದ ನಂತರ ನಾನು ಈ ಹೇಳಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಮಾತನಾಡಿರುವ ಅಭಿನಂದನ್ ರವರು ಭಾರತೀಯರಲ್ಲಿ ಸ್ವಲ್ಪ ಧೈರ್ಯವನ್ನು ತುಂಬಿಸಿದ್ದಾರೆ.ದೇಶದ ಭದ್ರತೆ ಕುರಿತು ರಾಜಿಯಾಗ ವಿಡಿಯೋ ಈಗಲ್ಗಳೇ ರಿಲೀಸ್ ಆಗಿದೆ, ಆದರೆ ಅಭಿನಂದನೆ ಅವರು ಹೇಗೆ ವಾಪಸಾಗುತ್ತಾರೆ ಎಂಬುದನ್ನು ತಿಳಿಯಲು ಕೆಳಗಡೆ ಓದಿ. ಅಭಿನಂದನ್ ರವರು ಪಾಕಿಸ್ತಾನದ ಸೇನೆಯ ಕೈಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದನ್ನು ಅರಿತ ತಕ್ಷಣ ಭಾರತೀಯ ರಕ್ಷಣಾ ಇಲಾಖೆಯು ಸರಣಿ ಸಭೆಗಳನ್ನು ನಡೆಸಿತು.

ಇದಕ್ಕೆ ನರೇಂದ್ರ ಮೋದಿ ರವರ ಮತ್ತೊಂದು ಕಟ್ಟಾಳು ರಾಜನಾಥ್ ಸಿಂಗ್ ರವರು ಸಹ ಹಾಜರಾಗಿದ್ದರು, ರಾಜನಾಥ್ ಸಿಂಗ್ ರವರು ಭಾರತೀಯ ಮಾಸ್ಟರ್ ಮೈಂಡ್ ಎಂದೇ ಖ್ಯಾತರಾಗಿರುವ ಅಜಿತ್ ದೋವೆಲ್ ರವರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.ಇನ್ನು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಅಜಿತ್ ದೊವೆಲ್ ರವರು ನೇರವಾಗಿ ದಾಳಿಯನ್ನು ಆಯ್ಕೆ ಮಾಡಿದೆ ಮೊದಲು ಪಾಕಿಸ್ತಾನಕ್ಕೆ ಕಾನೂನಾತ್ಮಕವಾಗಿ ಬುದ್ಧಿ ಹೇಳಲು ಪ್ರಯತ್ನ ಪಟ್ಟಿದ್ದಾರೆ.

ಕಳೆದ ಕಾರ್ಗಿಲ್ ಸಮಯದಲ್ಲಿ ಬಳಸಿದ ಕಾನೂನನ್ನು ಈ ಬಾರಿ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಪ್ರಯೋಗಿಸಿ ಅಭಿನವ್ ರವರನ್ನು ವಾಪಸು ಕರೆ ತರಲು ಯೋಜನೆ ರೂಪಿಸಲಾಗಿದೆ. ಕಳೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಂತಹ ಘಟನೆ ನಡೆದಿತ್ತು, ಆಗ ಭಾರತೀಯ ಪೈಲೆಟ್ ಸುರಕ್ಷಿತವಾಗಿ ವಾಪಸ್ ಆಗಿದ್ದರು.ಪುಲ್ವಾಮಾ ದಾಳಿ ಹಾಗೂ ಗಡಿರೇಖೆ ನಿಯಂತ್ರಣ ಉಲ್ಲಂಗಣೆ ಮಾಡಿರುವ ಬಗ್ಗೆ ವಿವರಣೆ ನೀಡುವಂತೆ ಪಾಕಿಸ್ತಾನಕ್ಕೆ ಈಗಾಗಲೇ ಸೂಚಿಸಲಾಗಿದೆ.

ಭಾರತೀಯ ವಾಯುಪಡೆಯ ಪೈಲೆಟ್ ನನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುವ ಹೇಳಿಕೆ ನೀಡಿರುವುದರಿಂದ ಪಾಕಿಸ್ತಾನಕ್ಕೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸೂಚಿಸಲಾಗಿದೆ. ಬುಧವಾರ ಸಂಜೆ ಪಾಕಿಸ್ತಾನದ ಡೆಪ್ಯೂಟಿ ಹೈ ಕಮೀಷನರ್ ಸೈಯದ್ ಹೈದರ್‌ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘನೆ ಮಾಡಿ ಪಾಕಿಸ್ತಾನ ನಡೆಸುತ್ತಿರುವ ದಾಳಿಯನ್ನು ಖಂಡಿಸಲಾಗಿದೆ. ಅಭಿನಂದನ್ ರವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಸಮನ್ಸ್ ಜಾರಿ ಮಾಡಿರುವ ಭಾರತೀಯ ಸರ್ಕಾರವು, ಪಾಕ್ ವಿದೇಶಾಂಗ ಸಚಿವಾಲಯದ ಕದ ತಟ್ಟಿದೆ.

ಮೊದಲು ಪಾಕಿಸ್ತಾನ ದೇಶದ ವಾಯುಪಡೆಯು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘನೆ ಮಾಡಿರುವ ಕಾರಣ ಭಾರತಕ್ಕೆ ಈ ವಿಷಯದಲ್ಲಿ ಜಯಸಿಗುವುದು ಖಚಿತ ವೆನಿಸಿದೆ. ಒಂದು ವೇಳೆ ಅದೇ ನಡೆದಲ್ಲಿ ದೇವರು ಕೋಟ್ಯಾಂತರ ಭಾರತೀಯರನ್ನು ಕೂಗನ್ನು ಬೇಗ ಕೇಳಿಸಿಕೊಂಡಿದ್ದಾನೆ ಅನಿಸುತ್ತದೆ, ಇದು ನಡೆಯದೆ ಇರಲು ಯಾವುದೇ ಅಂಶಗಳು ಕಾಣುತಿಲ್ಲ ಯಾಕೆಂದರೆ ಯೋಜನೆ ರೂಪಿಸಿರುವುದು ಅಜಿತ್ ದೋವಲ್ ಅಂಡ್ ಟೀಮ್. ಪಾಕಿಸ್ತಾನವು ಈಗಾಗಲೇ ಭಾರತೀಯ ವಾಯುಪಡೆಯ ಯೋಧ ನನ್ನ ವಶದಲ್ಲಿ ಇದ್ದಾರೆ ಎಂಬ ಹೇಳಿಕೆ ನೀಡಿರುವ ಕಾರಣ ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿದೆ,

ಆದ ಕಾರಣದಿಂದ ಭಾರತ ಪ್ರತ್ಯುತ್ತರ ನೀಡುವ ವೇಳೆಯಲ್ಲಿ ಪಾಕ್ ಗಡಿಯನ್ನು ಭಾರತೀಯ ಯೋಧ ದಾಟಿದ್ದಾನೆ ಎಂಬ ಅಂಶವನ್ನು ಪ್ರಮುಖವಾಗಿ ಬಳಸಿಕೊಂಡು ಪಾಕಿಸ್ತಾನವನ್ನು ಅಭಿನಂದನ್ ರವರನ್ನು ಬಿಡುಗಡೆಗೊಳಿಸಲು ಒತ್ತಾಯ ಮಾಡಲಾಗಿದೆ, ಒಂದು ವೇಳೆ ಇದಕ್ಕೆ ಒಪ್ಪದೇ ಇದ್ದಲ್ಲಿ ಭಾರತೀಯರ ಆಕ್ರೋಶದ ಕಟ್ಟೆ ಹೊಡೆಯುವುದು ಹಾಗು ಪಾಪಿಗಳ ಸರ್ವಾನಾಶ ಖಚಿತ, ಇದು ಪಾಕಿಸ್ತಾನಕ್ಕೂ ಸಹ ತಿಳಿದಿದೆ.ಆದ ಕಾರಣದಿಂದ ನಮ್ಮೆಲ್ಲರ ಹೆಮ್ಮೆಯ ಸಹೋದರ ಸುರಕ್ಷಿತವಾಗಿ ವಾಪಸ್ ಬರುವುದು ಖಚಿತ…