ಭಾರತದ ಬೆಂಬಲಕ್ಕೆ ನಿಂತ ಮತ್ತೊಂದು ಮುಸ್ಲಿಂ ರಾಷ್ಟ್ರ: ಪಾಕಿಸ್ತಾನದ ಅಂತ್ಯ ಸನಿಹ??

ಭಾರತದ ಬೆಂಬಲಕ್ಕೆ ನಿಂತ ಮತ್ತೊಂದು ಮುಸ್ಲಿಂ ರಾಷ್ಟ್ರ: ಪಾಕಿಸ್ತಾನದ ಅಂತ್ಯ ಸನಿಹ??

ಉಗ್ರರು ನಡೆಸಿದ ಕೃತ್ಯದಿಂದ ಭಾರತ ದೇಶವು ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಕಿಡಿ ಕಾರಲು ಆರಂಭಿಸಿದೆ. ಉಗ್ರರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವ ಪಾಕಿಸ್ತಾನ ದೇಶಕ್ಕೆ ತಕ್ಕ ಉತ್ತರವನ್ನು ನೀಡಲು ಇಂದು ಭಾರತ ದೇಶವು ಸಜ್ಜಾಗಿದೆ. ಇನ್ನು ಭಾರತದ ಈ ಮಹತ್ವಾಕಾಂಕ್ಷೆಗೆ ವಿಶ್ವದ ಆದಷ್ಟೋ ರಾಷ್ಟ್ರಗಳು ಬೆಂಬಲಕ್ಕೆ ನಿಂತಿವೆ. ಇದರಿಂದ ಪಾಕಿಸ್ತಾನದ ಅಂತ್ಯ ಸನಿಹ ವಾಗಿದೆ ಎಂದು ಅನಿಸುತ್ತಿದೆ.

ನಿನ್ನೆಯಷ್ಟೇ ಅಮೆರಿಕ ರಷ್ಯಾ ಫ್ರಾನ್ಸ್ ಸೇರಿದಂತೆ ಇನ್ನೂ ಹತ್ತು ಹಲವಾರು ರಾಷ್ಟ್ರಗಳು ಭಾರತದ ಪರವಾಗಿ ಧ್ವನಿಯೆತ್ತಿದ್ದರು,ಇಸ್ರೇಲ್ ದೇಶವು ಒಂದು ಹೆಜ್ಜೆ ಮುಂದೆ ಹೋಗಿ ಭಾರತಕ್ಕೆ ಈ ಕೂಡಲೇ ತನ್ನ ಸೇನೆಯನ್ನು ಕಳುಹಿಸಲು ಅಥವಾ ಇಸ್ರೇಲ್ ದೇಶದಿಂದ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ನಾವು ಸಜ್ಜಾಗಿದ್ದೇವೆ ಯುದ್ಧದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

ಈಗ ಒಂದು ಕಾಲದಲ್ಲಿ ಪಾಕಿಸ್ತಾನದ ಆಪ್ತ ರಾಷ್ಟ್ರಎನಿಸಿಕೊಂಡಿದ್ದ  ದೇಶವು ಭಾರತಕ್ಕೆ ಬೆಂಬಲ ನೀಡಿ, ಭಾರತದ ವಿರುದ್ಧ ಕತ್ತಿಮಸೆದರೇ ಏನಾಗುತ್ತದೆ ಎಂಬುದನ್ನು ಸಾರಲು ಹೊರಟಿದೆ. ವಿಶ್ವದ ಬಲಾಡ್ಯ ಮುಸ್ಲಿಂ ರಾಷ್ಟ್ರಗಳಲ್ಲಿ ಒಂದಾಗಿರುವ ಇರಾನ್ ದೇಶವು ಭಾರತ ದೇಶಕ್ಕೆ ಬೆಂಬಲ ಘೋಷಿಸಿದ್ದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೆಲವು ದಿನಗಳ ಹಿಂದೆ ಇದೆ ಉಗ್ರ ಸಂಘಟನೆ ಇರನ್ ದೇಶದಲ್ಲಿಯೂ ಸಹ ಇದೇ ರೀತಿಯ ದಾಳಿಗಳನ್ನು ನಡೆಸಿತು.

ಉಗ್ರರ ಸುರಕ್ಷಿತ ವಾಸಸ್ಥಾನವಾಗಿರುವ ಪಾಕಿಸ್ತಾನವನ್ನು ಉಗ್ರ ಮುಕ್ತಗೊಳಿಸಬೇಕು ಇಲ್ಲವಾದಲ್ಲಿ ಭಾರತದ ಪರ ನಿಂತು, ಎಂತಹ ಹೆಜ್ಜೆ ಬೇಕಾದರೂ ಇಡಲು ನಾವು ಸಿದ್ಧರಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಆಪ್ತ ರಾಷ್ಟ್ರ ದೂರವಾಗಿದ್ದು ನರೇಂದ್ರ ಮೋದಿ ರವರ ರಾಜ ತಾಂತ್ರಿಕತೆಗೆ ಮತ್ತೊಂದು ದೊಡ್ಡ ಜಯ ಲಭಿಸಿದ್ದು ಪಾಕಿಸ್ತಾನ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ.