ಚೀನಾಗೆ ತಕ್ಕ ತಿರುಗೇಟು ನೀಡಲು ಒಂದಾದ ಭಾರತ-ಫ್ರಾನ್ಸ್, ತಡವಾಗಿ ಸೇರಿಕೊಳ್ಳಲಿದೆ ಅಮೆರಿಕ ಹಾಗೂ ರಷ್ಯಾ

ಚೀನಾಗೆ ತಕ್ಕ ತಿರುಗೇಟು ನೀಡಲು ಒಂದಾದ ಭಾರತ-ಫ್ರಾನ್ಸ್, ತಡವಾಗಿ ಸೇರಿಕೊಳ್ಳಲಿದೆ ಅಮೆರಿಕ ಹಾಗೂ ರಷ್ಯಾ

ಪುಲ್ವಾಮಾ ದಾಳಿಗೆ ಭಾರತೀಯ ವಾಯುಪಡೆಯು ಸೇಡನ್ನು ತೀರಿಸಿಕೊಂಡ ನಂತರ ಸುಮ್ಮನಾಗದೆ ಪಾಕಿಸ್ತಾನಕ್ಕೆ ಮತ್ತೊಂದು ಗುದ್ದು ನೀಡಲು ತಯಾರು ಮಾಡಿಕೊಳ್ಳುತ್ತಿದೆ. ಹಲವಾರು ದಿನಗಳಿಂದ ಈ ಗುದ್ದು ನೀಡಲು ಕಾಯುತ್ತಿರುವ ಭಾರತಕ್ಕೆ ಚೀನಾ ದೇಶವು ಅಡ್ಡಗಾಲು ಹಾಕುತ್ತಾ ಬಂದಿತ್ತು ಆದರೆ ಈ ಬಾರಿ ಮೊದಲು ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಿ ತದನಂತರ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಲಿದ್ದಾರೆ ಮೋದಿ.

ಪಾಕಿಸ್ತಾನ ಏನೇ ಮಾಡಿದರೂ ಸರಿ ಎನ್ನುವ ಚೀನಾ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ ಬಾರಿ ಗುದ್ದು ನೀಡಲು ಭಾರತ ತಯಾರಿ ಮಾಡಿಕೊಳ್ಳುತ್ತಿದೆ. ಜೈಶ್ ಇ ಮೊಹಮ್ಮದ್ ಸಂಘಟನೆಯ ಕುಖ್ಯಾತ ಭಯೋತ್ಪಾದಕ ಮಸೂದ್ ನನ್ನು ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ಪಟ್ಟು ಹಿಡಿದು ಕುಳಿತಿತ್ತು ಆದರೆ ಚೀನಾ ದೇಶವು ಅದಕ್ಕೆ ಅಡ್ಡಗಾಲು ಹಾಕಿ ಭಾರತದ ಕನಸಿಗೆ ತಣ್ಣೀರು ಎರಚಿತ್ತು.

ಆದರೆ ಇನ್ನು ಮುಂದೆ ಚೀನಾ ದೇಶದ ಆಟ ನಡೆಯುವುದಿಲ್ಲ ಪ್ರತಿಬಾರಿಯೂ ಮಸೂದ್ ನಿಷೇಧಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಈಗ ಭಾರತಕ್ಕೆ ವಿಶ್ವ ಸಂಸ್ಥೆಯ ಪ್ರಭಾವಿ ರಾಷ್ಟ್ರ ಫ್ರಾನ್ಸ್ ಬಹಿರಂಗವಾಗಿ ಬೆಂಬಲ ಘೋಷಿಸಿದೆ. ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಚೀನಾ ದೇಶವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಪರಿಣಾಮಕಾರಿಯಾಗಿ ತಂತ್ರ ರೂಪಿಸಲು ಭಾರತ ಹಾಗೂ ಫ್ರಾನ್ಸ್ ದೇಶಗಳು ಒಂದಾಗಿವೆ.

ಈಗಾಗಲೇ ಯೋಜನೆ ಸಿದ್ಧವಾಗಿದ್ದು ಮುಂದಿನ ವಿಶ್ವ ಸಂಸ್ಥೆ ಸದನದಲ್ಲಿ ರಾಜ ತಾಂತ್ರಿಕ ಕಾರಣಗಳನ್ನು ಮಂಡಿಸಿ ಭಾರತಕ್ಕೆ ಗೆಲುವನ್ನು ಉಡುಗೊರೆಯನ್ನಾಗಿ ನೀಡಲು ಫ್ರಾನ್ಸ್ ದೇಶವು ಸನ್ನದ್ಧವಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಫ್ರಾನ್ಸ್ ದೇಶ ಬೆಂಬಲ ಘೋಷಿಸಿದ ಬೆನ್ನಲ್ಲೇ ಜರ್ಮನಿ ಹಾಗೂ ಐರೋಪ್ಯ ರಾಷ್ಟ್ರಗಳ ಬೆಂಬಲ ಗಳು ಸಹ ಭಾರತಕ್ಕೆ ಲಭಿಸಿದೆ. ಒಟ್ಟಿನಲ್ಲಿ ಈ ಬಾರಿ ಚೀನಾ ವಿರುದ್ಧ ಭಾರತದ ಗೆಲುವು ಬಹುತೇಕ ಖಚಿತವಾಗಿದೆ. ಕುತಂತ್ರಿ ಚೀನಾ ದೇಶಕ್ಕೆ ಸರಿಯಾದ ಬುದ್ಧಿ ಕಲಿಸಲು ಭಾರತ ದೇಶದ ಬೆಂಬಲಕ್ಕೆ ಹತ್ತು ಹಲವಾರು ರಾಷ್ಟ್ರಗಳ ನಾಯಕರು ನಿಂತಿದ್ದಾರೆ.